More

    ತೋಟದ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ

    ಸಿದ್ದಾಪುರ: ಮಾಲ್ದಾರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಣಂಗಾಲ ಗ್ರಾಮದ ಕಾಡಂಗಡಿ, ಜನತಾ ಕಾಲನಿ, ಬಾಡಗ ಭಾಗದಲ್ಲಿ ಹಾಡಹಗಲೇ ಕಾಡಾನೆಯೊಂದು ಸಂಚರಿಸಿ ಜನರಲ್ಲಿ ಆತಂಕ ಸೃಷ್ಟಿಸಿದೆ.

    ಶುಕ್ರವಾರ ಬೆಳಗ್ಗೆ 9 ಗಂಟೆಗೆ ಬಡುವಂಡ ಬಿದ್ದಪ್ಪ ಅವರ ತೋಟದ ರಸ್ತೆಯಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಕಾರ್ಮಿಕರು ತೋಟದಿಂದ ಕೆಲಸ ಬಿಟ್ಟು ತೆರಳಿದ್ದಾರೆ.

    ಜನತಾ ಕಾಲನಿ ಬಳಿ ಇಬ್ಬರನ್ನು ಕಾಡಾನೆ ಬೆರೆಸಿದ್ದು, ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಇತ್ತೀಚೆಗೆ ಈ ಭಾಗದಲ್ಲಿ ಕಾಡಾನೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ಒಬ್ಬಂಟಿಯಾಗಿ ಓಡಾಡುವುದು ಕಷ್ಟವಾಗಿದೆ. ಅಲ್ಲದೆ, ತೋಟಗಳಿಗೆ ಲಗ್ಗೆ ಇಟ್ಟು ಕಾಫಿ ಗಿಡಗಳನ್ನು ನಾಶಪಡಿಸುವುದಲ್ಲದೆ, ಫಸಲುಗಳನ್ನು ತುಳಿದು ಹಾಳುಮಾಡುತ್ತಿವೆ.

    ಅರಣ್ಯಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಕಾಡಾನೆಯನ್ನು ಕಾಡಿಗಟ್ಟಲು ಪ್ರಯತ್ನಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts