More

    ಬಾಲಿವುಡ್​ ಬೆಡಗಿಯರ ಬುಟ್ಟಿಗೆ ಬೀಳಿಸಿ ಕಂಬಿ ಎಣಿಸ್ತಿರೋ ಈತನಿಗೆ ನೆನಪಾಗ್ತಿದ್ದಾಳಂತೆ ಪತ್ನಿ! ಜೈಲಲ್ಲೇ ಉಪವಾಸ

    ನವದೆಹಲಿ: ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಸೇರಿದಂತೆ ಹಲವಾರು ನಟಿಯರು, ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿಗಳ ಗಿಫ್ಟ್​ ಕೊಟ್ಟು ಬುಟ್ಟಿಗೆ ಬೀಳಿಸಿಕೊಂಡದ್ದೂ ಅಲ್ಲದೇ ಸುಮಾರು 200 ಕೋಟಿ ರೂಪಾಯಿ ವಂಚನೆ ಮಾಡಿ ಕಂಬಿ ಎಣಿಸುತ್ತಿರುವ ಸುಕೇಶ್ ಚಂದ್ರಶೇಖರ್ ಈಗ ಜೈಲಿನಲ್ಲಿ ಉಪವಾಸ ಕುಳಿತಿದ್ದಾನೆ. ಇದಕ್ಕೆ ಕಾರಣ ತನಗೆ ತನ್ನ ಪತ್ನಿಯ ಬಳಿ ಕರೆದುಕೊಂಡು ಹೋಗುತ್ತಿಲ್ಲ ಎಂದು!

    ಸುಕೇಶ್​ ಚಂದ್ರಶೇಖರ್​ ಜತೆ ಈತನ ಪತ್ನಿ ಲೀನಾ ಮರಿಯಾ ಪೌಲ್​ ಕೂಡ ಜೈಲಿನಲ್ಲಿ ಇದ್ದಾಳೆ. ವಂಚನೆ ಮಾಡಲು, ನಟಿಯರನ್ನು ಬುಟ್ಟಿಗೆ ಹಾಕಿಕೊಳ್ಳಲು ಪತಿಗೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡಿರುವ ಆರೋಪ ಮೇಲೆ ಲೀನಾ ಕೂಡ ಜೈಲಿನಲ್ಲಿದ್ದು, ಆಕೆಯನ್ನು ಬೇರೆ ಕಡೆ ಇಡಲಾಗಿದೆ. ಇದೀಗ ಆಕೆಯನ್ನು ನೋಡಬೇಕು ಎಂಬ ಪಟ್ಟು ಹಿಡಿದಿದ್ದಾನೆ ಸುಕೇಶ್​.

    ಜೈಲು ಸೇರುತ್ತಿದ್ದಂತೆಯೇ ಅನಾರೋಗ್ಯಪೀಡಿತನಾಗಿರುವ ಸುಕೇಶ್​ನಿಗೆ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆತ ಉಪವಾಸ ಕುಳಿತಿರುವ ಕಾರಣ, ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ. ವಿಶೇಷ ತಂಡವು ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದು, ಉಪವಾಸ ಕೈಬಿಡುವಂತೆ ಮನವೊಲಿಸುತ್ತಿದೆ. ಆದರೆ ಪತ್ನಿಯ ಬಳಿ ಕರೆದುಕೊಂಡು ಹೋಗುವವರೆಗೂ ಉಪವಾಸ ಕೈಬಿಡುವುದಿಲ್ಲ ಎಂದು ಸುಕೇಶ್​ ಪಟ್ಟು ಹಿಡಿದಿದ್ದಾನೆ ಎನ್ನಲಾಗಿದೆ.

    ಆದರೆ ಜೈಲಿನ ನಿಯಮಗಳ ಪ್ರಕಾರ ಈ ರೀತಿ ಅನುಮತಿ ನೀಡುವುದು ಕಷ್ಟ. ನಿಯಮದ ಪ್ರಕಾರ, ಒಂದು ತಿಂಗಳಿಗೆ ಎರಡು ಬಾರಿ ಮಾತ್ರ ಒಳ ಜೈಲಿನ ಕೈದಿಗಳ ಭೇಟಿಗೆ ಅನುವು ಮಾಡಿಕೊಡಲಾಗುತ್ತದೆ. ಆದರೆ ಇದಾಗಲೇ ಸುಕೇಶ್​ ಪದೇ ಪದೇ ಪತ್ನಿಯನ್ನು ಭೇಟಿಯಾಗುತ್ತಲೇ ಇದ್ದು, ಮತ್ತೆ ಅದೇ ಪಟ್ಟು ಹಿಡಿದು ಕುಳಿತಿದ್ದಾನೆ. ಈ ಹಿಂದೆಯೂ ಇದೇ ನಾಟಕ ಮಾಡಿದ್ದ. ಆಗ ಪತ್ನಿಯನ್ನು ನೋಡಲು ಅವಕಾಶ ಸಿಕ್ಕಿದ್ದರಿಂದ ಈಗ ಮತ್ತೆ ಅದನ್ನೇ ಶುರು ಹಚ್ಚಿಕೊಂಡಿದ್ದಾನೆ. ಉಪವಾಸದಿಂದಾಗಿ ಸುಕೇಶ್​ 5 ಕೆ.ಜಿ ತೂಕ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಅಂದಹಾಗೆ ಸುಕೇಶ್​ ವಿವಿಧ ಉದ್ಯಮಿಗಳಿಗೆ ಅವರಿಗೆ ತಿಳಿಯದಂತೆ 200 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ಈ ವಂಚನೆ ಹಣದಲ್ಲಿ ನಟಿಯರು ಹಾಗೂ ಸೆಲೆಬ್ರಿಟಿಗಳಿಗೆ ದುಬಾರಿ ಗಿಫ್ಟ್​ ಕೊಟ್ಟು ಅವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ.

