More

    ಹಿನ್ನೆಲೆಯೇ ಇಲ್ಲದಿದ್ರೂ ಬೆಂಗಳೂರಿನ ವೈದ್ಯರಿಗೆ ಒಮಿಕ್ರಾನ್‌, ಪತ್ನಿಗೂ ಸೋಂಕು! ಮನೆ ಸುತ್ತಲೂ ಸೀಲ್‌ಡೌನ್‌

    ಬೆಂಗಳೂರು: ಕರೊನಾ ಭೀತಿಯ ನಡುವೆಯೇ ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಒಮಿಕ್ರಾನ್‌ ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ. ನಿನ್ನೆಯಷ್ಟೇ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ಸೇರಿದಂತೆ ವೈದ್ಯರೊಬ್ಬರಲ್ಲಿ ಈ ಸೋಂಕು ಪತ್ತೆಯಾಗಿತ್ತು.

    ಅಚ್ಚರಿಯ ವಿಷಯ ಎಂದರೆ ಬೆಂಗಳೂರಿನ ಆರ್‌ಬಿಐ ಲೇಔಟ್​ನ ವೈದ್ಯರು ಯಾವುದೇ ಸೋಂಕಿತ ವ್ಯಕ್ತಿಯ ಕಾಂಟಾಕ್ಟ್‌ನಲ್ಲಿಯೂ ಇರಲಿಲ್ಲ ಅಥವಾ ಅವರು ದಕ್ಷಿಣ ಆಫ್ರಿಕಾದ ವ್ಯಕ್ತಿಗಳ ಜತೆ ಸಂಪರ್ಕಕ್ಕೂ ಬಂದಿರಲಿಲ್ಲ. ಆದರೂ ಸೋಂಕು ತಗುಲಿರುವುದು ಹೇಗೆ ಎಂಬ ಬಗ್ಗೆ ಆತಂಕ ಸೃಷ್ಟಿಯಾಗಿರುವ ನಡುವೆಯೇ ಇಂದು ಅವರ ಪತ್ನಿಗೆ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಇದು ಒಮಿಕ್ರಾನ್‌ ಹೌದೋ ಅಲ್ಲವೋ ಎಂಬ ಬಗ್ಗೆ ಸ್ಯಾಂಪಲ್‌ ಕಳುಹಿಸಲಾಗಿದೆ.

    ಒಮಿಕ್ರಾನ್‌ ಭೀತಿ ಹರಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ವೈದ್ಯರ ಮನೆಯಿರುವ ಆರ್‌ಬಿಐ ಲೇಔಟ್​ನ 100 ಮೀಟರ್ ರಸ್ತೆಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಸೀಲ್​ಡೌನ್ ಮಾಡಿದೆ. ಈ ಮುಂಚೆ ಕರೊನಾ ಸೋಂಕು ಕಾಣಿಸಿಕೊಂಡ ಮನೆಗಳ ಸುತ್ತಲೂ ಹೇಗೆ ಸೀಲ್‌ಡೌನ್‌ ಮಾಡಲಾಗುತ್ತಿತ್ತೋ ಅದೇ ಮಾದರಿಯಲ್ಲಿ ವೈದ್ಯರ ಮನೆಯ ಸುತ್ತಲೂ ಬ್ಯಾರಿಕೇಡ್, ರೆಡ್​ಟೇಪ್​ ಹಾಕಲಾಗಿದ್ದು ಇದನ್ನು ನಿರ್ಬಂಧಿತ ಪ್ರದೇಶ ಎಂದು ಸೂಚಿಸಲಾಗಿದೆ.

    ಸುರಕ್ಷತೆಯ ದೃಷ್ಟಿಯಿಂದ ಅಕ್ಕಪಕ್ಕದ ಮನೆಯವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಜತೆಗೆ ವೈದ್ಯರು ಕೆಲಸ ಮಾಡುತ್ತಿರುವ ಆಸ್ಪತ್ರೆಯ ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವೈದ್ಯ ದಂಪತಿಯನ್ನು ಚಿಕಿತ್ಸೆಗಾಗಿ ಈ ದಂಪತಿ ಮನೆಯಲ್ಲಿ 10 ಮಂದಿ ವಾಸವಿದ್ದು, ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. 8 ಮಂದಿಯ ವರದಿ ಕೋವಿಡ್ ನೆಗೆಟಿವ್ ಆಗಿದೆ. ಆದರೂ ಅವರನ್ನು ಹೋಮ್ ಐಸೋಲೇಷನ್​ನಲ್ಲಿ ಇರಿಸಲಾಗಿದೆ.

    ಕರೊನಾ ಸೋಂಕು ತಡೆಗಟ್ಟಲು ಈ ಚ್ಯೂಯಿಂಗ್‌ ಗಮ್‌ ತಿನ್ನಿ ಎನ್ನುತ್ತಿದ್ದಾರೆ ಸಂಶೋಧಕರು! ಏನಿದೆ ಇದರಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts