More

    ಅಪ್ಪನಿಂದ ಬಂದಿರುವ ಆಸ್ತಿ ಹಂಚಿಕೆಯಲ್ಲಿ ನನಗೆಷ್ಟು ಹಕ್ಕಿದೆ? ಹೇಗಾದರೂ ಪಾಲು ಮಾಡಬಹುದಾ?

    ಅಪ್ಪನಿಂದ ಬಂದಿರುವ ಆಸ್ತಿ ಹಂಚಿಕೆಯಲ್ಲಿ ನನಗೆಷ್ಟು ಹಕ್ಕಿದೆ? ಹೇಗಾದರೂ ಪಾಲು ಮಾಡಬಹುದಾ?ಪ್ರಶ್ನೆ: ನಮ್ಮ ತಂದೆಯವರ ಆಸ್ತಿಯಲ್ಲಿ ನನ್ನ ತರುವಾಯ ನನ್ನ ಮಕ್ಕಳಿಗೆ ಹೆಂಡತಿಗೆ ಆಸ್ತಿ ಹೇಗೆ ಹಂಚಿಕೆ ಆಗುತ್ತದೆ? ನಾನು ವಿಲ್ ಮಾಡಬಹುದೇ? ತಿಳಿಸಿ.

    ಉತ್ತರ: ತಂದೆ ಸ್ವಯಾರ್ಜಿತವಾಗಿ ಸಂಪಾದಿಸಿದ್ದ ಆಸ್ತಿ ಅವರ ಮರಣಾನಂತರ ನಿಮಗೆ ಬಂದಿದ್ದರೆ, ಆಗ, ಆ ಆಸ್ತಿಯೂ ನಿಮ್ಮ ವೈಯಕ್ತಿಕ, ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನೂ ನೀವು ನಿಮ್ಮ ಜೀವಿತ ಕಾಲದಲ್ಲಿ ಯಾರಿಗೆ ಬೇಕಾದರೂ ಕ್ರಯ ಅಥವಾ ದಾನ ಮಾಡಬಹುದು.

    ನೀವು ಪರಭಾರೆ ಮಾಡದೇ ಹಾಗೇ ಆಸ್ತಿ ಉಳಿಸಿ ನಿಧನರಾದರೆ, ಆಗ ನಿಮ್ಮ ತಂದೆಯಿಂದ ನಿಮಗೆ ಬಂದ ಆಸ್ತಿ ನಿಮ್ಮ ಹೆಂಡತಿ ಮತ್ತು ನಿಮ್ಮ ಮಕ್ಕಳಿಗೆ ಸಮವಾಗಿ ಪಾಲಾಗುತ್ತದೆ. ಬೇಕಿದ್ದರೆ ನೀವು ಈಗಲೇ ಈ ಆಸ್ತಿಯನ್ನು ಸಹ ಯಾರಿಗೆ ಬೇಕೋ ಅವರಿಗೆ ವಿಲ್ ಸಹ ಮಾಡಬಹುದು.

    ಒಂದು ವೇಳೆ ನಿಮಗೆ ನಿಮ್ಮ ತಂದೆಯಿಂದ ಬಂದ ಆಸ್ತಿ, ನಿಮ್ಮ ತಂದೆಗೆ, ಅವರ ಅಜ್ಜನಿಂದ ಬಂದ ಆಸ್ತಿ ಆಗಿದ್ದರೆ ಆಗ ಆ ಆಸ್ತಿಯಲ್ಲಿ ನಿಮ್ಮ ಮಕ್ಕಳಿಗೂ ಪಾಲು ಇರುತ್ತದೆ. ಆಗ ನಿಮ್ಮ ಪಾಲನ್ನು ಮಾತ್ರ ನೀವು ಬೇಕಾದವರಿಗೆ ವಿಲ್ ಮಾಡಬಹುದು.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ  https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಮಕ್ಕಳು ಪಾಲಕರನ್ನು ಕಡೆಗಣಿಸುತ್ತಿದ್ದರೆ, ಅವರಿಗೆ ಆಸ್ತಿ ಕೊಡದೇ ಮಾರಲು ಅವಕಾಶವಿದೆಯಾ?

    ಡಿವೋರ್ಸ್​ ಆದ ಕೆಲ ವರ್ಷಗಳ ನಂತರ ಜೀವನಾಂಶ ಕೇಳುವ ಅವಕಾಶವಿದೆಯೆ?

    ಸ್ವಂತ ಮಗುವಿಲ್ಲದವರ ಆಸ್ತಿಯನ್ನು ಸಹೋದರರ ಮಕ್ಕಳು ಪಡೆಯಲು ಅವಕಾಶವಿದೆಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts