

ಉತ್ತರ: ನೀವು ಕೂಡಲೇ ವಕೀಲರನ್ನು ಸಂಪರ್ಕಿಸಿ ನಿಮ್ಮ ಅಣ್ಣನ ವಿರುದ್ಧ ವಿಭಾಗದ ದಾವೆ ಹಾಕಿ. ನಿಮ್ಮ ತಂದೆ ಬಿಟ್ಟು ಹೋದ ಎಲ್ಲ ಆಸ್ತಿಗಳನ್ನೂ ಸೇರಿಸಿ ದಾವೆ ಹಾಕಿ. ನಿಮ್ಮ ಅಣ್ಣ ಮತ್ತು ತಾಯಿ ಸೇರಿ ಮಾರಿದ ಹೊಲವನ್ನು ಕ್ರಯಕ್ಕೆ ಪಡೆದವರನ್ನೂ ದಾವೆಯಲ್ಲಿ ಪಾರ್ಟಿಮಾಡಿ. ಆ ಮಾರಾಟ ನಿಮ್ಮ ಹಕ್ಕನ್ನು ಬಂಧಿಸುವುದಿಲ್ಲ ಎನ್ನುವ ಹಕ್ಕು ಘೊಷಣೆಯನ್ನೂ ನೀವು ಕೇಳಬಹುದು.
ನಿಮಗೆ ವಿಷಯ ಯಾವಾಗ ತಿಳಿಯಿತು ಎನ್ನುವುದನ್ನೂ ದಾವೆಯಲ್ಲಿ ಬರೆಯಿರಿ. ನಿಮ್ಮ ಭಾಗ ನಿಮಗೆ ಸಿಗುತ್ತದೆ. ಕೆಲವೊಮ್ಮೆ ಮಾರಾಟ ಮಾಡಿದ ಆಸ್ತಿ ಬಿಟ್ಟು ಉಳಿದ ಆಸ್ತಿಯಲ್ಲಿ ನಿಮಗೆ ಹೆಚ್ಚಿನ ಭಾಗ ಕೊಡುವ ಸಾಧ್ಯತೆಯೂ ಇರುತ್ತದೆ. ದಾವೆಯಲ್ಲಿ ನಿಮ್ಮ ಅಣ್ಣನಿಗೆ ನೋಟಿಸು ಜಾರಿ ಆದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಮಧ್ಯಸ್ಥಿಕೆಯಲ್ಲಿ ನಿಮ್ಮ ನಿಮ್ಮಲ್ಲಿ ಏನಾದರೂ ಒಪ್ಪಂದ ಆಗಲೂ ಬಹುದು.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/