More

    ಸಹಿ ಫೋರ್ಜರಿ ಮಾಡಿ ಮೋಸ

    ಗಂಗೊಳ್ಳಿ: ಆಸ್ತಿಗಳನ್ನು ಲಪಟಾಯಿಸುವುದಗೋಸ್ಕರ ಮೃತರ ಸಹಿಯನ್ನು ಫೋರ್ಜರಿ ಮಾಡಿ ಜನರಲ್ ಪವರ್ ಆಫ್ ಅಟಾರ್ನಿಯ ತಯಾರಿಸಿ ಮೋಸ ಮಾಡಿದ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಗಂಗೊಳ್ಳಿ ಗ್ರಾಮದ ಪ್ರೇಮಾ(51) ಎಂಬುವರ ತಂದೆ ಬಾಬು ಅವರಿಗೆ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಕೊಡಪಾಡಿ ಎಂಬಲ್ಲಿ ಸ.ನಂ 62/3 ರಲ್ಲಿ 93 ಸೆಂಟ್ಸು, 62/15 ರಲ್ಲಿ 15 ಸೆಂಟ್ಸು, 62/12ಬಿ ರಲ್ಲಿ 16 ಸೆಂಟ್ಸು 62/4 ರಲ್ಲಿ 68 ಸೆಂಟ್ಸು ಜಾಗ ಕರ್ನಾಟಕ ಮಸೂದೆ ಕಾಯ್ದೆಯಂತೆ ಕುಂದಾಪುರ ಭೂ ನ್ಯಾಯ ಮಂಡಳಿಯಲ್ಲಿ ಅಧಿಬೋಗದಾರಿಕೆಯಲ್ಲಿ ತೀರ್ಪು ಆಗಿದ್ದು, ಬಾಬು ಸುಮಾರು 10 ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದು ಆರೈಕೆಯಲ್ಲಿದ್ದರು.

    ಆ ಸಂದರ್ಭ ರಾಜು ಅವರು ಬಾಬು ಅವರ ಆಸ್ತಿಯನ್ನು ತುಂಗಾ ಅವರ ಹೆಸರಿಗೆ ಮಾಡಿಕೊಡುವಂತೆ ಪ್ರೇಮಾ ಅವರ ಮನೆಯವರಿಗೆ ಒತ್ತಡ ತರುತ್ತಿದ್ದು, ಬಾಬು ಅವರು ಮಾತನಾಡುವ ಹಾಗೂ ಸಹಿ ಹಾಕುವ ಸ್ಥಿತಿಯಲ್ಲಿ ಇಲ್ಲದಿದ್ದರೂ, ರಾಜು ಅವರು ಪ್ರೇಮಾ ಅವರ ತಂದೆ ಬಾಬು ಅವರ ಆಸ್ತಿಗಳನ್ನು ಲಪಟಾಯಿಸುವುದಕ್ಕೋಸ್ಕರ, ಬಾಬು ಹೆಸರಿನಲ್ಲಿ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಲು ಮನವಿ ಪತ್ರ ತಯಾರಿಸಿ ಅದರಲ್ಲಿ ಪ್ರೇಮಾ ಅವರ ಸಹಿಯನ್ನು ಪೋರ್ಜರಿ ಮಾಡಿ ಅದನ್ನು ತಹಸೀಲ್ದಾರರಿಗೆ ನೀಡಿ ಮೂರು ನಿರಾಕ್ಷೇಪಣಾ ಪತ್ರ ಪಡೆದುಕೊಂಡಿದ್ದಾರೆ.

    ಬಾಬು ಅವರು 2023 ಜುಲೈ 18ರಂದು ಮೃತಪಟ್ಟಿದ್ದು, ರಾಜು ಅವರು 2023 ನ.2ರಂದು ಮೃತ ಬಾಬು ಅವರ ಹೆಸರಿನಲ್ಲಿ 200ರೂ. ಮುಖಬೆಲೆಯ ಸ್ಟಾಂಪ್ ಪೇಪರ್‌ನಲ್ಲಿ ಜನರಲ್ ಪವರ್ ಆಫ್ ಅಟಾರ್ನಿ ತಯಾರಿಸಿ ಮೃತ ಬಾಬು ಅವರ ನಕಲಿ ಸಹಿ ಮಾಡಿ ಜನರಲ್ ಪವರ್ ಆಫ್ ಅಟಾರ್ನಿ ತಯಾರಿಸಿರುತ್ತಾರೆ.

    ಜನರಲ್ ಪವರ್ ಆಫ್ ಅಟಾರ್ನಿಯ ಮೂಲಕ ವ್ಯವಸ್ಥಾ ಪತ್ರ ತಯಾರಿಸಿ ಕುಂದಾಪುರದ ಉಪನೊಂದಣಾಧಿಕಾರಿಗಳ ಮುಂದೆ ಹಾಜರುಪಡಿಸಿ ಆಸ್ತಿ ನೊಂದಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಪ್ರೇಮಾ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts