More

    ಮಂಚದಲ್ಲೂ ಪತ್ನಿಗೆ ಫೋನ್​ ಬೇಕು, ಲೈಂಗಿಕ ಸುಖವೇ ಇಲ್ಲ- ಡಿವೋರ್ಸ್​ ಕೇಸ್​ ಹಾಕಬಹುದಾ?

    ಮಂಚದಲ್ಲೂ ಪತ್ನಿಗೆ ಫೋನ್​ ಬೇಕು, ಲೈಂಗಿಕ ಸುಖವೇ ಇಲ್ಲ- ಡಿವೋರ್ಸ್​ ಕೇಸ್​ ಹಾಕಬಹುದಾ? ನನ್ನ ಮದುವೆಯಾಗಿ ಒಂದು ವರ್ಷವೂ ಆಗಿಲ್ಲ. ನನ್ನ ಹೆಂಡತಿಯ ಅಪ್ಪ ಅಮ್ಮ ಬಂದು ನನ್ನ ಮೇಲೆ ಧಮಕಿ ಹಾಕಿ ಅವಳನ್ನು ತವರಿಗೆ ಕರೆದುಕೊಂಡು ಹೋಗಿದ್ದಾರೆ. ನಾನು ನನ್ನ ಸ್ನೇಹಿತನ ಹೆಂಡತಿಯ ಜೊತೆ ಇರುವ ಫೋಟೋ ತೋರಿಸಿ ನನಗೆ ಅನೈತಿಕ ಸಂಬಂಧ ಇದೆ ಎಂದು ಪುಕಾರು ಎಬ್ಬಿಸಿ ನನ್ನ ಮಾನ ಮರ್ಯಾದೆ ಹಾಳು ಮಾಡಿದ್ದಾಳೆ. ಇಲ್ಲಿ ಇದ್ದಾಗಲೂ ಯಾವಾಗಲೂ ಮೊಬೈಲ್​ನಲ್ಲಿ ಮುಳುಗಿರುತ್ತಾಳೆ. ಮಲಗುವಾಗಲೂ ಮೊಬೈಲ್​ ಬೇಕು. ತಿಂಗಳಲ್ಲಿ 15-20 ದಿನ ರಕ್ತ ಸ್ರಾವ ಆಗುತ್ತಿರುತ್ತೆ. ಹೀಗಾಗಿ ಲೈಂಗಿಕ ಸುಖವೂ ನನಗೆ ಇಲ್ಲ. ಇದೇ ಕಾರಣಕ್ಕೆ ನಾನು ಅವಳಿಗೆ ವಿಚ್ಛೇದನ ಕೊಡಬಹುದೇ?

    ಉತ್ತರ: ಮದುವೆ ಆದ ಒಂದು ವರ್ಷದ ಒಳಗೆ ವಿಚ್ಛೇದನದ ಅರ್ಜಿ ಹಾಕುವಂತಿಲ್ಲ. ಕೇವಲ ವಿಶೇಷ ಸನ್ನಿವೇಶಗಳು ಇದ್ದಾಗ ಮಾತ್ರ ನ್ಯಾಯಾಲಯದ ಅನುಮತಿ ಪಡೆದು ವಿಚ್ಛೇದನಕ್ಕೆ ಅರ್ಜಿ ವರ್ಷದ ಒಳಗೇ ಹಾಕಬಹುದು. ಕೆಲವು ತಿಂಗಳ ಸಂಸಾರದಲ್ಲಿ , ತಪ್ಪು ಕಲ್ಪನೆಗಳಿಂದ ಬಂದ ಭಿನ್ನಾಭಿಪ್ರಾಯಗಳ ಕಾರಣದಿಂದ , ವಿವಾಹ ವಿಚ್ಛೇದನ ಡೆಯುವುದಕ್ಕೆ ಮುಂದಾಗುವುದು ಒಳ್ಳೆಯದಲ್ಲ. ನೀವು ಹೇಳಿದ ಕಾರಣಗಳ ಆಧಾರದ ಮೇಲೆ ವಿಚ್ಛೇದನ ಸಿಗುವುದೂ ಕಷ್ಟ. ಬದಲಿಗೆ ನೀವು , ನಿಮ್ಮ ತಾಲ್ಲೂಕಿನ ಮಧ್ಯಸ್ಥಿಕೆ ಕೇಂದ್ರಕ್ಕೆ ʼ ನಿಮ್ಮಿಬ್ಬರ ಮಧ್ಯೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ ಮಾಡ ಬೇಕುʼ ಎಂದು ಅರ್ಜಿ ಕೊಡಿ.

    ಅಲ್ಲಿ ನೀವು ಇಬ್ಬರೂ ಕೂತು ಮಾತಾಡಿದಾಗ ಸಮಸ್ಯೆ ಬಗೆಹರಿಯ ಬಹುದು. ಆಕೆಯೂ ಒಪ್ಪಿದರೆ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಇಲ್ಲದಿದ್ದರೆ, ಇಬ್ಬರೂ ಹೇಗೆ ಕೂಡಿ ಬಾಳಬೇಕು ಎನ್ನುವುದರ ವಿಷಯವಾಗಿಯೂ ಒಪ್ಪಂದಕ್ಕೆ ಬರಬಹುದು. ಅವಳ ರಕ್ತಸ್ರಾವದ ವಿಷಯದ ಆಧಾರದಿಂದ ನಿಮಗೆ ವಿಚ್ಛೇದನ ಸಿಗಲಾರದು.

    ತಜ್ಞ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆದು ಆರೋಗ್ಯಕರ ದೈಹಿಕ ಸಂಬಂಧವನ್ನು ಮುಂದುವರೆಸಬಹುದು. ನಿಮ್ಮ ಬಗ್ಗೆ ಆಕೆಗೆ ಇರುವ ಅನುಮಾನವನ್ನು ಸಮಾಧಾನ ಚಿತ್ತದಿಂದ ಬಗೆಹರಿಸಿ. ಬೇಕಿದ್ದರೆ ವಿವಾಹ ಸಂಧಾನಕಾರರ/ ಮ್ಯಾರೇಜ್‌ ಕೌನ್ಸೆಲರ್‌ ಸಹಾಯವನ್ನೂ
    ಪಡೆಯಿರಿ. ಆತುರ ಪಟ್ಟು ವಿಚ್ಛೇದನ ಪಡೆಯಲು ಮುಂದಾಗ ಬೇಡಿ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ   https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಪತಿಗೆ ಇಷ್ಟವಿಲ್ಲದಿದ್ದರೆ ತಂಗಿಯ ಮಗುವನ್ನು ನಾನೊಬ್ಬಳೇ ದತ್ತು ಪಡೆಯಬಹುದೆ?

    ಕೇಸು ಇದ್ದದ್ದು ತಿಳಿಯದೇ ಜಮೀನು ಕೊಂಡೆವು- ಈಗ ಆಸ್ತಿಯಲ್ಲಿ ಯಾವ ಹಕ್ಕೂ ಇಲ್ಲವೆ?

    ವಿಚ್ಛೇದನವಾಗಿದೆ; ಮಕ್ಕಳು, ಅಪ್ಪ- ಅಮ್ಮ ಇಲ್ಲದಿದ್ದರೆ ನನಗೆ ಆಸ್ತಿ ಸಿಗತ್ತಾ?

    ನನ್ನನ್ನು ತವರಿಗೆ ದಬ್ಬಿದ್ದು ವಾಪಸ್‌ ಕರೆಸಿಕೊಳ್ಳುತ್ತಿಲ್ಲ- ಕೇಸ್ ಹಾಕದೇ ಪತಿಯನ್ನು ಸೇರುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts