More

  ಕುವೈತ್​ ಅಗ್ನಿ ಅವಘಡ; 45 ಮೃತದೇಹಗಳೊಂದಿಗೆ ಭಾರತಕ್ಕೆ ಬಂದಿಳಿದ ವಿಮಾನ

  ತಿರುವನಂತಪುರಂ: ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟರಲ್ಲಿ 45 ಜನರನ್ನು ಭಾರತೀಯರು ಎಂದು ಗುರುತಿಸಲಾಗಿತ್ತು. ಮೃತರಲ್ಲಿ ಇಬ್ಬರು ಉತ್ತರ ಪ್ರದೇಶದವರು, 24 ಮಂದಿ ಕೇರಳದವರು, ಏಳು ಮಂದಿ ತಮಿಳುನಾಡಿನವರು ಮತ್ತು ಮೂವರು ಆಂಧ್ರಪ್ರದೇಶದವರು ಎನ್ನಲಾಗಿದೆ. ಮೃತದೇಹಗಳನ್ನು ಮರಳಿ ತರಲು ವಾಯುಪಡೆ ಗುರುವಾರ ರಾತ್ರಿ ಕುವೈತ್‌ಗೆ C-130J ವಿಮಾನವನ್ನು ಕಳುಹಿಸಿತ್ತು.

  ಇದನ್ನು ಓದಿ: “ಶಾದಿ ಕೆ ಡೈರೆಕ್ಟರ್ ಕರಣ್ ಔರ್ ಜೋಹರ್” ನಿರ್ಮಾಪಕರ ವಿರುದ್ಧ ಕರಣ್​​​ ಜೋಹರ್​ ಕೋರ್ಟ್​​ ಮೊರೆ ಹೋಗಿದ್ದೇಕೆ?

  ಭಾರತೀಯ ವಾಯುಪಡೆಯ ವಿಶೇಷ C-130J ವಿಮಾನವು ಶುಕ್ರವಾರ(ಜೂನ್​​ 14) ಬೆಳಗ್ಗೆ 45 ಮೃತ ಭಾರತೀಯರ ಶವಗಳನ್ನು ಹೊತ್ತು ಕೊಚ್ಚಿ ತಲುಪಿರುವುದಾಗಿ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಕೂಡ ಅದೇ ವಿಮಾನದಲ್ಲಿ ಮರಳಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.

  ಮೃತಪಟ್ಟವರಲ್ಲಿ ಹೆಚ್ಚಿನವರು ಕೇರಳದವರೇ ಆಗಿರುವುದರಿಂದ ವಿಮಾನವು ಮೊದಲಿಗೆ ಕೊಚ್ಚಿಯಲ್ಲಿ ಬಂದಿಳಿದೆ. ಇದಾದ ಬಳಿಕ ವಿಮಾನ ದೆಹಲಿಗೆ ಬರಲಿದ್ದು, ಮೃತ ದೇಹಗಳನ್ನು ದೆಹಲಿಯಿಂದ ಆಯಾ ರಾಜ್ಯಗಳಿಗೆ ಹಸ್ತಾಂತರಿಸಲಾಗುವುದು ಎನ್ನಲಾಗಿದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಅಲಿ ಅಲ್-ಯಾಹ್ಯಾ ಹಾಗೂ ಮೊದಲ ಉಪಪ್ರಧಾನಿ ಶೇಖ್ ಫಹಾದ್ ಅವರನ್ನು ಭೇಟಿಯಾಗಿದ್ದಾರೆ. ಅಲ್-ಯಾಹ್ಯಾ ಮತ್ತು ಶೇಖ್ ಫಹಾದ್ ಅವರು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಕುವೈತ್​ ಅಗ್ನಿ ದುರಂತದಲ್ಲಿ ಮೃತಪಟ್ಟ 49 ಮಂದಿಯಲ್ಲಿ 45 ಮಂದಿ ಭಾರತೀಯರಾಗಿದ್ದರೆ, ಮೂವರು ಫಿಲಿಪೈನ್ಸ್‌ನ ನಾಗರಿಕರು ಎಂದು ಕುವೈತ್ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಮೃತರಿಗೆ ಪರಿಹಾರ ನೀಡಲು ಸಿದ್ಧತೆ ನಡೆದಿದೆ. ಕುವೈತ್‌ನ ಉಪಪ್ರಧಾನಿ ಶೇಖ್ ಫಹಾದ್​ ಪರಿಹಾರದ ಮೊತ್ತವನ್ನು ನಿರ್ದಿಷ್ಟಪಡಿಸದೆ ಮೃತರ ಕುಟುಂಬಗಳಿಗೆ ಪರಿಹಾರ ನೀಡಲು ಎಮಿರ್ ಶೇಖ್ ಮೆಶಾಲ್ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೇರಳ ಸರ್ಕಾರವು ಮೃತಪಟ್ಟ ತನ್ನ ರಾಜ್ಯದ ನಾಗರಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೆರವು ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​​)

  ಮೆಗಾಸ್ಟಾರ್​ಗೆ ಜೋಡಿಯಾದ ಸೌತ್​​​​​ ಬ್ಯೂಟಿ ಸಮಂತಾ? ಇಲ್ಲಿದೆ ಕಂಪ್ಲೀಟ್​​ ಡೀಟೇಲ್ಸ್​​

  See also  ಕರೊನಾ ಜತೆ ಹೋರಾಡಿದೆವು, ಒಟ್ಟಿಗೆ ಜಯಿಸಿದೆವು!; ನಿಟ್ಟುಸಿರು ಬಿಟ್ಟ ಕೃಷ್ಣ- ಮಿಲನಾ...

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts