ಚೆನ್ನಾಗಿದ್ದ ಪ್ರಿಯಾಂಕಾಗೆ ಮಗುವಾದ್ಮೇಲೆ ಇದೇನಾಗೋಯ್ತು? ಫೋಟೋ ನೋಡಿ ಅಭಿಮಾನಿಗಳು ಶಾಕ್​...

priyanka
Published on

ಮುಂಬೈ: ಬಾಲಿವುಡ್​ ನಟಿ ಪ್ರಿಯಾಂಕಾ ಛೋಪ್ರಾ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ  ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಅದನ್ನು ನೋಡಿ ಅಭಿಮಾನಿಗಳು ಕಂಗಾಲ್​ ಆಗಿದ್ದಾರೆ. ಅದಕ್ಕೆ ಕಾರಣ, ಅವರ ಮುಖದ ತುಂಬಾ ಗಾಯಗಳಾಗಿವೆ.

ಇದನ್ನು ನೋಡಿದ ಹಲವಾರು ಮಂದಿ ಹಲವಾರು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದು, ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಅಮೆರಿಕದ 'ಸಿಟಾಡೆಲ್‌' ಟಿವಿ ಶೋನ ಚಿತ್ರೀಕರಣದಲ್ಲಿ ತೊಡಗಿರುವ ಪ್ರಿಯಾಂಕಾ ಅವರ ಈ ಅವತಾರ ನೋಡಿ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.

ಈ ಫೋಟೋ ಬಗ್ಗೆ ಪ್ರಿಯಾಂಕಾ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಇದು ಅಸಲಿ ಫೋಟೋವಲ್ಲ, ಬದಲಿಗೆ ಮೇಕಪ್​ ಎಂದು ಹಲವರು ಹೇಳುತ್ತಿದ್ದಾರೆ. ಏಕೆಂದರೆ ಈ ಹಿಂದೆ ಕೂಡ ಪ್ರಿಯಾಂಕಾ ಇದೇ ರೀತಿ ಫೋಟೋ ಶೇರ್​ ಮಾಡಿಕೊಂಡಿದ್ದರು. ಆಗಲೂ ಸಿಟಾಡೆಲ್​ ಚಿತ್ರೀಕರಣದ ಸಂದರ್ಭವೇ ಆಗಿತ್ತು. ಆದ್ದರಿಂದ ಈ ಚಿತ್ರದಲ್ಲಿ ಈಕೆಯ ಫೈಟಿಂಗ್​ ಸೀನ್​ ಇರುವುದರಿಂದ ಮುಖದ ಮೇಲೆ ಗಾಯಗಳಾಗಿರುವಂತೆ ಮೇಕಪ್​ ಮಾಡಲಾಗಿದೆ ಎನ್ನಲಾಗುತ್ತಿದೆ. ಇಷ್ಟಾದರೂ ಪ್ರಿಯಾಂಕಾ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಕಳೆದ ಜನವರಿ 15ರಂದು ಪ್ರಿಯಾಂಕಾ ಛೋಪ್ರಾ ಮತ್ತು ನಿಕ್​ ದಂಪತಿಗೆ ಹೆಣ್ಣುಮಗು ಜನಿಸಿದೆ. ಮಗಳಿಗೆ ಈಗ ಮೂರು ತಿಂಗಳಾಗಿದ್ದು, ಪ್ರಿಯಾಂಕಾ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net