More

    ಬಾಡಿಗೆ ಗಂಡನಿಂದಾಗಿ ಗಲ್ಲುಶಿಕ್ಷೆಗೆ ಗುರಿಯಾದ ನರ್ಸ್‌ ಒಬ್ಬಳ ಕಣ್ಣೀರ ಕಥೆಯಿದು…

    ತಿರುವನಂತಪುರ: ಈಕೆ ಕೇರಳದ ನರ್ಸ್‌. ಹೆಸರು ನಿಮಿಷ ಪ್ರಿಯಾ. ಈಕೆ ಪುರುಷನೊಬ್ಬನ ಕೊಲೆ ಮಾಡಿದ್ದು ನಿಜ, ಕೊಲೆಯ ನಂತರ ಆತನನ್ನು ಪೀಸ್‌ ಪೀಸ್‌ ಮಾಡಿದ್ದೂ ನಿಜ. ಅದೇ ಅಪರಾಧಕ್ಕೆ ಗಲ್ಲುಶಿಕ್ಷೆಗೆ ಒಳಗಾಗಿರುವುದು ನಿಜ. ಆದರೂ ಈಕೆಯದ್ದು ಕಣ್ಣೀರ ಕಥೆ…

    ಇವರ ಕಥೆ ಶುರುವಾಗುವುದು 2014ರಿಂದ. ಕೇರಳದ ಪಾಲಕ್ಕಾಡ್‌ ನಿವಾಸಿಯಾಗಿರುವ ಪ್ರಿಯಾ ಯೆಮನ್‌ ಯೆಮನ್ ದೇಶದಲ್ಲಿ ಹಲವು ವರ್ಷಗಳ ಕಾಲ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದಳು. ಐದು ವರ್ಷ ಮಗುವನ್ನು ತವರಿನಲ್ಲಿ ಬಿಟ್ಟು ಯೆಮನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರಿಯಾ ಅಲ್ಲಿಯೇ ಒಂದು ಕ್ಲಿನಿಕ್‌ ಶುರು ಮಾಡಲು ಯೋಚನೆ ಮಾಡಿದಳು.

    ಆದರೆ ಆ ದೇಶದ ಕಾನೂನಿನ ಪ್ರಕಾರ ಯೆಮನ್‌ ಪ್ರಜೆಗಳಲ್ಲದವರು ಅಲ್ಲಿ ಕ್ಲಿನಿಕ್ ಮತ್ತು ಉದ್ದಿಮೆಗಳನ್ನು ಸ್ಥಾಪಿಸುವಂತಿಲ್ಲ. ಆದ್ದರಿಂದ ಏನು ಮಾಡಬೇಕು ಎಂದು ಯೋಚನೆ ಮಾಡಿದ್ದಾಗ ಈಕೆಯ ನೆರವಿಗೆ ಬಂದದ್ದು ಮಹದಿ ಎಂಬ ಯೆಮನ್‌ ಪ್ರಜೆ.

    ಈತನಿಗೆ ಈ ಮೊದಲೇ ವಿವಾಹವಾಗಿತ್ತು. ಪ್ರಿಯಾಳಿಗೆ ಈತ ಹಾಗೂ ಈತನ ಪತ್ನಿಯ ಪರಿಚಯವಿದ್ದುದರಿಂದ ಆತನ ಸಹಾಯ ಪಡೆದುಕೊಳ್ಳುವುದು ಲೇಸೆಂದು ಬಗೆದಳು. ಅದರಂತೆ ಮಹದಿ ಸಹಾಯ ಮಾಡಲು ಮುಂದಾದ. ಇಬ್ಬರೂ ಯೋಚನೆ ಮಾಡಿದಂತೆ 2014ರಲ್ಲಿ ಇವರಿಬ್ಬರು ಸೇರಿಕೊಂಡು ಯೆಮನ್ ರಾಜಧಾನಿ ಸನಾದಲ್ಲಿ ಕ್ಲಿನಿಕ್ ಸ್ಥಾಪಿಸಿದರು.

    ಕ್ಲಿನಿಕ್‌ಗೆ ಪರವಾನಗಿ ಪಡೆದುಕೊಳ್ಳುವ ಅವಸರದಲ್ಲಿ ಮಹದಿ ಒಳ್ಳೆಯ ಮನುಷ್ಯನೆಂದು ನಂಬಿದ್ದ ಪ್ರಿಯಾ, ಆತನ ಜತೆ ತನಗೆ ವಿವಾಹವಾಗಿದೆ ಎಂಬ ಪ್ರಮಾಣಪತ್ರವನ್ನು ಸಲ್ಲಿಸಿಬಿಟ್ಟಳು. ಇಲ್ಲದಿದ್ದರೆ ಈಕೆಗೆ ಕ್ಲಿನಿಕ್‌ ಶುರು ಮಾಡಲು ಆಗುತ್ತಿರಲಿಲ್ಲ.

    ಇದೇ ಆಗಿದ ಎಡವಟ್ಟು. ಯಾವಾಗ ಇವರ ವಿವಾಹಕ್ಕೆ (ನಕಲಿ) ಮುದ್ರೆ ಬಿತ್ತೋ, ಅಲ್ಲಿಂದ ಶುರುವಾಯಿತು ವಿವಾಹಿತ ಮಹದಿಯ ಟಾರ್ಚರ್‌. ಆಕೆಯ ಜತೆ ದೈಹಿಕ ಸಂಬಂಧ ಬೆಳೆಸಲು ಬಯಸಿದ. ಅದಕ್ಕೆ ಆಕೆ ಪ್ರತಿರೋಧ ಒಡ್ಡತೊಡಗಿದಳು.

    ದಿನವೂ ಆಕೆಗೆ ಹಿಂಸೆ ಕೊಡತೊಡಗಿದ ಮಹದಿ. ಮಾದಕ ದ್ರವ್ಯ ವ್ಯಸನಿಯಾಗಿದ್ದ ಮಹದಿ ಡ್ರಗ್ಸ್ ನಶೆಯಲ್ಲಿ ಆಕೆಗೆ ದಿನವೂ ಚಿತ್ರ ಹಿಂಸೆ ನೀಡತೊಡಗಿದ
    ಇದರಿಂದ ನೊಂದು ಆಕೆ ದೇಶ ಬಿಟ್ಟು ತವರಿಗೆ ವಾಪಸಾಗುವ ಯೋಚನೆ ಮಾಡಿದಳು. ಇದು ತಿಳಿಯುತ್ತಲೇ ಮಹದಿ ಆಕೆಯ ಪಾಸ್‌ಪೋರ್ಟ್‌ ಕಸಿದು ಇಟ್ಟುಕೊಂಡ. ಮತ್ತೇನೂ ಮಾಡಲಾಗದೆ ಪ್ರಿಯಾ ಪೊಲೀಸರಲ್ಲಿ ದೂರು ದಾಖಲು ಮಾಡಿದಳು.

    ಇದರಿಂದ ಆತನನ್ನು ಜೈಲಿಗೆ ಹಾಕಲಾಯಿತು. ಜೈಲಿನಿಂದ ಹೊರಬಂದ ಆತ ಮತ್ತಷ್ಟು ಕ್ರೂರವಾಗಿ ನಡೆದುಕೊಳ್ಳತೊಡಗಿದ. ಪ್ರಿಯಾಳ ಬದುಕನ್ನು ಅಕ್ಷರಶಃ ನರಕ ಮಾಡಿಬಿಟ್ಟ.

    ಇನ್ನು ತಾನು ಬದುಕುವುದು ಸಾಧ್ಯವಿಲ್ಲವೆಂದುಕೊಂಡ ಪ್ರಿಯಾ ತನ್ನ ಸ್ನೇಹಿತೆ ಜತೆಗೂಡಿ ಈತನನ್ನು ಮುಗಿಸುವ ಯೋಚನೆ ಮಾಡಿದಳು. ಮಹದಿಗೆ ಅರವಳಿಕೆ ಔಷಧಿ ನೀಡಿ ಮಹದಿಯನ್ನು ಸಾಯಿಸಿಯೇ ಬಿಟ್ಟರು. ಮೃತದೇಹವನ್ನು ಏನು ಮಾಡುವುದೆಂದು ತೋಚದೇ ಇವರಿಬ್ಬರೂ ಸೇರಿಕೊಂಡು ಅದನ್ನು ಕತ್ತರಿಸಿ ಪಾಲಿಥೀನ್ ಚೀಲದಲ್ಲಿ ತುಂಬಿ ತನ್ನ ಅಪಾರ್ಟ್ಮೆಂಟ್ ಮೇಲಿದ್ದ ನೀರಿನ ಟ್ಯಾಂಕ್‌ಗೆ ಎಸೆದು ಅಲ್ಲಿಂದ ಪರಾರಿಯಾದರು.

    ಇದನ್ನೂ ಓದಿ: ಮನೆಗೆ ನುಗ್ಗಿ ಮಹಿಳೆಯ ಚಿನ್ನಾಭರಣ ಲೂಟಿ ಮಾಡಿ ಮಂಗಗಳು ಎಸ್ಕೇಪ್‌!

    ಅಲ್ಲಿಂದ 200 ಕಿಲೋಮೀಟರ್ ದೂರದಲ್ಲಿದ್ದ ಊರೊಂದಕ್ಕೆ ತೆರಳಿ ಅಲ್ಲಿ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಳು ಪ್ರಿಯಾ. ಮಹದಿಯ ಶವವಿದ್ದ ಆ ನೀರಿನ ಟ್ಯಾಂಕ್ ನಿಂದ ವಿಚಿತ್ರ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಅಪಾರ್ಟ್‌ಮೆಂಟ್‌ ನಿವಾಸಿಗಳು ಪೊಲೀಸರಿಗೆ ದೂರನ್ನು ನೀಡಿದಾಗ ತನಿಖೆ ಶುರುವಾಗಿ ಪ್ರಿಯಾ ಕೊಲೆ ಮಾಡಿರುವುದು ಪತ್ತೆ ಹಚ್ಚಲಾಯಿತು.

    ಆಕೆಯನ್ನು ಬಂಧಿಸಲಾಯಿತು. 2018ರಲ್ಲಿ ಯೆಮನ್‌ನ ಸೆಷನ್ಸ್‌ ಕೋರ್ಟ್‌ ಪ್ರಿಯಾಳಿಗೆ ಮರಣದಂಡನೆ ಹಾಗೂ ಈಕೆಗೆ ಸಹಕರಿಸಿದಾಕೆಗೆ ಜೀವಾವಧಿ ಶಿಕ್ಷೆ ವಿಧಿಸುತ್ತದೆ. ಹೈಕೋರ್ಟ್‌ ಕೂಡ ಈ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

    ಇದೀಗ ನಿಮಿಷಾಳ ಮುಂದಿರುವ ಕೊನೆಯ ಆಯ್ಕೆ ಎಂದರೆ ಆ ದೇಶದ ಅಧ್ಯಕ್ಷರೇ ಮುಖ್ಯಸ್ಥರಾಗಿರುವ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ಮುಂದೆ ತನ್ನ ಮರಣದಂಡನೆಯನ್ನು ಪುನರ್ ಪರಿಶೀಲಿಸಲು ಮನವಿ ಮಾಡಿಕೊಳ್ಳುವುದು. 15 ದಿನಗಳೊಳಗಾಗಿ ಈ ಮನವಿಯನ್ನು ಸಲ್ಲಿಸಬೇಕಾಗಿದೆ. ಏನೋ ಒಂದು ಎಡವಟ್ಟು ಮಾಡಿ ನೇಣಿಗೆ ಕೊರಳೊಡ್ಡುವ ಹಂತಕ್ಕೆ ಪ್ರಿಯಾ ಹೋಗಿರುವುದು ದುರದೃಷ್ಟವೇ ಸರಿ…

    ಸೆಪ್ಟೆಂಬರ್‌ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್‌ಕುಮಾರ್‌ ಏನು ಹೇಳಿದ್ದಾರೆ ಕೇಳಿ…

    ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

    ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

    ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

    ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

    ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

    ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

    ನನಗೆ ನಾಯಿ ಬೇಕು ನಾಯಿ- ಕಿಮ್‌ನ ಭಯಾನಕ ಆದೇಶ: ಶ್ವಾನಪ್ರಿಯರ ಕಣ್ಣೀರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts