ಇಂಜಿನಿಯರಿಂಗ್‌ ಪದವೀಧರರಿಗೆ ಭರ್ಜರಿ ಅವಕಾಶ: ಎನ್​ಟಿಪಿಸಿಯಲ್ಲಿ 280 ಹುದ್ದೆಗಳಿಗೆ ಆಹ್ವಾನ

udyoga- thermal
Published on

ನ್ಯಾಷನಲ್​ ಥರ್ಮಲ್​ ಪವರ್​ ಕಾರ್ಪೋರೇಷನ್‌ ಲಿಮಿಟೆಡ್​ (ಎನ್​ಟಿಪಿಸಿ) ಇಂಜಿನಿಯರಿಂಗ್​ ಎಕ್ಸಿಕ್ಯೂಟಿವ್​ ಟ್ರೇನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗೇಟ್​ ಪರೀೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಒಟ್ಟು ಹುದ್ದೆಗಳು: 280

ಎನ್​ಟಿಪಿಸಿ ಲಿಮಿಟೆಡ್​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶಾದ್ಯಂತ ಇರುವ ಯಾವುದೇ ಎನ್​ಟಿಪಿಸಿ ಟಕಕ್ಕೆ ನೇಮಕ ಮಾಡಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಗೇಟ್​ ಪರೀೆಯ ನೋಂದಣಿ ಸಂಖ್ಯೆ ನಮೂದಿಸಿ ಲಾಗಿನ್​ ಆಗಲು ತಿಳಿಸಲಾಗಿದೆ.

ಹುದ್ದೆ ವಿವರ
- ಇಂಜಿನಿಯರಿಂಗ್​ ಎಕ್ಸಿಕ್ಯೂಟಿವ್​ ಟ್ರೇನಿಸ್​
* ಎಲೆಕ್ಟ್ರಿಕಲ್​ - 98
* ಮೆಕ್ಯಾನಿಕಲ್​ - 126
* ಎಲೆಕ್ಟ್ರಾನಿಕ್ಸ್​/ ಇನ್​ಸ್ಟ್ರುಮೆಂಟೇಷನ್​ - 56

ಶೈಕ್ಷಣಿಕ ಅರ್ಹತೆ: ಎಲೆಕ್ಟ್ರಿಕಲ್​/ ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​, ಇನ್​ಸ್ಟ್ರುಮೆಂಟೇಷನ್​ ಆ್ಯಂಡ್​ ಕಂಟ್ರೋಲ್​/ ಪವರ್​ ಸಿಸ್ಟಂ ಆ್ಯಂಡ್​ ಹೈ ವೋಲ್ಟೇಜ್​/ ಪವರ್​ ಎಲೆಕ್ಟ್ರಾನಿಕ್ಸ್​/ ಪವರ್​ ಇಂಜಿನಿಯರಿಂಗ್​, ಮೆಕ್ಯಾನಿಕಲ್​/ ಪ್ರೊಡಕ್ಷನ್​/ ಇಂಡಸ್ಟ್ರಿಯಲ್​ ಇಂಜಿನಿಯರಿಂಗ್​/ ಪ್ರೊಡಕ್ಷನ್​ ಆ್ಯಂಡ್​ ಇಂಡಸ್ಟ್ರಿಯಲ್​ ಇಂಜಿನಿಯರಿಂಗ್​/ ಥರ್ಮಲ್​/ ಮೆಕ್ಯಾನಿಕಲ್​ ಆ್ಯಂಡ್​ ಆಟೋಮೇಷನ್​, ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿಕಮ್ಯುನಿಕೇಷನ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಪವರ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದಿದ್ದು, ಕನಿಷ್ಠ ಶೇ.65 ಅಂಕ (ಮೀಸಲಾತಿ ಅಭ್ಯರ್ಥಿಗಳು ಶೇ.55) ಪಡೆದಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಾಂಕಕ್ಕೆ ಅನುಗುಣವಾಗಿ ಗರಿಷ್ಠ 27 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

ವೇತನ: ಮಾಸಿಕ 40,000-1,40,000 ರೂ. ವೇತನ ಇದ್ದು, ಡಿಎ, ಪ್ರಯಾಣ ಭತ್ಯೆ, ಟರ್ಮಿನಲ್‌ ಸೌಲಭ್ಯ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಗೇಟ್​ -2021ರ ಪರೀೆಯಲ್ಲಿನ ಅಂಕಗಳನ್ನು ಆಧರಿಸಿ ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳ ಶಾರ್ಟ್​ಲಿಸ್ಟ್​ ಸಿದ್ಧಪಡಿಸಲಾಗುತ್ತದೆ.

ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 113 ಸ್ಥಾನ, ಇತರ ಹಿಂದುಳಿದ ಅಭ್ಯರ್ಥಿಗಳಿಗೆ 76, ಆರ್ಥಿಕವಾಗಿ ದುರ್ಬಲವಾಗಿರುವವರಿಗೆ 27, ಎಸ್ಸಿಗೆ 43, ಎಸ್ಟಿಗೆ 21 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

ಭದ್ರತಾ ಬಾಂಡ್​: ಸಂಸ್ಥೆಯಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸುವುದಾಗಿ ಆಯ್ಕೆಯಾದ ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಅಭ್ಯರ್ಥಿಗಳು 5 ಲಕ್ಷ ರೂ. ಹಾಗೂ ಎಸ್ಸಿ, ಎಸ್​ಟಿ, ಅಂಗವಿಲಕ ಅಭ್ಯರ್ಥಿಗಳು 2,50,000 ರೂ. ವಿಮೆಯನ್ನು ಸವಿರ್ಸ್​ ಅಗ್ರಿಮೆಂಟ್​ ಬಾಂಡ್​ ಹೆಸರಲ್ಲಿ ಇಡಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 10.6.2021
ಅಧಿಸೂಚನೆಗೆ: https://bit.ly/3ubmIav
ಮಾಹಿತಿಗೆ: http://www.ntpc.co.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net