ಕೈಕೊಟ್ಟ ರಿಯಲ್‌ ಎಸ್ಟೇಟ್‌ ಉದ್ಯಮ: ಇಡೀ ಕುಟುಂಬದ ನಾಶಕ್ಕೆ ಕಾರಣವಾಗೋಯ್ತು ದುಡುಕು ನಿರ್ಧಾರ

realestate
Published on

ಸಂಗಾರೆಡ್ಡಿ (ತೆಲಂಗಾಣ) : ರಿಯಲ್​​ ಎಸ್ಟೇಟ್​​​ ಉದ್ಯಮದಲ್ಲಿ ಅಪಾರ ನಷ್ಟ ಉಂಟಾಗಿರುವ ಕಾರಣ, ದಂಪತಿ ನಡುವೆ ನಡೆದ ಜಗಳ ನಾಲ್ಕು ಮಂದಿಯ ಸಾವಿಗೆ ಕಾರಣವಾಗಿದೆ.

ಉದ್ಯಮಿ ಚಂದ್ರಕಾಂತ್ ​(38), ಲಾವಣ್ಯ (32), ಮಕ್ಕಳಾದ ಪ್ರಥಮ್ ​(6) ಹಾಗೂ ಸರ್ವಜ್ಞಾ(3) ಮೃತಪಟ್ಟಿದ್ದಾರೆ. ಈ ದುರ್ಘಟನೆ ನಡೆದಿರುವುದು ತೆಲಂಗಾಣದ ಸಂಗಾರೆಡ್ಡಿಯಲ್ಲಿ.

ರಿಯಲ್‌ ಎಸ್ಟೇಟ್‌ ಬಿಜಿನೆಸ್‌ನಲ್ಲಿ ನಷ್ಟ ಉಂಟಾಗಿರುವ ಕಾರಣಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿದ್ದ. ಗಂಡ ದಿನವೂ ಈ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಡುತ್ತಿರುವುದನ್ನು ಮನನೊಂದ ಲಾವಣ್ಯ ಅವರು ರಾತ್ರೋರಾತ್ರಿ ತಮ್ಮ ಮಕ್ಕಳನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾರೆ.

ಅವರು ವಾಪಸ್‌ ಬರುತ್ತಾರೆಂದು ಚಂದ್ರಕಾಂತ್‌ ಕಾದಿದ್ದಾರೆ. ಆದರೆ ಅವರಿಗೆ ಕೇಳಿಬಂದದ್ದು, ಪತ್ನಿ ಮತ್ತು ಇಬ್ಬರು ಮಕ್ಕಳ ಸಾವಿನ ಸುದ್ದಿ. ಇದರಿಂದ ಆಘಾತವೊಂಡ ಅವರು, ಕೂಡಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net