VIDEO: ಏಯ್‌... ನಾನು ಮಂತ್ರಿ... ನನ್ನನ್ನೇ ತಡೀತೀರಾ? ಎಂದ ಸಚಿವ ಮಾಡಿದ್ದಾರೊಂದು ‘ಭಯಾನಕ’ ಪ್ರತಿಜ್ಞೆ

jeevesh
Published on

ಪಟ್ನಾ: ವಿಧಾನಸಭೆಗೆ ಅಧಿವೇಶನಕ್ಕೆ ತೆರಳುತ್ತಿದ್ದ ಬಿಜೆಪಿ ಸಚಿವ ಜೀವೇಶ್‌ ಮಿಶ್ರಾ ಭಾರೀ ಗರಂ ಆಗಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್​ ಹಾಗೂ ಪೊಲೀಸ್​ ವರಿಷ್ಠಾಧಿಕಾರಿಗಳ ಬೆಂಗಾವಲು ಪಡೆಗೆ ದಾರಿ ಮಾಡಿ ಕೊಡುವ ಉದ್ದೇಶದಿಂದ ಇವರ ಕಾರನ್ನು ಪೊಲೀಸರು ತಡೆದದ್ದೇ ಈ ಆಕ್ರೋಶಕ್ಕೆ ಕಾರಣವಾಗಿದೆ.

ಇವರನ್ನು ಪೊಲೀಸರು ತಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಕೆಂಡಾಮಂಡಲವಾಗಿರುವ ಸಚಿವರು ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ. ಅದೇನೆಂದರೆ ತಮ್ಮನ್ನು ತಡೆದಿರುವ ಕರ್ತವ್ಯನಿರತ ಪೊಲೀಸರನ್ನು ಅಮಾನತುಗೊಳಿಸಬೇಕು. ಅಲ್ಲಿಯವರೆಗೆ ನಾನು ವಿಧಾನಸಭೆಗೆ ಕಾಲಿಡುವುದಿಲ್ಲ ಎಂದಿದ್ದಾರೆ!

ನನ್ನನ್ನು ತಡೆದದ್ದು ಏಕೆ? ನಾನು ಸರ್ಕಾರದ ಭಾಗವಾಗಿದ್ದೇನೆ. ಪೊಲೀಸರು ನನ್ನೊಡನೆ ದುರ್ವರ್ತನೆ ತೋರಿದ್ದಾರೆ. ನನ್ನನ್ನು ರಸ್ತೆಯಲ್ಲಿ ಕಾಯುವಂತೆ ಮಾಡಲಾಗಿದೆ. ಈ ಈ ಪೊಲೀಸರು ಅಮಾನತು ಆಗುವವರೆಗೂ ನಾನು ವಿಧಾನಸಭೆಗೆ ಕಾಲಿಡೋದಿಲ್ಲ ಎಂದು ಜೀವೇಶ್​ ಮಿಶ್ರಾ ಹೇಳಿದ್ದಾರೆ. ಪೊಲೀಸರು ಕಾರನ್ನು ತಡೆದಾಗಲೂ ಅವರು ಪೊಲೀಸರೊಂದಿಗೆ ವಾಗ್ವಿವಾದಕ್ಕೆ ಇಳಿದಿದ್ದು, ಸಚಿವರೊಬ್ಬರನ್ನು ತಡೆಯಲು ಎಷ್ಟು ಧೈರ್ಯ ಎಂದು ಪ್ರಶ್ನಿಸಿದ್ದಾರೆ.

ಅದರ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net