More

    ಜಿಲೆಟಿನ್ ಬಳಸಿ ಬ್ಲಾಸ್ಟಿಂಗ್: ಬಿಜೆಪಿ ಶಾಸಕ ಸೇರಿ ನಾಲ್ವರ ವಿರುದ್ಧ ಎಫ್​​​ಐಆರ್

    ಬೆಂಗಳೂರು: ಬಿಜೆಪಿ ಮಾಜಿ ಸಚಿವ ಹಾಗೂ ಆರ್​​​ಆರ್​​ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ದ ಎಫ್​​ಐಆರ್ ದಾಖಲಾಗಿದೆ.

    ಇದನ್ನೂ ಓದಿ: ಗನ್​ ತೋರಿಸಿ ಕಾರು ಕದ್ದೊಯ್ದ 8 ವರ್ಷದ ಬಾಲಕ…

    ಬೆಂಗಳೂರು ಉತ್ತರ ತಾಲೂಕಿನ ಹುಣಸಮಾರನಹಳ್ಳಿಯ ಜಮೀನಿನಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಳೆದ ಸೋಮವಾರ ಬ್ಲಾಸ್ಟಿಂಗ್ ಮಾಡಿ ಗಣಿಗಾರಿಕೆ ಮಾಡುತ್ತಿದ್ದಾರೆ ನೂರಾರು ಜನರು ಜಾಗದ ಎದುರು ಪ್ರತಿಭಟನೆ ನಡೆಸಿ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

    ಪ್ರತಿಭಟನೆ ಹಿನ್ನೆಲೆಯಲ್ಲಿ ಯಲಹಂಕ ತಹಶೀಲ್ದಾರ್ ಅನಿಲ್ ಅರಳೋಕರ್ ತಂಡವು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸರ್ಕಾರಿ ಜಮೀನು ಸೇರಿದಂತೆ ಖಾಸಗಿ ಜಮೀನಿನಲ್ಲಿ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ, ತಹಶೀಲ್ದಾರ್​​ ದೂರಿನ ಮೇರೆಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ‌ ಕೇಸ್​ ದಾಖಲಾಗಿದೆ.

    ಅನುಮತಿ ಪಡೆಯದೆ ಅಕ್ರಮವಾಗಿ ಜಿಲೆಟಿನ್ ಬಳಸಿ ಬ್ಲಾಸ್ಟಿಂಗ್ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ. A1 ಆರೋಪಿಯಾಗಿ ಆನಂದನ್, A2 ಆರೋಪಿಯಾಗಿ ಗಣೇಶ್, A3 ಆರೋಪಿಯಾಗಿ ರಾಧಮ್ಮ A4 ಆರೋಪಿಯಾಗಿ ಮುನಿರತ್ನ ವಿರುದ್ದ ಸ್ಪೋಟಕ‌ ಖಾಯ್ದೆ, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅಡಿಯಲ್ಲಿ ಕೇಸ್ ದಾಖಲಾಗಿದೆ.

    ದ್ವೇಷದ ರಾಜಕಾರಣ ಎಂದ ಮುನಿರತ್ನ:
    ನನ್ನ ಕ್ಷೇತ್ರದ ಅಧಿಕಾರಿಗಳ ಅಮಾನತು ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ನಿನ್ನೆಯಷ್ಟೆ ಡಿಸಿಎಂ ವಿರುದ್ಧ ಸದನದಲ್ಲಿ ಮುನಿರತ್ನ ಆರೋಪಿಸಿದ್ದರು. ಇದರ ಬೆನ್ನಲ್ಲೇ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

    ಇನ್ನು ಈ ಕುರಿತು ಮಾತನಾಡಿದ ಶಾಸಕರು, ಅದು ಸರ್ಕಾರಿ ಜಾಗ ಅಲ್ಲ. ತಮ್ಮ ಜಾಗ, ತಾವು 25 ವರ್ಷದ ಹಿಂದೆ ಖರೀದಿಸಿದ ಸ್ಥಳದಲ್ಲಿ ಕಟ್ಟಡ ಕಟ್ಟಲು ತಳಪಾಯ ತೆಗೆಯಲಾಗುತ್ತಿದೆ. ತಮ್ಮ ಜಾಗದಲ್ಲಿ ಕಟ್ಟಡ ಕಟ್ಟುವುದು ತಪ್ಪಾ? ಪಾಯವನ್ನು ಅಗೆಯುವಾಗ ಕಲ್ಲುಗಳು ಬಂದಿದ್ದು, ಅದನ್ನ ತೆಗೆಯಲು ಒಂದು ಏಜೆನ್ಸಿಗೆ ಕೊಟ್ಟಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts