

ಉತ್ತರ: ನ್ಯಾಯಾಲಯದಲ್ಲಿ ನಿಮ್ಮ ತಂದೆ ಆಸ್ತಿಯನ್ನು ಮಾರಾಟ ಮಾಡಬಾರದೆನ್ನುವ ತಡೆ ಆಜ್ಞೆ ಇರುವಾಗ , ನಿಮ್ಮ ತಂದೆ ಮಾರಾಟ ಮಾಡುವುದು ತಪ್ಪಾಗುತ್ತದೆ. ಅದಕ್ಕೆ ಕೆಲವೊಮ್ಮೆ ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ. ಹೀಗಾಗಿ ನಿಮ್ಮ ಈಗ ಆಸ್ತಿಯನ್ನು ಮಾರಾಟ ಮಾಡುವುದರಲ್ಲಿ ಅರ್ಥವಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ಆಸ್ತಿಗಳನ್ನು ಮಾರುವುದನ್ನು ಮತ್ತು ಕೊಳ್ಳುವುದನ್ನು ತಪ್ಪಿಸಿದರೆ ಒಳ್ಳೆಯದು. ಆದರೆ, ಪ್ರಕರಣ ಬಾಕಿ ಇರುವಾಗ ಆಸ್ತಿ ಮಾರಾಟ ಮಾಡಲೇ ಬಾರದು ಎಂದು ಕಾನೂನಿನಲ್ಲಿ ಇಲ್ಲ. ತಡೆ ಆಜ್ಞೆ ಇಲ್ಲದೇ ಹೋದರೆ ಮಾರಲೂ ಬಹುದು. ಆದರೆ , ಪ್ರಕರಣ ಬಾಕಿ ಇರುವಾಗ ಯಾವುದಾದರೂ ಆಸ್ತಿಯನ್ನು ಕೊಂಡುಕೊಂಡರೆ, ಪ್ರಕರಣದಲ್ಲಿ ಆಗುವ ತೀರ್ಪಿಗೆ ಕ್ರಯದ ಸಿಂಧುತ್ವ ಒಳಪಟ್ಟಿರುತ್ತದೆ. ಟ್ರಾನ್ಸ್ಪರ್ ಆಫ್ ಪ್ರಾಪರ್ಟಿ ಕಾಯ್ದೆಯ ಸೆಕ್ಷನ್ 52 ಈ ಬಗ್ಗೆ ತಿಳಿಸುತ್ತದೆ.
ನಿಮ್ಮ ವಿಷಯದಲ್ಲಿ ನಿಮ್ಮ ತಂದೆಗೆ ದಾವೆ ಬಾಕಿ ಇರುವ ವಿಷಯವೇ ತಿಳಿದಿರಲಿಲ್ಲ ಎನ್ನುವುದು ಒಂದು ಅಂಶ. ನಿಮ್ಮ ಕ್ರಯದಾರರು ಮತ್ತು ಅವರ ಕುಟುಂಬದವರ ಮಧ್ಯೆ ಇರುವ ವಿಭಾಗದ ದಾವೆ ತೀರ್ಮಾನ ಆದಾಗ, ನಿಮಗೆ ಮಾರಿದ ಆಸ್ತಿ ನಿಮಗೆ ಕ್ರಯಮಾಡಿದವರ ಸ್ವಯಾರ್ಜಿತ ಆಸ್ತಿ ಎಂದಾದರೆ ನಿಮ್ಮ ತಂದೆಗೆ ಆಗಿರುವ ಕ್ರಯ ಊರ್ಜಿತ ಆಗುತ್ತದೆ. ಹಾಗಲ್ಲದೆ ಅದೂ ಸಹ ಒಟ್ಟು ಕುಟುಂಬದ ಆಸ್ತಿ ಎಂದಾದರೆ, ಆಗ ದಾವೆ ಡಿಕ್ರೀ ಆದ ಮೇಲೆ ಎಫ್.ಡಿ.ಪಿಯಲ್ಲಿ ನಿಮ್ಮ ತಂದೆ ಅರ್ಜಿ ಸಲ್ಲಿಸ ಬಹುದು.
ನೀವು ಕೊಂಡ ಆಸ್ತಿಯನ್ನು ನಿಮ್ಮ ಕ್ರಯದಾರರ ಭಾಗಕ್ಕೆ ತೆಗೆದು, ಅದನ್ನು ತದನಂತರ ನಿಮಗೆ ಸರಿಹೊಂದಿಸುವಂತೆ ಕೇಳಿಕೊಳ್ಳಬಹುದು. ಒಟ್ಟಿನಲ್ಲಿ ನಿಮ್ಮ ತಂದೆಯ ಕ್ರಯಪತ್ರದ ಸಿಂಧುತ್ವ ಹಾಲೀ ಬಾಕೀ ಇರುವ ವಿಭಾಗದ ಕೇಸಿನ ತೀರ್ಪಿನ ಮೇಲೆ ಆಧಾರ ಪಟ್ಟಿರುತ್ತದೆ. ಈ ಬಗ್ಗೆ ಸುಪ್ರೀಂ ಕೋರ್ಟಿನ ಮಧುಕರ್ ನಿವೃತ್ತಿ ಜಗ್ತಾಪ್ ಮತ್ತು ಇತರರು ವಿರುದ್ಧ ಪ್ರಮೀಳಾ ಬಾಯಿ ಚಂದೂಲಾಲ್ ಪರಂದೇಕರ್ ಮತ್ತು ಇತರರು ಎ.ಐ.ಆರ್. 2019 ಎಸ್.ಸಿ. 4252 ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/