ಅರ್ಜುನ್​ weds​ ಮಲೈಕಾ: ಆರು ವರ್ಷಗಳ ಡೇಟಿಂಗ್​ ಅಂತ್ಯ? ವಯಸ್ಸಲ್ಲೇನಿದೆ ಬಿಡಿ ಎಂದ ಹಿರಿಯ ನಟಿ!

malaika
Published on

ಮುಂಬೈ: ಈಗೀಗ ಡೇಟಿಂಗ್​, ಮದುವೆ, ವಿಚ್ಛೇದನ, ತಮಗಿಂತ ಚಿಕ್ಕವರನ್ನು ಮಹಿಳೆಯರು ಮದುವೆಯಾಗುವುದು ಹೊಸತಾಗಿ ಉಳಿದಿಲ್ಲ. ಅದರಲ್ಲಿಯೂ ಚಿತ್ರರಂಗದಲ್ಲಿ ಇವೆಲ್ಲಾ ತೀರಾ ಸಾಮಾನ್ಯವಾಗಿಬಿಟ್ಟಿದೆ. ಅಂಥದ್ದೇ ಇನ್ನೊಂದು ಜೋಡಿ ಖ್ಯಾತನಾಮರಾದ ಮಲೈಕಾ ಅರೋರಾ ಹಾಗೂ ಅರ್ಜುನ್​ ಕಪೂರ್​.

ಇದೇ ವರ್ಷದ ಕೊನೆಗೆ ಹಸೆಮಣೆ ಏರಲು ಈ ಜೋಡಿ ರೆಡಿಯಾಗಿರುವುದಾಗಿ ಸುದ್ದಿಯಾಗಿದೆ. 2016ರಿಂದ ಡೇಟಿಂಗ್​ ನಡೆಸುತ್ತಿರುವ ಈ ಜೋಡಿ ಇದೀಗ ಮದುವೆಯಾಗುತ್ತಿದ್ದಾರಂತೆ. ನವೆಂಬರ್ ಇಲ್ಲವೇ ಡಿಸೆಂಬರ್​ನಲ್ಲಿ ಇವರ ಮದುವೆ ಆಗಲಿದೆ ಎಂದು ಬಿ-ಟೌನ್​ನಲ್ಲಿ ಸುದ್ದಿ ಹರಿದಾಡುತ್ತಿದೆ.

ನಟ ಅರ್ಬಾಜ್​ ಖಾನ್​ ಜತೆ ಮಲೈಕಾ ಅವರ ಮದುವೆ 1998ರಲ್ಲಿ ಆಗಿತ್ತು. ಈ ದಂಪತಿಗೆ ಒಬ್ಬ ಮಗನಿದ್ದಾನೆ. ದಂಪತಿ 2017ರಲ್ಲಿ ಪ್ರತ್ಯೇಕವಾಗಿದ್ದಾರೆ. ಈ ನಡುವೆಯೇ ಅರ್ಜುನ್​ ಕಪೂರ್​ ಜತೆ ಡೇಟಿಂಗ್​ ನಡೆಸುತ್ತಿದ್ದಾರೆ ಮಲೈಕಾ. ಡೇಟಿಂಗ್​ ಮುಗಿದು ಈಗ ಮದುವೆಯ ಬಂಧನಕ್ಕೆ ಬೀಳಲಿದ್ದಾರೆ ಎನ್ನಲಾಗುತ್ತಿದೆ. ಅರ್ಜುನ್ ಕಪೂರ್​​ಗೆ ಇದು ಮೊದಲ ಮದುವೆ. ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮದುವೆಯಾಗುವುದಾಗಿ ಜೋಡಿ ಹೇಳಿಕೊಂಡಿದೆ.

ಅಂದಹಾಗೆ ಮಲೈಕಾಗೆ ಈಗ 48 ವರ್ಷ ವಯಸ್ಸು. ಅರ್ಜುನ್​ ಕಪೂರ್​ಗೆ 36 ವರ್ಷ. ಇಬ್ಬರ ನಡುವೆ 12 ವರ್ಷ ವಯಸ್ಸಿನ ಅಂತರವಿದೆ. ಇದಾಗಲೇ ಚಿತ್ರರಂಗದ ಹಲವಾರು ಮಂದಿ ಈ ಟ್ರೆಂಡ್​ ಶುರು ಮಾಡಿದ್ದಾರೆ. ಅವರ ಸಾಲಿನಲ್ಲಿ ಈ ಜೋಡಿಯೂ ಸೇರ್ಪಡೆಯಾಗಿದೆ. ವಯಸ್ಸು 48 ಆದರೂ ಮಲೈಕಾ ಇನ್ನೂ ಝೀರೋ ಫಿಗರ್​ ಆಗಿದೆ ಇದ್ದಾರೆ. ಸದಾ ಸಾಧ್ಯವಾದಷ್ಟು ಚಿಕ್ಕ ದಿರಿಸಿನಲ್ಲಿಯೇ ಕಾಣಿಸಿಕೊಳ್ಳುವ ಈ ನಟಿ, ಡೇಟಿಂಗ್​ನಲ್ಲಿ ಫೇಮಸ್​. ವಯಸ್ಸಿನಲ್ಲಿ ಏನಿದೆ ಬಿಡಿ ಎನ್ನುತ್ತಿದ್ದಾರಂತೆ ಮಲೈಕಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net