More

    ಟೈಪಿಂಗ್​, ಷಾರ್ಟ್​ಹ್ಯಾಂಡ್​ ಕಲಿತಿರುವಿರಾ? ಕೋರ್ಟ್​ನಲ್ಲಿವೆ 18 ಹುದ್ದೆಗಳು

    ಮಂಡ್ಯದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಧೀಶರ ಕಚೇರಿಯಲ್ಲಿ ಹಿಂಬಾಕಿ ಇರುವ 7 ಮತ್ತು ಹೊಸದಾಗಿ ಅನುಮತಿಸಲಾದ 1 ಬೆರಳಚ್ಚುಗಾರ ಹಾಗೂ ಶೀಘ್ರಲಿಪಿಗಾರ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಒಟ್ಟು ಹುದ್ದೆಗಳು: 18

    ಹುದ್ದೆ ವಿವರ
    * ಶೀಘ್ರಲಿಪಿಗಾರ (ಸ್ಟೆನೋಗ್ರಾಫರ್) – 10
    ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಮತ್ತು ಕನ್ನಡ ಮತ್ತು ಇಂಗ್ಲಿಷ್ ಶೀಘ್ರಲಿಪಿ ಹಿರಿಯ ಶ್ರೇಣಿ ಪರೀಕ್ಷೆಗಳಲ್ಲಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಮಾಸಿಕ 27,650-52,650 ರೂ. ವೇತನ ಜತೆ ಇತರ ಭತ್ಯೆ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ
    ಪ್ರತಿ ನಿಮಿಷಕ್ಕೆ 120 ಪದಗಳ ವೇಗದಂತೆ 5 ನಿಮಿಷಗಳ ಉಕ್ತಲೇಖನ ತೆಗೆದುಕೊಂಡು 45 ನಿಮಿಷಗಳಲ್ಲಿ ಲಿಪ್ಯಂತರಿಸತಕ್ಕದ್ದು. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    * ಬೆರಳಚ್ಚುಗಾರ (ಟೈಪಿಸ್ಟ್) – 8
    ಎಸ್ಸೆಸ್ಸೆಲ್ಸಿ ತೇರ್ಗಡೆ/ ತತ್ಸಮಾನ ಶಿಕ್ಷಣ. ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಹಿರಿಯ ಶ್ರೇಣಿ ಪರೀಕ್ಷೆಗಳಲ್ಲಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಮಾಸಿಕ 21,400-42,000 ರೂ. ಹಾಗೂ ಇತರ ಭತ್ಯೆಗಳಿರಲಿವೆ.
    ಆಯ್ಕೆ ಪ್ರಕ್ರಿಯೆ: 15 ನಿಮಿಷಗಳ ಉಕ್ತಲೇಖನವನ್ನು ಬೆರಳಚ್ಚು ಪಡಿಸತಕ್ಕದ್ದು, ಇದರಲ್ಲಿ ಉತ್ತೀರ್ಣರಾದವರಿಗೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

    ವಯೋಮಿತಿ
    ಅರ್ಜಿ ಸ್ವೀಕರಿಸಲು ನಿಗದಿಪಡಿಸಲಾದ ಕೊನೇ ದಿನಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ. ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಗರಿಷ್ಠ 40 ವರ್ಷ.

    ಮೀಸಲಾತಿ
    ಹುದ್ದೆಗಳಲ್ಲಿ ಸಾಮಾನ್ಯವರ್ಗ, ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ 2ಎ, 2ಬಿ, 3ಎ, 3ಬಿ, ಗ್ರಾಮೀಣ, ಅಂಗವಿಕಲ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳೆಂದು ಮೀಸಲಾತಿಗಳು ನಿಗದಿಯಾಗಿವೆ.

    ಅರ್ಜಿ ಶುಲ್ಕ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 200 ರೂ., ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 100 ರೂ. ಶುಲ್ಕವಿದ್ದು, ಎಸ್ಸಿ, ಎಸ್ಟಿ, ಪ್ರವರ್ಗ1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರಲಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 3.4.2021
    ಅರ್ಜಿ ಸಲ್ಲಿಕೆ ವಿಳಾಸ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಡ್ಯ ಜಿಲ್ಲೆ, ಮಂಡ್ಯ.

    ಅಧಿಸೂಚನೆಗೆ:
    ಸ್ಟೆನೋಗ್ರಾಫರ್ : https://bit.ly/38cBLsr
    ಟೈಪಿಸ್ಟ್: https://bit.ly/3sVrYyI

    ಮಾಹಿತಿಗೆ: https://districts.ecourts.gov.in/india/karnataka/mandya/recruit

    ಕೃಷಿ, ಅರಣ್ಯ, ತೋಟಗಾರಿಕೆಯಲ್ಲಿ ಪದವೀಧರರೆ? ನಿಮಗಾಗಿ ಕಾದಿವೆ 189 ಸರ್ಕಾರಿ ಹುದ್ದೆಗಳು

    ಸ್ನಾತಕೋತ್ತರ ಪದವೀಧರರಿಗೆ ಭರ್ಜರಿ ಆಫರ್​, ಶಿಕ್ಷಣ ಸಚಿವಾಲಯದ ಓಪನ್ ಸ್ಕೂಲ್‍ನಲ್ಲಿ ಅವಕಾಶ

    ಸಹಕಾರ ಗ್ರಾಹಕರ ಮಹಾಮಂಡಳದಲ್ಲಿ ಗುಮಾಸ್ತ, ಲೆಕ್ಕಿಗ, ಬೆರಳಚ್ಚುಗಾರ… ಇತ್ಯಾದಿ ಹುದ್ದೆಗಳು ಖಾಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts