More

    ಮೈದುನನ ಮಕ್ಕಳಿಗೆ ಸ್ಕೆಚ್​ ಹಾಕಿ ಕೊಲೆಗೈದ ಹಂತಕಿ; ​ಒಂದಲ್ಲ ಎರಡಲ್ಲ ಮೂರನೇ ಕೊಲೆಗೆ ಸಿಕ್ಕಿಬಿದ್ದಳು

    ಬಾರ್ಮೇರ್​: ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಮಗುವಿಗೆ ವಿಷವುಣಿಸಿ ಹತ್ಯೆ ಮಾಡಲು ಯತ್ನಿಸಿರುವ ರಾಜಸ್ಥಾನದ ಬಾರ್ಮೇರ್​ನಲ್ಲಿ ನಡೆದಿದೆ. ಈ ವಿಡಿಯೋ NCM ಇಂಡಿಯಾ ಕೌನ್ಸಿಲ್​ ಫಾರ್​ ಮೆನ್​ ಅಫೇರ್ಸ್​ ಪೋಸ್ಟ್​ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

    ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಮಗುವನ್ನು ಆಟವಾಡಿಸುತ್ತ ರೂಮ್​ ಪ್ರವೇಶಿಸುವ ಮಹಿಳೆ ಹಾಸಿಗೆ ಮೇಲೆ ಮಲಗಿಸಿದ್ದ ಮತ್ತೊಂದು ಮಗುವಿನ ಬಾಯಿಗೆ ಪೋಲಿಯೋ ರೀತಿ ಡ್ರಾಪ್ಸ್​ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಅದು ವಿಷ ಎಂದು ಹೇಳಲಾಗಿದ್ದು, ಆಕೆಯ ದುಷ್ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತಳ ಹೆಸರು ಜೇಥನಿ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಕೆಮಿಕಲ್​ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ; ನಾಲ್ವರು ಸಾವು, ಹಲವರು ಗಂಭೀರ

    ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮಹಿಳೆ ತನ್ನ ಪತಿಯ ಸಹೋದರನ (ಮೈದುನ) ಮಗುವಿಗೆ ವಿಷವುಣಿಸಿ ಹತ್ಯೆ ಮಾಡಲು ಯತ್ನಿಸಿದ್ದಾರೆ. ಈ ಹಿಂದೆ ಇಬ್ಬರು ಮಕ್ಕಳನ್ನು ಈಕೆ ಇದೇ ರೀತಿ ಕೊಲೆ ಮಾಡಿದ್ದಳು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದರಿಂದಾಗಿ ಅನುಮಾನಗೊಂಡ ಕುಟುಂಬಸ್ಥರು ಆಕೆಯ ಚಲನವಲನದ ಮೇಲೆ ನಿಗಾ ವಹಿಸಿದ್ದರು ಮತ್ತು ಮಗು ಇರುವ ರೂಮ್​ನಲ್ಲಿ ಕ್ಯಾಮರಾ ಹಾಕಿಸಿದ್ದರು. ಈ ಬಾರಿ ಮಗುವಿಗೆ ವಿಷ ಹಾಕಿದಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾಳೆ. ಕೂಡಲೇ ಎಚ್ಚೆತ್ತ ಕುಟುಂಬಸ್ಥರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

    ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಳೆಂದು ಆಕೆ ಹೇಳಿಲ್ಲ. ಆದರೆ, ಇದಕ್ಕೂ ಮುನ್ನಮೈದುನನ ಇಬ್ಬರ ಮಕ್ಕಳಿಗೆ ವಿಷವುಣಿಸಿ ಕೊಂದಿದ್ದಾಗಿ ಹೇಳಿದ್ದಾಳೆ. ವಿಚಾರಣೆ ನಡೆಸಲಾಗುತ್ತಿದ್ದು, ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts