More

    ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು; ಆರ್​ಸಿಬಿ ಆಟಗಾರರ ಭಾವನಾತ್ಮಕ ವಿಡಿಯೋ ವೈರಲ್

    ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡವು 4 ವಿಕೆಟ್​ಗಳ ಸೋಲು ಕಾಣುವ ಮೂಲಕ ಐಪಿಎಲ್​​ನಲ್ಲಿ ತನ್ನ ಅಭಿಯಾನವನ್ನು ಮುಗಿಸಿದೆ. ಏಪ್ರಿಲ್​ 21ರಂದು ಕೋಲ್ಕತ ನೈಟ್​ರೈಡರ್ಸ್​ ವಿರುದ್ಧ ಒಂದು ರನ್​ಗಳ ವಿರೋಚಿತ ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿದ್ದ ಆರ್​ಸಿಬಿ ಮೇ 22ರಂದು ರಾಜಸ್ಥಾನ ರಾಯಲ್ಸ್​ ವಿರುದ್ಧ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಕೊನೆಗೊಂಡಿದೆ. ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್​ನಲ್ಲಿ ಕಂಡುಬಂದ ದೃಶ್ಯ ಪ್ರತಿಯೊಬ್ಬ ಆರ್​ಸಿಬಿ ಅಭಿಮಾನಿಗಳನ್ನು ಭಾವುಕವಾಗಿಸಿದೆ.

    ಐಪಿಎಲ್​ ಪ್ರಾರಂಭವಾದಾಗಿನಿಂದಲೂ ಆಡುತ್ತಿರುವ ಆರ್​ಸಿಬಿ ಒಂದು ಬಾರಿಯೂ ಕಪ್​ ಗೆದ್ದಿಲ್ಲ. ಪ್ರತಿ ವರ್ಷ ಟೂರ್ನಿ ಆರಂಭಕ್ಕೂ ಮುನ್ನ  ಈ ಬಾರಿ ಕಪ್ ನಮ್ಮದೆ ಎಂಬ ಭರವಸೆಯಿಂದ ಕಾದು ಕುಳಿತಿರುತ್ತಾರೆ. ಆದರೆ ಪಂದ್ಯಾವಳಿ ಮುಂದುವರೆದಂತೆ, ಎಲ್ಲಾ ಭರವಸೆಗಳು ಹುಸಿಯಾಗುತ್ತವೆ. ಈ ಬಾರಿಯೂ ಅಂಥದ್ದೇ ಘಟನೆ ನಡೆದಿದೆ. ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಿದ್ದು, ಈ ಬಾರಿ ಎಲ್ಲರನ್ನೂ ಮಣಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಶತಕೋಟಿ ಅಭಿಮಾನಿಗಳ ಹೆಬ್ಬಯಕೆಗೆ ಈ ಬಾರಿಯೂ ನೋವಿನ ತೆರೆ ಬಿದ್ದಿದೆ.

    ಇದನ್ನೂ ಓದಿ: ಮೋದಿ ಪಾತ್ರದಲ್ಲಿ ನಾನು ನಟಿಸುತ್ತೇನೆ ಎಂಬುದು ಸುಳ್ಳು; ನಟ ಸತ್ಯರಾಜ್​ ಬಿಚ್ಚಿಟ್ಟ್ರು ಅಸಲಿ ಸತ್ಯ

    ರಾಜಸ್ಥಾನ ರಾಯಲ್ಸ್​ ವಿರುದ್ಧ ಎಲಿಮಿನೇಟರ್​ ಪಂದ್ಯದಲ್ಲಿ ಸೋಲಿನ ಬಳಿಕ ಆರ್​ಸಿಬಿ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾವನಾತ್ಮಕ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಪಂದ್ಯ ಮುಗಿದ ಬಳಿಕ ತಂಡದ ಎಲ್ಲಾ ಆಟಗಾರರು ಹತಾಶೆ ಮತ್ತು ನಿರಾಶೆಯಿಂದ ಡ್ರೆಸ್ಸಿಂಗ್​ ರೂಮ್​ನಲ್ಲಿ ಕುಳಿತಿರುವುದನ್ನು ನೋಡಬಹುದಾಗಿದೆ. ಎಲ್ಲಾ ಆಟಗಾರರು ದುಃಖದಲ್ಲಿರುವುನ್ನು ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಆರ್​ಸಿಬಿ ಅಭಿಮಾನಿಗಳು ಭಾವುಕರಾಗಿದ್ದಾರೆ.

    ಇತ್ತ ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ 8 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 172 ಗಳಿಸಲು ಶಕ್ತವಾಯಿತು. 173 ರನ್​ಗಳ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್​ ತಂಡವು 19 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 174 ರನ್​ ಗಳಿಸಿ ಗೆಲುವಿನ ನಗೆ ಬೀರುವ ಮೂಲಕ ಕ್ವಾಲಿಫಯರ್-2 ಪ್ರವೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts