ಪ್ರಧಾನಿ ಮೋದಿ ಜೀವನಚರಿತ್ರೆಯ ಸಿನಿಮಾದ​ ಸಹ ನಿರ್ಮಾಪಕರಿಗೆ ಜೀವ ಬೆದರಿಕೆ

modi cinema
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜೀವನಚರಿತ್ರೆಯುಳ್ಳ "ಪಿಎಂ ನರೇಂದ್ರ ಮೋದಿ" ಸಿನಿಮಾದ ಸಹ-ನಿರ್ಮಾಪಕ ಅಮಿತ್ ಬಿ ವಾಧ್ವಾನಿ ಅವರಿಗೆ ಕೊಲೆ ಬೆದರಿಕೆ ಬಂದಿದೆ.

ಈ ಕುರಿತು ಉದ್ಯಮಿಯೂ ಆಗಿರುವ ಅಮಿತ್ ಬಿ. ವಾಧ್ವಾನಿ ಅವರು ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ. ತಮಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಬಂದಿದೆ ಎಂದು ಆರೋಪಿಸಿದ್ದಾರೆ.

ತಾವು ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಪ್ಟಿಮಿಸ್ಟಿಕ್ಸ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಬರಹಗಳು ಪ್ರಕಟಗೊಂಡಿದ್ದವು. ಇದರಲ್ಲಿಯೇ ತಮ್ಮ ಹಾಗೂ ತಮ್ಮ ಅಪ್ರಾಪ್ತ ಮಗನ ಫೋಟೋ ಬಳಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ವಾಧ್ವಾನಿ ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ಕುಟುಂಬಸ್ಥರ ಬಗ್ಗೆಯೂ ಅತ್ಯಂತ ಅವಹೇಳನಕಾರಿಯಾಗಿ ಇಲ್ಲ ಉಲ್ಲೇಖಮಾಡಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

2019ರ ಮಾರ್ಚ್‌ನಲ್ಲಿ 'ಪಿಎಂ ನರೇಂದ್ರ ಮೋದಿ' ಸಿನಿಮಾ ಬಿಡುಗಡೆ ಆಗಿತ್ತು. ಮೋದಿ ಪಾತ್ರವನ್ನು ವಿವೇಕ್‌ ಓಬೆರಾಯ್‌ ನಿಭಾಯಿಸಿದ್ದರು. ಓಮಂಗ್‌ ಕುಮಾರ್‌ ನಿರ್ದೇಶನ ಮಾಡಿದ್ದರು. ಆ ಸಿನಿಮಾವನ್ನು ಈಗ ಮರು ಬಿಡುಗಡೆ ಮಾಡಲಾಗಿದೆ. ಅ.15ರಂದು ದೇಶಾದ್ಯಂತ 'ಪಿಎಂ ನರೇಂದ್ರ ಮೋದಿ' ಸಿನಿಮಾ ರಿಲೀಸ್‌ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ಅಧಿಕೃತ ಮಾಹಿತಿಯೂ ಹೊರಬಿದ್ದಿದೆ.

'ಲಾಕ್‌ಡೌನ್‌ ಬಳಿಕ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ' ಎಂಬ ವಾಕ್ಯವನ್ನು ಹೊಂದಿರುವ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net