    ಈತನ ಅತಿ ಸಮೀಪದ ನಿಕಟವರ್ತಿಯಾಗಿದ್ದ ಹಲವು ಯುವತಿಯರ ತನಿಖೆ ನಡೆಸಿದ್ದಾಗ ಸಿಕ್ಕಿದ್ದು ನಟಿ ಜಾಕ್ವೆಲಿನ್​. ತನಿಖೆಯ ಭಾಗವಾಗಿ ಜಾಕ್ವೆಲಿನ್​ ಅವರ ಆಸ್ತಿಯನ್ನು ತನಿಖಾಧಿಕಾರಿಗಳು ಇದಾಗಲೇ ಜಪ್ತಿ ಮಾಡಿದ್ದಾರೆ. 7.27 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಹಲವಾರು ಕೋಟಿ ರೂಪಾಯಿ ಆಸ್ತಿ ಜಪ್ತಿ ಮಾಡಿದ್ದಾರೆ.

    ಜಿಮ್ ಉಡುಗೆಗಾಗಿ ಗುಚಿ ಬಟ್ಟೆಗಳು, ಶೂಗಳು, ರೋಲೆಕ್ಸ್ ವಾಚ್, 15 ಜೋಡಿ ಕಿವಿಯೋಲೆಗಳು, 5 ದುಬಾರಿ ಬ್ಯಾಗ್ಗಳು, ಹರ್ಮ್ಸ್ ಬಳೆಗಳು ಮತ್ತು ಎಲ್ವಿ ಬ್ಯಾಗ್​ಗಳು ಈ ಐಷಾರಾಮಿ ಪಟ್ಟಿಯಲ್ಲಿ ಸೇರಿವೆ. 52 ಲಕ್ಷ ರೂಪಾಯಿ ಮೌಲ್ಯದ ಕುದುರೆ, 9 ಲಕ್ಷ ಮೌಲ್ಯದ ಪರ್ಷಿಯನ್ ಬೆಕ್ಕು, ರತ್ನಗಳಿಂದ ಕೂಡಿದ ಕಿವಿಯೋಲೆಗಳು ಮತ್ತು ಹರ್ಮ್ಸ್ ಬ್ರೇಸ್ಲೆಟ್ ಸೇರಿದಂತೆ 52 ಲಕ್ಷ ಮೌಲ್ಯದ ಕುದುರೆ ಪಡೆದಿರುವ ಬಗ್ಗೆ ಜಾಕ್ವೆಲಿನ್​ ಒಪ್ಪಿಕೊಂಡಿದ್ದಾರೆ.

    15 ಮಂದಿ ಅಕೌಂಟ್‌ಗೆ ಎಸ್‌ಬಿಐನಿಂದ 1.5 ಕೋಟಿ ರೂ: ಮೋದಿ ಕೊಟ್ಟರೆಂದು ಕುಣಿದಾಡಿದ ಗ್ರಾಹಕರು- ಆಗಿದ್ದೇನು?

    ಕಣ್ಣೆದುರೇ ಮಗನ ಕೊಲೆಯಾದರೂ ಸಿಗಲಿಲ್ಲ ನ್ಯಾಯ: ದಯಾಮರಣಕ್ಕೆ ಕೋರಿದ ಮೈಸೂರು ಕುಟುಂಬ

    ಬೆಂಗಳೂರಿನ ಬೈಕರ್​ ರಾಜಸ್ಥಾನದಲ್ಲಿ ಸಾವು: ಕೇಸ್​ ಕ್ಲೋಸ್​ ಎನ್ನುವಷ್ಟರಲ್ಲೇ ಪತ್ನಿಯತ್ತ ಬೊಟ್ಟು ಮಾಡಿದ ಹೆಲ್ಮೆಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts