More

    ಸಂಕ್ರಾಂತಿಗೆ ಬರುವೆ ಎಂದಿದ್ದರು! ಏನೂ ಅರಿಯದ ನನ್ನ ಪುಟ್ಟ ಕಂದಮ್ಮಗಳಿಗೆ ಏನೆಂದು ಹೇಳಲಿ… ಯುವ ಯೋಧನ ಪತ್ನಿಯ ಕಣ್ಣೀರು

    ಹೈದರಾಬಾದ್​​: ತಮಿಳುನಾಡಿನ ನೀಲಿಗಿರಿಯ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ 13 ಮಂದಿ ಯೋಧರ ಪೈಕಿ ಆಂಧ್ರಪ್ರದೇಶದ ಲ್ಯಾನ್ಸ್​ ನಾಯ್ಕ​ ಸಾಯಿ ತೇಜ್​ ಕೂಡ ಒಬ್ಬರು. 27 ವರ್ಷದ ಲ್ಯಾನ್ಸ್‌ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಬಿಪಿನ್​ ರಾವತ್​​​ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ನೇಮಕಗೊಂಡವರು.

    ಏಳು ತಿಂಗಳ ಹಿಂದೆ ಈ ಹುದ್ದೆಗೆ ನೇಮಕಗೊಂಡಿದ್ದ ಲ್ಯಾನ್ಸ್​, ಪತ್ನಿ ಹಾಗೂ ಇಬ್ಬರು ಪುಟಾಣಿ ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. 2012ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್​​ಗೆ ಸೇರಿದ್ದ ಇವರಿಗೆ ಮೂರು ವರ್ಷದ ಗಂಡು ಮಗು ಹಾಗೂ ಎರಡು ವರ್ಷದ ಹೆಣ್ಣು ಮಗುವಿದೆ.

    ಕುರಬಾಳ ಮಂಡಲದ ಯಗುವರೆಗಡ ಗ್ರಾಮದಲ್ಲಿರುವ ತಮ್ಮ ಮನೆಗೆ ಕಳೆದ ಸೆಪ್ಟೆಂಬರ್‌ನಲ್ಲಿ ಮನೆಗೆ ಭೇಟಿ ನೀಡಿದ್ದ ಇವರು, ಸಂಕ್ರಾಂತಿಗೆ ಬರುವುದಾಗಿ ಹೇಳಿ ಹೋಗಿದ್ದರು. ಆದರೆ ಈಗ ಶವವಾಗಿ ಮರಳಿದ್ದಾರೆ. ಲ್ಯಾನ್ಸ್‌ ಅವರ ಸಹೋದರ ಮಹೇಶ್​ ಬಾಬು ಕೂಡ ಭಾರತೀಯ ಸೇನೆಯಲ್ಲಿದ್ದು, ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯಗುವರೆಗಡ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಪತ್ನಿ ಭುವನೇಶ್ವರಿಯವರ ಕಣ್ಣೀರನ್ನು ನೋಡಲಾಗುತ್ತಿಲ್ಲ. ಇನ್ನು ಏನೂ ಅರಿಯದ ಇಬ್ಬರು ಪುಟಾಣಿಗಳಿಗೆ ಅಪ್ಪನಿಗೆ ಏನಾಗಿದೆ ಎಂಬುದೇ ತಿಳಿದಿಲ್ಲ. ಅವರಿಗೆ ಏನೆಂದು ಉತ್ತರಿಸಲಿ ಎಂದು ಭುವನೇಶ್ವರಿಯವರು ಕಣ್ಣೀರು ಹಾಕುತ್ತಿದ್ದಾರೆ.

    ಸೇನೆಯಲ್ಲಿ ಇತಿಹಾಸ ಸೃಷ್ಟಿಸಿರುವ ಬಿಪಿನ್ ರಾವತ್‌ ಅಚ್ಚರಿಗಳ ಆಗರ: ನಿವೃತ್ತಿಯ ಹಿಂದಿನ ದಿನವೇ ನಡೆದಿತ್ತು ಕೌತುಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts