

ಚೆನ್ನೈ: ವಿಧಿಯಾಟದ ಮುಂದೆ ಎಲ್ಲವೂ ನಗಣ್ಯ. ಸಾವು ಹೀಗೆಯೇ ಬರಬೇಕು ಎಂದು ಬರೆದಿದ್ದರೆ, ಅದನ್ನು ತಪ್ಪಿಸಲು ಸಾಧ್ಯವೇ ಅಲ್ಲ. ಆದರೂ ಹೀಗೆ ಮಾಡಿದ್ದರೆ ಸಾವನ್ನು ತಪ್ಪಿಸಬಹುದಿತ್ತಾ? ಹಾಗಾಗಿದ್ದರೆ ಅವರು ಬದುಕುಳಿಯುತ್ತಿದ್ದರಾ? ಎಂದೆಲ್ಲಾ ಪ್ರತಿಯೊಬ್ಬರ ಸಾವು ಸಂಭವಿಸಿದಾಗಲೂ ಲೆಕ್ಕಾಚಾರ ಹಾಕುವುದುಂಟು. ಅದೇ ರೀತಿ ನಿನ್ನೆ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ದುರಂತದಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಇತರ 12 ಮಂದಿಯ ಸಾವಿನ ಹಿಂದೆಯೂ ಇಂಥದ್ದೇ ಮಾತು ಇದೀಗ ಕೇಳಿಬರುತ್ತಿದೆ.
ಬಿಪಿನ್ ರಾವತ್ ಅವರು ತಮಿಳುನಾಡಿಗೆ ಬರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅವರು ರಸ್ತೆ ಮಾರ್ಗವಾಗಿಯೇ ಬರುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಮಿಳುನಾಡಿನ ಸಂಚಾರ ವಿಭಾಗದ ಪೊಲೀಸರಿ ಮಾಹಿತಿ ನೀಡಲಾಗಿತ್ತು. ಆದ್ದರಿಂದ ತಮಿಳುನಾಡಿನ ಪೊಲೀಸ್ ಪಡೆ ವಿವಿಐಪಿಗಳಿಗೆ ನೀಡುವ ಝಡ್ ಪ್ಲಸ್ ಭದ್ರತೆಗೆ ವ್ಯವಸ್ಥೆ ಮಾಡಿದ್ದರು. ರಾವತ್ ಅವರು ಕೊಯಮತ್ತೂರಿನಿಂದ ರಸ್ತೆ ಮಾರ್ಗವಾಗಿ ಹೋಗುವ ಬಗ್ಗೆ ಮಾಹಿತಿ ಬಂದಿದ್ದ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿತ್ತು. ಸೂಲೂರಿನಿಂದ ರಸ್ತೆ ಮಾರ್ಗವಾಗಿ ಝೀರೋ ಟ್ರಾಫಿಕ್ನಲ್ಲಿ ತೆರಳಲು ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿತ್ತು.
ಆದರೆ ಅದೇನಾಯಿತೋ ಗೊತ್ತಿಲ್ಲ. ಕೊನೆಕ್ಷಣದಲ್ಲಿ ಹೆಲಿಕಾಪ್ಟರ್ ಏರುವ ನಿರ್ಧಾರ ಮಾಡಿತ್ತು ರಾವತ್ ಮತ್ತವರ ತಂಡ. ಆದ್ದರಿಂದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ ಇಹಲೋಕ ತ್ಯಜಿಸಿದರು! ಬಹುಶಃ ಅವರು ರಸ್ತೆ ಮಾರ್ಗದಲ್ಲಿ ಬಂದಿದ್ದರೆ ಸಾವು ಸಂಭವಿಸುತ್ತಿರಲಿಲ್ಲ ಎನ್ನಲಾಗುತ್ತಿದೆ.
ಹೆಲಿಕಾಪ್ಟರ್ ಕೆಳ ಮಟ್ಟದಲ್ಲಿ ಹಾರಾಟ ನಡೆಸುತ್ತಿದ್ದ ಬಗ್ಗೆ ಮಾಹಿತಿ ದೊರೆತಿರುವ ಕಾರಣ, ಹೆಲಿಕಾಪ್ಟರ್ ಟರ್ನ್ ಪಡೆದು ಹಲಸಿನ ಮರಕ್ಕೆ ಡಿಕ್ಕಿ ಹೊಡೆದು ಕಾಪ್ಟರ್ ಪತನವಾಗಿದೆ. ಈ ಬಗ್ಗೆ ತನಿಖೆ ನಡೆದಿದೆ.