ನಿಮ್ಮ ‘ಪರಂ ಸುಂದರಿ’ ಡಾನ್ಸ್‌ನಿಂದ ನನ್ನ ಲೈಫೇ ಹಾಳಾಗೋಯ್ತು: ನಟಿ ಕೃತಿ ಸನೋನ್‌ಗೆ ಅಭಿಮಾನಿಯ ಟ್ವೀಟ್‌

krithi
Published on

ಮುಂಬೈ: ಹಲವು ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟಿಯಂದಿರ ಪೈಕಿ ಬಾಲಿವುಡ್‌​ ಕೃತಿ ಸನೋನ್ ​ಕೂಡ ಒಬ್ಬರು. ಸಿನಿ ರಂಗಕ್ಕೆ ಇವರು ಕಾಲಿಟ್ಟು 7 ವರ್ಷ ಕಳೆದಿದೆ. ಇದಾಗಲೇ ಕೆಲವು ಹಿಟ್‌ ಚಿತ್ರಗಳನ್ನು ನೀಡಿರುವ ಕೃತಿಯೀಗ ಅಭಿಮಾನಿಗಳಲ್ಲಿ ಅದರಲ್ಲಿಯೂ ಯುವಹೃದಯಗಳ ಮೇಲೆ ಲಗ್ಗೆ ಇಟ್ಟಿರುವುದು ‘ಮಿಮಿ’ ಸಿನಿಮಾ ಮೂಲಕ.

ಈ ಚಿತ್ರದಲ್ಲಿ ಬಾಡಿಗೆ ತಾಯಿಯಾಗಿ ನಟಿಸಿರುವ ಕೃತಿ ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಅದರಲ್ಲಿಯೂ ಈ ಚಿತ್ರದಲ್ಲಿ ಪರಂ... ಪರಂ... ಪರಂ... ಸುಂದರಿ ಹಾಡು ಸಿನಿಪ್ರಿಯರ ಬಾಯಲ್ಲಿ ನಲಿದಾಡುತ್ತಿದೆ. ಈ ಹಾಡಿಗೆ ಕೃತಿ ಕೂಡ ಅಷ್ಟೇ ಬಿಂದಾಸ‌ ಆಗಿ ಸ್ಟೆಪ್‌ ಹಾಕಿ ಅಭಿಮಾನಿಗಳ ಹುಚ್ಚೆಬ್ಬಿಸಿದ್ದಾರೆ.

ಆದರೆ ಈ ಹಾಡಿಗೆ ಈಕೆಯ ಅಭಿಮಾನಿಯೊಬ್ಬ ಭಾರಿ ಬೇಸರ ವ್ಯಕ್ತಪಡಿಸಿದ್ದಾನೆ. ನಿಮ್ಮ ಈ ಹಾಡಿನ ನೃತ್ಯದಿಂದ ನನ್ನ ಜೀವನವೇ ಹಾಳಾಗಿಬಿಟ್ಟಿದೆ ಎಂದು ಟ್ವೀಟ್‌ ಮಾಡಿದ್ದಾನೆ ಒಬ್ಬರ ಅಭಿಮಾನಿ. ಇದನ್ನು ಯಾಕೆ ಮಾಡಿದ್ರಿ ಕೃತಿ..? ನನ್ನ ಜೀವನವನ್ನೇಕೆ ಹಾಳು ಮಾಡಿದ್ರಿ..? ಎಂದು ಕೇಳಿದ್ದಾನೆ.

ಇದನ್ನು ನೋಡಿದ ಕೃತಿ ಕೂಡ ‘ಹೌದಾ ಸಾರಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಷ್ಟಕ್ಕೂ ಆಗಿರುವುದು ಏನೆಂದರೆ, ಈ ಅಭಿಮಾನಿಯ ಹೆಸರು ಪರಂ ಚಹ್ಯಾ ಎಂದು. ಈ ಹಾಡು ಕೂಡ ಪರಂ ಸುಂದರಿ ಎಂದು ಇದೆ. ಅದಕ್ಕಾಗಿಯೇ ಈತನ ಸ್ನೇಹಿತರು ಪರಂನ ಸುಂದರಿ ಈಕೆ ಎಂದು ಕಾಲೆಳೆಯುತ್ತಿದ್ದಾರಂತೆ. ಇದನ್ನೇ ಪರಂ ಚಹ್ಯಾ ತಮಾಷೆಯ ರೂಪದಲ್ಲಿ ಕೃತಿ ಅವರಿಗೆ ಟ್ಯಾಗ್‌ ಮಾಡಿ ಬರೆದುಕೊಂಡಿದ್ದಾನೆ.

‘ಬಾಲ್ಯದಲ್ಲಿ ಅನೇಕರು ನನ್ನ ಹೆಸರನ್ನು ಆಡಿಕೊಂಡಾಗಲೂ ನನಗೆ ಏನೂ ಅನಿಸಿರಲಿಲ್ಲ. ಆದರೆ ಯಾವಾಗ ಕೃತಿ ಸನೂನ್​​ರ ಪರಂ ಸುಂದರಿ ಹಾಡು ರಿಲೀಸ್​ ಆಯ್ತೋ ಅಂದಿನಿಂದ ನನಗೆ ಇದೇ ಹಾಡನ್ನು ಹಾಡಿ ಸ್ನೇಹಿತರು ಕಾಲೆಳೆಯುತ್ತಿದ್ದಾರೆ. ಇದನ್ನು ಯಾಕೆ ಮಾಡಿದ್ರಿ ಕೃತಿ.. ನನ್ನ ಜೀವನವನ್ನೇಕೆ ಹಾಳು ಮಾಡಿದ್ರಿ..? ಎಂದು ತಮಾಷೆಯಾಗಿ ಕೇಳಿದ್ದು, ಅದಕ್ಕೆ ಅಷ್ಟೇ ತಮಾಷೆಯಾಗಿ ಕೃತಿ ಫನ್ನಿ ಇಮೋಜಿ ಕೊಟ್ಟು, ಊಪ್ಸ್​.! ಸಾರಿ ಎಂದಿದ್ದಾರೆ. ಈ ಟ್ವೀಟ್‌ಗಳು ಈಗ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಇಲ್ಲಿವೆ ನೋಡಿ ಈ ಟ್ವೀಟ್‌ಗಳು:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net