More

    ನನಗೆ ನಾಯಿ ಬೇಕು ನಾಯಿ- ಕಿಮ್‌ನ ಭಯಾನಕ ಆದೇಶ: ಶ್ವಾನಪ್ರಿಯರ ಕಣ್ಣೀರು!

    ಉತ್ತರ ಕೊರಿಯಾ: ಸದಾ ಒಂದಿಲ್ಲೊಂದು ವಿಚಿತ್ರ, ಜನರ ಜೀವನವನ್ನು ತಲ್ಲಣಗೊಳಿಸುವ ಆದೇಶ, ಕಾನೂನು ಜಾರಿಗೊಳಿಸುವಲ್ಲಿ ನಿಸ್ಸೀಮರಾಗಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಈಗ ತನಗೆ ನಾಯಿ ಬೇಕು ನಾಯಿ ಎಂದಿದ್ದಾರೆ!

    ಇವರ ಆದೇಶದಂತೆ ಉತ್ತರ ಕೊರಿಯಾದಲ್ಲಿ ನಾಯಿಗಳನ್ನು ಸಾಕಿರುವ ಪ್ರತಿ ಮನೆತನವೂ ತಮ್ಮ ನೆಚ್ಚಿನ ಪ್ರಾಣಿಯನ್ನು ಸರ್ಕಾರಿ ಅಧಿಕಾರಿಗಳಿಗೆ ಒಪ್ಪಿಸಬೇಕಂತೆ. ಅವರು ಅದನ್ನು ಕಿಮ್‌ಗೆ ತಲುಪಿಸಲಿದ್ದಾರೆ.

    ಅಷ್ಟಕ್ಕೂ ಇಂಥದ್ದೊಂದು ವಿಚಿತ್ರ ಆದೇಶ ಹೊರಬೀಳಲು ಕಾರಣ, ಕರೊನಾ ವೈರಸ್‌, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉಂಟಾಗಿರುವ ಆಹಾರದ ಕೊರತೆಯಿಂದ! ಇದರ ಜೊತೆಗೆ, ದೇಶದಲ್ಲಿ ವರುಣನ ಆರ್ಭಟ ಜೋರಾಗಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಹಾಗಾಗಿ, ಜನರು ತಿನ್ನೋಕೆ ಆಹಾರವಿಲ್ಲದೆ ಪರದಾಡುತ್ತಿದ್ದಾರೆ.

    ಆಹಾರಕ್ಕೂ, ನಾಯಿಗೂ ಏನಪ್ಪಾ ಸಂಬಂಧ ಎಂದು ಬೇರೆ ಹೇಳಬೇಕಾಗಿಲ್ಲ. ಜನರು ತಂದುಕೊಡುವ ನಾಯಿಯ ಮಾಂಸವನ್ನ ಆಹಾರಕ್ಕಾಗಿ ಬಳಸಲು ಕಿಮ್‌ ಯೋಚನೆ ಮಾಡಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಆದೇಶ ಹೊರಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

    ಈ ಆದೇಶದ ಅನ್ವಯ ಮನೆಮನೆಗೂ ತೆರಳುತ್ತಿರುವ ಅಧಿಕಾರಿಗಳು ಪ್ರತಿ ಮನೆಯಲ್ಲೂ ಇರುವ ಶ್ವಾನಗಳನ್ನು ಗೊತ್ತುಮಾಡಿ ವಶಕ್ಕೆ ಪಡೆಯುತ್ತಿದ್ದಾರಂತೆ. ಕಿಮ್​ನ ಈ ನಡೆಯಿಂದ ನಾಯಿಗಳನ್ನು ಸಾಕಿರುವವರು ಅಕ್ಷರಶಃ ನಲುಗಿ ಹೋಗಿದ್ದಾರೆ. ಆದರೆ ಅವರು ಎದುರಾಡುವಂತೆ ಇಲ್ಲ. ಉತ್ತರ ಕೊರಿಯಾದಲ್ಲಿ ಬೌಬೌ ಬಿರಿಯಾನಿ ಜನಪ್ರಿಯವಾಗಿರುವ ಆಹಾರ. ಶ್ವಾನದ ಮಾಂಸವನ್ನು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂಥ ವ್ಯವಸ್ಥೆ ಮಾಡಲು ಕಿಮ್‌ ಈ ಆದೇಶ ಹೊರಡಿಸಿದ್ದಾರೆ. ಆದರೆ ಮನೆಯಲ್ಲಿ ಸಾಕಿದ ಜನರ ಮುದ್ದಿನ ನಾಯಿಗಳನ್ನೂ ಆಹಾರ ತಯಾರಿಕೆಗೆ ಹಸ್ತಾಂತರ ಮಾಡಬೇಕೆಂಬ ಆದೇಶ ಜನರಲ್ಲಿ ನಡುಕ ಹುಟ್ಟಿಸಿದೆ.

    ಇದನ್ನೂ ಓದಿ: ಜಿ-ಮೇಲ್‌ ವರ್ಕ್‌ ಆಗ್ತಿಲ್ಲ ಎಂದು ಗೋಳಾಡ್ತಿರುವಿರಾ? ಗೂಗಲ್‌ ನೀಡಿದೆ ಸ್ಪಷ್ಟನೆ… ನೋಡಿ…

    ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳಲು ಕಿಮ್‌ ವರ್ಗೀಯ ವ್ಯತ್ಯಾಸಗಳನ್ನು ಬಳಸಿಕೊಂಡಿದ್ದಾರೆ. ಜನಸಾಮಾನ್ಯರು ಹಸು ಮತ್ತು ಜಾನುವಾರುಗಳನ್ನು ಸಾಕುತ್ತಾರೆ. ಆದರೆ ಧನವಂತರು ಮಾತ್ರವೇ ನಾಯಿಗಳನ್ನು ಸಾಕುತ್ತಾರೆ. ನಾಯಿಗಳನ್ನು ಸಾಕುವುದು ಬಂಡವಾಳಶಾಹಿ ಮತ್ತು ಮಧ್ಯಮವರ್ಗದ ಸಿದ್ಧಾಂತಗಳಾಗಿವೆ ಎಂದು ಕಿಮ್ ಹೇಳಿದ್ದಾರೆ.

    ಅಷ್ಟಕ್ಕೂ ಉತ್ತರ ಕೊರಿಯಾದಲ್ಲಿ 1980ರಿಂದಲೂ ಸಾಕು ನಾಯಿಗಳ ಮೇಲಿನ ನಿಷೇಧ ಜಾರಿಯಲ್ಲಿದೆ. ಉತ್ತರ ಕೊರಿಯಾದ ಅತಿ ಮಹತ್ವದ ದಿನಗಳಲ್ಲಿ ಒಂದಾದ ಪಾರ್ಟಿ ಫೌಂಡೇಷನ್ ಡೇ ದಿನಕ್ಕೂ ಮುನ್ನ ಸಾಕು ನಾಯಿಗಳನ್ನು ತ್ಯಜಿಸಬೇಕು ಎಂದು 2018ರಲ್ಲಿ ಜನರಿಗೆ ಸೂಚನೆ ನೀಡಲಾಗಿತ್ತು. ಇದಕ್ಕೆ ತಪ್ಪಿದಲ್ಲಿ 148 ಅಮೆರಿಕನ್ ಡಾಲರ್ ಮೊತ್ತದ ಅಕ್ಕಿಯನ್ನು ಸರ್ಕಾರಕ್ಕೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಡಲಾಗಿತ್ತು.

    ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

    ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

    ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

    ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

    ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!

    ಅತ್ಯಂತ ಕ್ರೂರವಾಗಿ ಲಾಕಪ್‌ ಡೆತ್‌ ಮಾಡಿದ್ದ ಆರೋಪಿ ಪೊಲೀಸ್‌ ಕರೊನಾಕ್ಕೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts