More

    ಮಾಜಿ ಸಚಿವ ಮುನಿರತ್ನ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ? ನೂರಾರು ಜನರಿಂದ ಪ್ರತಿಭಟನೆ…

    ಬೆಂಗಳೂರು: ಮಾಜಿ ಸಚಿವ ಮುನಿರತ್ನ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದ್ದು ನೂರಾರು ಜನರು ಅವರ ಜಾಗದ ಎದುರು ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಬೆಂಗಳೂರು ಉತ್ತರ ತಾಲೂಕಿನ ಹುಣಸಮಾರನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು ಹೆದ್ದಾರಿ ಹಾಗೂ ಶಾಲೆ ಪಕ್ಕದಲ್ಲೆ ಗಣಿಗಾರಿಕೆ ಮಾಡ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಏರ್ಪೊಟ್ ರಸ್ತೆ ಹಾಗೂ ಯಲಹಂಕ ವಾಯುನೆಲೆ ಕೂಗಳತೇ ದೂರದಲ್ಲೆ ಇರುವ ಜಮೀನಿನಲ್ಲಿ ಮುನಿರತ್ನ ಗಣಿಗಾರಿಕೆ ಮಾಡುತ್ತಿರುವುದಾಗಿ ಆರೋಪಿಸಲಾಗುತ್ತಿದ್ದು, ಗಣಿಗಾರಿಕೆಯ ಬ್ಲಾಸ್ಟಿಂಗ್​ನಿಂದ ತೊಂದರೆಯಾಗುತ್ತಿದೆ ಎಂದು ಧರಣಿ ಕುಳಿತಿರುವ ಜನರು ಮಾಜಿ ಸಚಿವರ ವಿರುದ್ದ ಧಿಕ್ಕಾರ ಕೂಗುತ್ತಿದ್ದಾರೆ.ಇದೇ ಸಂದರ್ಭ, ಗಣಿಗಾರಿಕೆಯಿಂದ ಮುಕ್ತಿ ನೀಡಿ ಎಂದು ಘೋಷಣೆ ಕೂಗುತ್ತಿದ್ದಾರೆ.

    ಧರಣಿ ಕುಳಿತಿರುವ ಜನರು, ಸ್ಥಳಕ್ಕೆ ಡಿಸಿ ಹಾಗೂ ತಹಶಿಲ್ದಾರ್ ಬರುವಂತೆ ಒತ್ತಾಯಿಸುತ್ತಿದ್ದು ಪ್ರತಿಭನಾಕಾರರ ಮನವೊಲಿಸಲು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಯತ್ನಿಸುತ್ತಿದ್ದಾರೆ.

    ವಿಪಕ್ಷ ನಾಯಕನಿಲ್ಲದೇ ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆ ನಡೆದಿದೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

    ಸುರಕ್ಷಿತವಾಗಿ ಶ್ರೀನಗರದಲ್ಲಿ ಇಳಿದ ಅಮರನಾಥ ಯಾತ್ರಿಕರು…

    ಟಿಪ್ಪುನಗರದಲ್ಲಿ ಹೆಚ್ಚುವರಿ ವಿದ್ಯುತ್​ ಬಿಲ್​ ಬಂದದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts