2015ರಲ್ಲಿ ರಾವತ್‌ ಬಳಿ ಸುಳಿದುಹೋಗಿದ್ದ ಜವರಾಯ! ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಜನರಲ್‌...

Bipin Rawat
Published on

ನವದೆಹಲಿ: ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಬಿಪಿನ್‌ ರಾವತ್‌ ಇನ್ನಿಲ್ಲ. ಅವರನ್ನು ಕಳೆದುಕೊಂಡ ಭಾರತದ ಸೇನೆಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಹತ್ತೇ ನಿಮಿಷದಲ್ಲಿ ನಿಗದಿತ ಸ್ಥಳ ತಲುಪಬೇಕಿದ್ದ ಅವರ ಹೆಲಿಕಾಪ್ಟರ್‌ ನೀಲಗಿರಿ ಬೆಟ್ಟ ಪ್ರದೇಶದ ಮರಕ್ಕೆ ಹೆಲಿಕಾಪ್ಟರ್ ಅಪ್ಪಳಿಸಿದೆ. 13 ಮಂದಿಯನ್ನು ಬಲಿ ಪಡೆದುಬಿಟ್ಟಿದೆ.

ಇದೇ ಮೊದಲಲ್ಲ ಬಿಪಿನ್‌ ರಾವತ್‌ ಅವರು 2015ರಲ್ಲಿಯೂ ಇದೇ ರೀತಿಯ ಹೆಲಿಕಾಪ್ಟರ್‌ ಅಪಘಾತಕ್ಕೆ ಒಳಗಾಗಿದ್ದರು. ಸಾವಿನ ಸಮೀಪ ಹೋಗಿಬಂದಿದ್ದರು. ಆದರೆ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದರು. ಅದು 2015ರ ಫೆಬ್ರವರಿ 3. ನಾಗಾಲ್ಯಾಂಡ್‌ನ ದಿಮಾಪುರದಲ್ಲಿ ಚೀತಾ ಹೆಲಿಕಾಪ್ಟರ್ ಟೇಕಾಫ್ ಆಗುತ್ತಿದ್ದಾಗ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತ್ತು. ಸಿಂಗಲ್ ಎಂಜಿನ್ ಹೆಲಿಕಾಪ್ಟರ್ ಮೇಲೆ ಏರಿದ ಸುಮಾರು 20 ಮೀಟರ್ ಎತ್ತರದಲ್ಲಿಯೇ ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸಿತ್ತು. ಎಂಜಿನ್ ವೈಫಲ್ಯದಿಂದಾಗಿ ಅಪಘಾತ ಸಂಭವಿಸಿತ್ತು.

ಆ ಹೆಲಿಕಾಪ್ಟರ್‌ನಲ್ಲಿದ್ದ ರಾವತ್‌ ಸೇರಿದಂತೆ ಪೈಲೆಟ್‌, ಕರ್ನಲ್‌ ಅವರು ಬದುಕುಳಿದಿದ್ದರು. ಆದರೆ ಅವರಿಗೆ ಸ್ವಲ್ಪ ಗಾಯಗಳಾಗಿತ್ತಷ್ಟೇ. ಆ ಸಂದರ್ಭದಲ್ಲಿ ರಾವತ್‌ ಅವರು ಲೆಫ್ಟಿನೆಂಟ್ ಜನರಲ್ ಆಗಿದ್ದರು. ಆದರೆ ಇದೀಗ ರಾವತ್‌ ಅವರನ್ನು ಸಾವು ಬಲಿಪಡೆದುಬಿಟ್ಟಿದೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net