ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ವಿಕೆಟ್ಗಳ ಸೋಲು ಕಂಡಿದ್ದು, ಐಪಿಎಲ್ನಲ್ಲಿನ ತನ್ನ ಹೊಸ ಅಧ್ಯಾಯವನ್ನು ಸೋಲಿನೊಂದಿಗೆ ಮುಗಿಸಿದೆ. ಇನ್ನೂ ಪಂದ್ಯದ ಬಳಿಕ ಮಾತನಾಡಿದ ಮಾಜಿ ನಾಯಕ, ಆರೆಂಜ್ ಕ್ಯಾಪ್ ಹೋಲ್ಡರ್ ವಿರಾಟ್ ಕೊಹ್ಲಿ ಹಲವು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಈ ಕುರಿತು ಮಾತನಾಡಿದ ವಿರಾಟ್, ಎಲ್ಲವನ್ನೂ ಕಳೆದುಕೊಂಡಾಗ ಸ್ವಾಭಿಮಾನಕ್ಕಾಗೊಇ ಹೋರಾಡಿದ ಆರ್ಸಿಬಿ ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್ ಪ್ರವೇಶಿಸಿತ್ತು. ಪ್ರತಿ ಪಂದ್ಯ ಆಡುವಾಗ ನಮ್ಮನ್ನು ನಾವು ವ್ಯಕ್ತಪಡಿಸಿದ್ದೆವು. ನಮ್ಮ ಆತಮಗೌರವಕ್ಕಾಗಿ ಆಡಲು ಪ್ರಾರಂಭಿಸಿದ್ದೆವು ನಂತರ ಆತ್ಮವಿಶ್ವಾಸ ಮರಳಿತ್ತು.
ಇದನ್ನೂ ಓದಿ: ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು; ಆರ್ಸಿಬಿ ಆಟಗಾರರ ಭಾವನಾತ್ಮಕ ವಿಡಿಯೋ ವೈರಲ್
ನಾವು ಪ್ಲೇಆಫ್ಗೆ ಅರ್ಹತೆ ಪಡೆದ ರೀತಿ ನಿಜವಾಗಿಯೂ ವಿಶೇಷವಾಗಿದೆ. ನಾನೂ ಈ ವಿಚಾರವನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಏಕೆಂದರೆ ನಾವು ಪ್ಲೇಆಫ್ ಪ್ರವೇಶಿಸುವಲ್ಲಿ ತಂಡದ ಪ್ರತಿಯೊಬ್ಬ ಆಟಗಾರನು ಪ್ರಮುಖ ಪಾತ್ರ ವಹಿಸಿದ್ದಾನೆ. ಅಂತಿಮವಾಗಿ ನಾವು ಆಡಲು ಬಯಸಿದ ರೀತಿಯಲ್ಲಿ ಆಡಿದ್ದೇವೆ. ಇದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ವಿರಾಟ್ ಕೊಹ್ಲಿ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹೇಳಿದ್ದಾರೆ.
ಇತ್ತ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 8 ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 172 ಗಳಿಸಲು ಶಕ್ತವಾಯಿತು. 173 ರನ್ಗಳ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡವು 19 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಗೆಲುವಿನ ನಗೆ ಬೀರುವ ಮೂಲಕ ಕ್ವಾಲಿಫಯರ್-2 ಪ್ರವೇಶಿಸಿದೆ.