More

    ಜಿ-ಮೇಲ್‌ ವರ್ಕ್‌ ಆಗ್ತಿಲ್ಲ ಎಂದು ಗೋಳಾಡ್ತಿರುವಿರಾ? ಗೂಗಲ್‌ ನೀಡಿದೆ ಸ್ಪಷ್ಟನೆ… ನೋಡಿ…

    ವಾಷಿಂಗ್ಟನ್: ಗೂಗಲ್ ಸಂಸ್ಥೆಯ ಇ ಮೇಲ್ ಸೌಲಭ್ಯವಾದ ಜಿ-ಮೇಲ್‌ ಇಂದು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸದೇ ವಿಶ್ವಾದ್ಯಂತ ಲಕ್ಷಾಂತರ ಮಂದಿ ಪೇಚಿಗೆ ಸಿಲುಕಿದ್ದಾರೆ.

    ವರ್ಕ್‌ ಫ್ರಂ ಹೋಮ್‌ ಮಾಡುತ್ತಿರುವ ಈ ಸಮಯದಲ್ಲಿ ಹಲವಾರು ಉದ್ಯೋಗಿಗಳಿಗೆ ಜಿ-ಮೇಲ್‌ ಅತ್ಯಗತ್ಯವಾಗಿದೆ. ಆದರೆ ಇಂದು ಏಕಾಏಕಿ ಇದು ಕೆಲಸ ನಿರ್ವಹಿಸುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ. ‘ನನಗೆ ಈ ಸಮಸ್ಯೆ ಬರುತ್ತಿದೆ, ನಿಮಗೂ ಸಮಸ್ಯೆ ಉಂಟಾಗುತ್ತಿದೆಯೆ?’ ಎಂದು ಅನೇಕ ಮಂದಿ ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರವಾಗಿ ಹಲವಾರು ಮಂದಿ ತಮಗೂ ಸಮಸ್ಯೆ ಆಗುತ್ತಿರುವ ಬಗ್ಗೆ ತಿಳಿಸಿದ್ದಾರೆ.

    ಜೀಮೇಲ್ ಇಂದು ಸರಿಯಾಗಿ ವರ್ಕ್ ಆಗುತ್ತಿಲ್ಲ. ಅನೇಕ ಬಳಕೆದಾರರು ತಾವು ಕಳಿಸಿದ ಇ ಮೇಲ್ ಸೆಂಡ್ ಆಗುತ್ತಿಲ್ಲ ಎರರ್ ಸಂದೇಶ ಬರುತ್ತಿದೆ ಎಂದೆಲ್ಲಾ ಕಮೆಂಟ್‌ ಮಾಡುತ್ತಿದ್ದಾರೆ. ಮಾತ್ರವಲ್ಲದೇ, ಅಟ್ಯಾಚ್‌ಮೆಂಟ್‌ ಇರುವ ಇಮೇಲ್ ಸಂದೇಶಗಳಂತೂ ಸೆಂಡ್‌ ಆಗುತ್ತಲೇ ಇಲ್ಲ, ಗೂಗಲ್ ಆ್ಯಪ್ ಬಳಸಿ ಇಮೇಲ್ ಕಳಿಸಲು ಯತ್ನಿಸಿದರೆ ಸಾಧ್ಯವಾಗುತ್ತಿಲ್ಲ ಎಂದು ಗೋಳು ತೋಡಿಕೊಂಡಿದ್ದಾರೆ.

    ಕೆಲ ವರ್ಷಗಳಿಂದ ಜಿ-ಮೇಲ್‌ನಲ್ಲಿ ಅನ್‌ಡೂ ಸೆಂಡ್‌ (Undo send) ಆಯ್ಕೆಯನ್ನು ನೀಡಲಾಗಿದೆ. ಯಾವುದಾದರೂ ಇ-ಮೇಲ್‌ ಕಳುಹಿಸಿದಾಗ ಅದು ತಪ್ಪಾಗಿರುವುದು ತಿಳಿದ ತಕ್ಷಣ 30 ಸೆಕೆಂಡುಗಳವರೆಗೆ ಅದನ್ನು ಡಿಲೀಟ್‌ ಮಾಡುವ ಅವಕಾಶ ಲಭ್ಯವಿದೆ. ಇದರಲ್ಲಿ ಸಮಸ್ಯೆ ಉಂಟಾಗಿ ಇಮೇಲ್ ಹೋಗುವುದು ವಿಳಂಬವಾಗಿರಬಹುದು ಎಂದು ಅನೇಕ ಮಂದಿ ಮತ್ತೆ ಮತ್ತೆ ಪ್ರಯತ್ನಿಸಿ ವಿಫಲರಾಗಿದ್ದಾರೆ.

    ಇದನ್ನೂ ಓದಿ: ನೌಕರಿ ಹುಡುಕುತ್ತಿದ್ದೀರಾ? ಉದ್ಯೋಗಾಂಕ್ಷಿಗಳಿಗೆ ಗೂಗಲ್‌ ನೀಡಿದೆ ಗುಡ್‌ ನ್ಯೂಸ್‌…

    ಗೂಗಲ್ ಡ್ರೈವ್, ಗೂಗಲ್ ಡಾಕ್, ಚಾಟ್, ಗ್ರೂಪ್, ಕೀಪ್, ವಾಯ್ಸ್ ಬಳಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಇಷ್ಟೆಲ್ಲಾ ಸಂದೇಶಗಳು ಬರುತ್ತಿರುವುದನ್ನು ಗಮನಿಸಿರುವ ಗೂಗಲ್‌ ಸಂಸ್ಥೆ, ಇದೀಗ ಪ್ರತಿಕ್ರಿಯೆ ನೀಡಿದೆ.

    ಬಳಕೆದಾರರಿಗೆ ಉತ್ತರಿಸಿರುವ ಜಿ-ಮೇಲ್‌ ವ್ಯವಸ್ಥಾಪಕರು, ಈ ಸಮಸ್ಯೆ ಬಗ್ಗೆ ಈಗಾಗಲೇ ನಾವು ಕಾರ್ಯೋನ್ಮುಖರಾಗಿದ್ದೇವೆ. ಶೀಘ್ರದಲ್ಲೇ ಇಮೇಲ್ ಸೇವೆ ಪುನರ್ ಸ್ಥಾಪಿಸಲಾಗುವುದು ಎಂದಿದ್ದಾರೆ. ಕೆಲವು ತಾಂತ್ರಿಕ ಕಾರಣಗಳಿಂದ ಹೀಗಾಗಿದೆ. ಕೆಲವೇ ಕ್ಷಣಗಳಲ್ಲಿ ಸೇವೆ ಆರಂಭವಾಗಲಿದೆ ಎಂದಿದ್ದಾರೆ.

    ಗೂಗಲ್ ಇ ಮೇಲ್ ಸೇವೆಯ ಮೇಲೆ ಸೈಬರ್‌ ಕ್ರಿಮಿನಲ್ಸ್‌ ಕಣ್ಣು ಬಿದ್ದಿರುವ ಸುದ್ದಿ ಆಗಾಗ ಬರುತ್ತಿರುತ್ತದೆ, 2015ರಿಂದ ಹ್ಯಾಕರ್ಸ್ ಕಾಟ ಹೆಚ್ಚಾಗಿದೆ. ಗೂಗಲ್‌ನ  ಎರಡು ಮಟ್ಟದ ಸೆಕ್ಯುರಿಟಿ ಪಾಸ್ ವರ್ಡ್ ಬದಲಾವಣೆ ಮಾರ್ಗ ಅನುಸರಿಸಿ ನಿಮ್ಮ ಖಾತೆಯ ಪಾಸ್ ವರ್ಡ್ ತಕ್ಷಣವೇ ಬದಲಾಯಿಸಿಕೊಳ್ಳಿ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಹೇಳಿದ್ದಾರೆ.

    ಸೆಪ್ಟೆಂಬರ್‌ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್‌ಕುಮಾರ್‌ ಏನು ಹೇಳಿದ್ದಾರೆ ಕೇಳಿ…

    ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

    ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

    ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

    ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

    ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

    ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts