More

    ಮುನಿರತ್ನಗೆ ಬಿಗ್​ ರಿಲೀಫ್: ತುಳಸಿ ಮುನಿರಾಜು ಅವರ ಅರ್ಜಿ ವಜಾ

    ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ತಡೆ ಕೋರಿ ತುಳಸಿ ಮುನಿರಾಜು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ನವೆಂಬರ್ 3ರಂದು ಈ ಕ್ಷೇತ್ರದ ಉಪಚುನಾವಣೆ ನಿಗದಿಯಾಗಿದೆ. ಇದಕ್ಕೆ ತಡೆ ನೀಡುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿರುವ ಕಾರಣ ಚುನಾವಣೆಗಿದ್ದ ದೊಡ್ಡ ಅಡ್ಡಿ ನಿವಾರಣೆಯಾಗಿದೆ.

    ಕೇಸ್ ವಜಾ ಬೆನ್ನಲ್ಲೇ ಫಸ್ಟ್ ರಿಯಾಕ್ಷನ್ ನೀಡಿದ ಮುನಿರತ್ನ, ನ್ಯಾಯಕ್ಕೆ ಜಯ ಸಿಕ್ಕಿದೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧ. ಮತದಾರರ ನಕಲಿ ಗುರುತಿನ ಚೀಟಿ ಪ್ರಕರಣ ಸುಳ್ಳುದಾವೆ ಅದು. 2018ರಲ್ಲಿ ನನ್ನ ಗೆಲುವು ನ್ಯಾಯಯುತವಾಗಿಯೇ ಬಂದುದಾಗಿತ್ತು. ಈಗ ಕೊಂಚ ನಿರಾಳವಾಗಿದೆ ಎಂದು ಹೇಳಿದ್ರು.

    ಇದನ್ನೂ ಓದಿ:  ಹಾಲಿನ ವ್ಯಾನಲ್ಲಿ ಗೋಮಾಂಸ ಸಾಗಾಟ: ಪತ್ತೆ ಮಾಡಿದ್ರು ಬಜರಂಗ ದಳದ ಕಾರ್ಯಕರ್ತರು 

    ನಕಲಿ ಮತದಾರರ ಚೀಟಿ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್​ನಲ್ಲಿ ಕೇಸ್ ದಾಖಲಿಸಿದ್ದ ತುಳಸಿ ಮುನಿರಾಜು ಅವರ ಹೆಸರು ಕೂಡ ಆರ್​.ಆರ್.ನಗರ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದೆ. ಬಿಜೆಪಿಗೆ ಪಕ್ಷಾಂತರ ಮಾಡಿರುವ ಮುನಿರತ್ನ ಅವರಿಗೆ ತುಳಸಿ ಮುನಿರಾಜು ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎದುರಾಳಿಯಾಗಿದ್ದರು. ಈಗ ಇಬ್ಬರೂ ಬಿಜೆಪಿಯಲ್ಲಿ ಇರುವ ಕಾರಣ ಟಿಕೆಟ್ ಯಾರಿಗೆ ಎಂಬುದು ಇಂದು ಇತ್ಯರ್ಥವಾಗುವ ನಿರೀಕ್ಷೆ ಇದೆ. (ದಿಗ್ವಿಜಯ ನ್ಯೂಸ್) 

    ಧರ್ಮಗುರುಗಳ ಮೇಲೆ ಚಪ್ಪಲಿ ಎಸೆದವರಿಗೆ ನಮ್ಮ ಪಕ್ಷದಲ್ಲಿ ಪ್ರವೇಶ ಇಲ್ಲ: ಬಿಜೆಪಿ ನಾಯಕ ವಿಜುಗೌಡ ಪಾಟೀಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts