More

    ಸುರಕ್ಷಿತವಾಗಿ ಶ್ರೀನಗರದಲ್ಲಿ ಇಳಿದ ಅಮರನಾಥ ಯಾತ್ರಿಕರು…

    ಧಾರವಾಡ: ಅಮರನಾಥದಲ್ಲಿ ಧಾರವಾಡಿಗರು ಸಿಲುಕಿದ್ದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಪರಿಸ್ಥಿತಿಯನ್ನು ಜಗತ್ತಿನೊಂದಿಗೆ ಹಂಚಿಕೊಂಡಿದ್ದರು. ಇದೀಗ ಅವರು ಶ್ರೀನಗರ ತಲುಪಿದ್ದಾರೆ.

    ಅಮರನಾಥ ಯಾತ್ರೆಗೆಂದು ಧಾರವಾಡದಿಂದ ಐವರು ಯುವಕರ ತಂಡ ತೆರಳಿದ್ದು ಪಂಚತಾರಣಿ ಬಳಿ ಗುಡ್ಡ ಕುಸಿತದ ಕಾರಣ ಸಿಲುಕಿದ್ದರು. ಕಳೆದ ನಾಲ್ಕು ದಿನಗಳಿಂದ ಅವರು ಟೆಂಟ್‌ನಲ್ಲಿ ವಾಸ ಮಾಡಿದ್ದಾರೆ. ಈ ಸಂದರ್ಭ ಅವರ ರಕ್ಷಣೆ ಮಾಡಬೇಕು ಎಂದು ಕೇಳಿಕೊಂಡಿದ್ದರು. ಅದರಂತೆ ಸೂಕ್ತ ರಕ್ಷಣೆ ನೀಡುವಂತೆ ಸಿಎಂ ಕೂಡ ಸೂಚನೆ ನೀಡಿದ್ದರು.

    ಇದನ್ನೂ ಓದಿ: ಅಮರನಾಥದಲ್ಲಿ ಸಿಲುಕಿಕೊಂಡ ಧಾರವಾಡಿಗರು

    ಅವರು ಹೆಲಿಕಾಪ್ಟರ್ ಮೂಲಕ ತಲಾ 4200 ರೂ. ಹಣ ತೆತ್ತು ಶ್ರೀನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ ವಎನ್ನಲಾಗಿದ್ದು ಧಾರವಾಡಿಗರು ಸದ್ಯ ಶ್ರೀನಗರದಲ್ಲಿದ್ದಾರೆ.

    ರಾಕೇಶ ನಾಝರೆ, ವಿಠ್ಠಲ ಬಾಚಗುಂಡಿ, ಹರೀಶ ಸಾಳುಂಕೆ, ನಾಗರಾಜ ಮತ್ತು ಮಡಿವಾಳಪ್ಪ ಕೊಟಬಾಗಿ ಜು. 3ರಂದು ಧಾರವಾಡದಿಂದ ತೆರಳಿದ್ದರು. ಇವರು ಜು. 6ರಂದು ಅಮರನಾಥ ದರ್ಶನ ಪಡೆದು ವಾಪಸ್​ ಬರುವಾಗ ಮಳೆ ಹಾಗೂ ಗುಡ್ಡ ಕುಸಿತದಿಂದಾಗಿ ಸಿಲುಕಿ ಬಿದ್ದಿದ್ದರು.

    ಇದನ್ನೂ ಓದಿ: ನಾಲ್ಕು ದಶಕಗಳಿಂದ ಶಿಕ್ಷಕರ ಹಿತ ಕಾಯುತ್ತಾ ಬಂದ ಬಸವರಾಜ್​ ಹೊರಟ್ಟಿ: ಡಾ. ಬಸವರಾಜ ಧಾರವಾಡ

    ಈ ಕುರಿತಾಗಿ ಅವರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದು “ಅಮರಾನಾಥ್ ಯಾತ್ರೆಗೆ ತೆರಳಿ ಸ್ವಾಮಿಯ ದರ್ಶನ್ ಪಡೆದು ಮರಳಿ ಬರುವಾಗ ಪಂಚತರಣಿಯಲ್ಲಿ ಅಪಾರ ಮಳೆಯಾಗಿ ಗುಡ್ಡ ಕುಸಿಯುತ್ತಿದ್ದವು. 4 ದಿನದಿಂದ 36 km ಗುಡ್ಡದ ಮೇಲೆ ಸಿಲುಕಿಕೊಂಡಿದ್ದೆವು. ಇಂದು ಮಳೆ ಕಡಿಮೆಯಾಗಿದ್ದು ನಾವು ಸುರಕ್ಷಿತವಾಗಿ ಮರಳುತ್ತಿದ್ದೇವೆ. ಎಲ್ಲಾ ಮಾಧ್ಯಮದ ಮಿತ್ರರಿಗೆ ಹಾಗೂ ಶ್ರೀ ಪ್ರಹ್ಲಾದ್ ಜೋಶಿ ಸರ್, ಶ್ರೀ ಸಂತೋಷ್ ಲಾಡ್ ಸರ್, ಶ್ರೀ ಪ್ರಸಾದ್ ಅಬ್ಬಯ್ಯ, ಶ್ರೀ ವಿನಯ್ ಕುಲಕರ್ಣಿ ಸರ್ ಇವರೆಲ್ಲರೂ ನಮ್ಮನ್ನು ಸಂಪರ್ಕಿಸಿ ಮಾತನಾಡಿದ್ದಾರೆ ಇವರಿಗೆಲ್ಲರಿಗೂ ತುಂಬಾ ಧನ್ಯವಾದಗಳು” ಎಂದು ಧನ್ಯವಾದ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts