ಹಳೆಯ ವಸ್ತುಗಳಿಂದ ಹೊಳೆವ ಅಲಂಕಾರ

blank

ಬೆಂಗಳೂರು: ಮನೆ ಎಲ್ಲರ ಇಷ್ಟದ ತಾಣ. ಹಾಗಾಗಿ ಎಷ್ಟು ಅಲಂಕರಿಸಿದರೂ ಸಾಲದು, ಎಷ್ಟು ಸ್ವಚ್ಛಗೊಳಿಸಿದರೂ ಸಮಾಧಾನವಾಗದು. ಇನ್ನು ಹಬ್ಬ ಸೇರಿ ಶುಭ ಸಮಾರಂಭಗಳು ಬಂದಾಗಲಂತೂ ಸ್ವಚ್ಛತೆ ವಿಚಾರದಲ್ಲಿ ಡಬಲ್ ಕಾಳಜಿ. ದುಬಾರಿ ವಸ್ತುಗಳನ್ನು ಖರೀದಿಸಿ ಸುಂದರವಾಗಿ ಜೋಡಿಸಿ ಮನೆ ಅಲಂಕಾರ ಮಾಡುವುದು ಒಂದೆಡೆ, ಬೇಡದ ವಸ್ತುಗಳನ್ನು ಬಳಸಿ ಯಾವುದೇ ಖರ್ಚಿಲ್ಲದೆ ಅಂದವನ್ನು ಇಮ್ಮಡಿಗೊಳಿಸುವುದು ಇನ್ನೊಂದು ಬಗೆ.

ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಬಳಸುವ ಪಿಂಗಾಣಿ ಪಾತ್ರೆಗಳು ಒಡೆದು ಹೋಗುತ್ತವೆ. ಇನ್ನು ಕೆಲ ಸಮಯ ನಂತರ ಪ್ಲಾಸ್ಟಿಕ್ ಡಬ್ಬಿಗಳು ಬೇಡವೆನ್ನಿಸುತ್ತವೆ. ಇವುಗಳ ವಿಲೇವಾರಿ ಕಷ್ಟ. ಆದರೆ ಇಂಥ ವಸ್ತುಗಳನ್ನು ಬಳಸಿ, ಅವುಗಳಲ್ಲಿ ಹೂಗಳನ್ನಿಟ್ಟು ಟೇಬಲ್ ಮೇಲಿಡಬಹುದು. ಕಲಾಸಕ್ತಿ ಇದ್ದರೆ, ಡಬ್ಬಿ, ಬಟ್ಟಲುಗಳ ಮೇಲೆ ಚಿತ್ತಾರ ಬಿಡಿಸಿ, ಅದರಲ್ಲಿ ಹೂವಿನ ಗಿಡಗಳನ್ನು ನೆಟ್ಟು, ಮನೆಯ ಕಿಟಕಿ ಬಳಿ ಅಥವಾ ಲಿವಿಂಗ್ ಏರಿಯಾಗಳಲ್ಲಿ ಚೆಂದಗಾಣುವಂತೆ ಜೋಡಿಸಬಹುದು.

ಪ್ಲಾಸ್ಟಿಕ್ ಬಾಟಲಿಗಳು: ಎಲ್ಲರ ಮನೆಯಲ್ಲಿಯೂ ಶಾಂಪೂ, ಲೈಸಾಲ್, ಹಾರ್ಪಿಕ್ ನಂತರ ಬಾಟಲಿಗಳು ಇದ್ದೇ ಇರುತ್ತವೆ. ಇವನ್ನು ಚೆನ್ನಾಗಿ ತೊಳೆದ ಸೆಣಬಿನ ಹಗ್ಗ, ಬಣ್ಣ ಬಣ್ಣದ ಪೇಪರ್ ಅಥವಾ ರಟ್ಟಿನಿಂದ ಅಲಂಕರಿಸಬಹುದು. ನಂತರ ಅದಕ್ಕೆ ಒಂದೆರಡು ಸುಗಂಧಭರಿತ ಹೂ ಇಲ್ಲವೆ ಕೃತಕ ಹೂ ಹಾಕಿ ಟೇಬಲ್ ಅಥವಾ ಕಿಟಕಿ ಇಲ್ಲವೆ ಸಜ್ಜೆಗಳ ಮೇಲಿಟ್ಟರೆ ಅಕರ್ಷಕವಾಗಿ ಕಾಣುತ್ತದೆ. ಇದು ಮನೆಗೆ ಒಂದು ವಿಶೇಷ ಲುಕ್ ನೀಡಲಿದೆ.

ಹೆಣೆದ ಹೂದಾನಿಗಳು: ಬಿದಿರು, ಪ್ಲಾಸ್ಟಿಕ್ ವೈರ್ ಬಳಸಿಕೊಂಡು ಚೆಂದದ ಹೂಗಳೊಂದಿಗೆ ಮನೆಯನ್ನು ಅಂದವಾಗಿಸಬಹುದು. ಪ್ಲಾಸ್ಟಿಕ್ ವೈರ್‌ಗಳನ್ನು ಸುಲಭದಲ್ಲಿ ಹೆಣೆಯಬಹುದು. ಹೂದಾನಿಗಳ ರೂಪದಲ್ಲಿ ಹೆಣೆದುಕೊಂಡರೆ ಅದರೊಳಗೆ ಹೂಗಳನ್ನಿಟ್ಟು ಮನೆಯೊಳಗಿನ ಗೋಡೆಗೆ ಅಥವಾ ಬಾಗಿಲುಗಳ ಅಕ್ಕಪಕ್ಕ ತೂಗು ಹಾಕಬಹುದು.

ಮಗ್ ಅಥವಾ ಕ್ಯಾನ್‌ಗಳು: ಮನೆಯಲ್ಲಿ ಬಳಸಿ ಹಾಳಾದ ಪ್ಲಾಸ್ಟಿಕ್ ಕ್ಯಾನ್ ಅಥವಾ ಮಗ್‌ಗಳಿಗೆ ಸಣ್ಣ ರಂಧ್ರ ಮಾಡಿ, ಹೊರಭಾಗಕ್ಕೆ ಬಣ್ಣ ಬಳಿದು ಒಳಗಿನಿಂದ ಮಣ್ಣು- ಗೊಬ್ಬರ ಹಾಕಿ ಬಳ್ಳಿಯಂತಹ ಗಿಡಗಳನ್ನು ಬೆಳೆಸಿ ಮನೆಯ ಗೋಡೆಗಳ ಮೂಲೆಯಲ್ಲಿ ಇಲ್ಲವೆ ಕಿಟಕಿಯ ಸಜ್ಜೆಗಳಲ್ಲಿ, ಡೈನಿಂಗ್ ಟೇಬಲ್ ಹಾಗೂ ಟೀಪಾಯಿಗಳ ಮೇಲೆ ಇಟ್ಟರೆ ಹೊಸ ಲುಕ್ ನೀಡಲಿದೆ.

ಮಾನಸಿಕ ಆರೋಗ್ಯಕ್ಕೆ ಪೂರಕ: ಹಸಿರು ಗಿಡಗಳು ಹಾಗೂ ಬಣ್ಣ ಬಣ್ಣದ ಹೂಗಳು ಮನೆ ಅಂದ ಹೆಚ್ಚಿಸುವುದು ಮಾತ್ರವಲ್ಲದೆ ಕಣ್ಣಿಗೆ ಹಾಗೂ ಮನಸ್ಸಿಗೆ ಹಿತಾನುಭವ ನೀಡಲಿದೆ. ಅಲ್ಲದೆ ಈ ರೀತಿ ಹೂವು ಹಾಗೂ ಸಸ್ಯಗಳಿಂದ ಮನೆಯಲ್ಲಿ ಸದಾ ತಾಜಾತನದ ಅನುಭವ ನೀಡಲಿದೆ. ಮಾನಸಿಕ ಒತ್ತಡವೂ ನಿವಾರಣೆಯಾಗುತ್ತದೆ.

ಆಮ್ಲಜನಕ ಪೂರೈಕೆ: ಮನೆಯಲ್ಲಿ ಹಸಿರು ಗಿಡಗಳು ಹಾಗೂ ಹೂವಿನ ಗಿಡಗಳನ್ನು ಬೆಳೆಸುವುದರಿಂದ ಆಮ್ಲಜನಿಕ ಪರಿಚಲನೆ ಸುಧಾರಿಸುತ್ತದೆ. ಮನೆಯಲ್ಲಿ ತಾಜಾ ಹೂವುಗಳು ಕೇವಲ ಅಲಂಕಾರಿಕವಲ್ಲ. ಇದು ಮನೆಯೊಳಗೆ ಹಿತವಾದ ಗಾಳಿ ಬರಲು ಸಹಾಯ ಮಾಡುತ್ತದೆ. ಮಾಲಿನ್ಯದ ಮಟ್ಟ ಅಧಿಕವಾಗಿರುವ ನಗರದಲ್ಲಿ ವಾಸಿಸುವಾಗ ಈ ರೀತಿ ಗಿಡಗಳಿಂದ ಮನೆ ಅಲಂಕರಿಸಿದರೆ ವಿಶೇಷವಾಗಿ ಸಹಾಯ ಆಗಲಿದೆ.

Share This Article

ಏಳನೇ ತಿಂಗಳಲ್ಲಿ ಹೆರಿಗೆಯಾದರೆ ಏನಾಗುತ್ತದೆ?; ಮಗುವಿನ ಆರೋಗ್ಯದ ಮೇಲಾಗುವ ಪರಿಣಾಮವೇನು.. ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಗರ್ಭಾವಸ್ಥೆಯಲ್ಲಿ ಮಗುವನ್ನು 9 ತಿಂಗಳುಗಳ ಕಾಲ ಇಟ್ಟುಕೊಳ್ಳುವುದು ಮುಖ್ಯ ಎಂದು ವೈದ್ಯರು ಸೇರಿದಂತೆ ