ಪತಿಗೆ ಇಷ್ಟವಿಲ್ಲದಿದ್ದರೆ ತಂಗಿಯ ಮಗುವನ್ನು ನಾನೊಬ್ಬಳೇ ದತ್ತು ಪಡೆಯಬಹುದೆ?

nyayadevate
Published on: 
ಮದುವೆಯಾಗಿ ಎಂಟು ವರ್ಷಗಳಾಗಿವೆ. ನಮಗೆ ಮಕ್ಕಳಿಲ್ಲ. ಮಗುವನ್ನು ದತ್ತು ತೆಗೆದುಕೊಳ್ಳಲು ಪತಿ ಒಪ್ಪುತ್ತಿಲ್ಲ. ನಮ್ಮ ಯಜಮಾನರು ಹೊರ ದೇಶದಲ್ಲಿ ಆರು ತಿಂಗಳು , ನಮ್ಮ ದೇಶದಲ್ಲಿ ಆರು ತಿಂಗಳು ಇರುತ್ತಾರೆ. ನನ್ನ ತಂಗಿಗೆ ಒಂದು ಮಗು ಇದೆ. ಅವಳಿಗೆ ಆ ಮಗುವಿನ ಮೇಲೆ ಮನಸ್ಸಿಲ್ಲ. ಅವಳ ಗಂಡ ಅವಳನ್ನು ಬಿಟ್ಟು ಊರು ಬಿಟ್ಟೇ ಹೋಗಿದ್ದಾನೆ. ನನ್ನ ಮಗುವನ್ನೇ ದತ್ತು ತೆಗೆದುಕೋ ಎನ್ನುತ್ತಿದ್ದಾಳೆ. ನಮ್ಮ ಯಜಮಾನರು ಇದಕ್ಕೆ ಒಪ್ಪುವುದಿಲ್ಲ. ನಮ್ಮ ಯಜಮಾನರು ಇಲ್ಲಿ ಇಲ್ಲದಾಗ ನಾನು ಮಾತ್ರ ಆ ಮಗುವನ್ನು ದತ್ತು ತೆಗದುಕೊಳ್ಳಬಹುದೇ?

ಉತ್ತರ: ನಿಮ್ಮ ಪತಿ ಬದುಕಿರುವಾಗ ನೀವು ಮಾತ್ರ ದತ್ತುಪಡೆದುಕೊಳ್ಳುವ ಹಾಗಿಲ್ಲ. ಪತಿ ಪತ್ನಿ ಇಬ್ಬರು ಸೇರಿಯೇ ದತ್ತು ಸ್ವೀಕಾರ ಮಾಡಬೇಕು. ಹಾಗೆಯೇ ನಿಮ್ಮ ತಂಗಿಯೂ ಒಬ್ಬಳೇ ಮಗುವನ್ನು ದತ್ತುಕೊಡಲು ಬರುವುದಿಲ್ಲ. ಪತಿ ಪತ್ನಿ ಇಬ್ಬರೂ ಒಪ್ಪಿದಾಗ ಮಾತ್ರ ದತ್ತು ಕೊಡಬಹುದು.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/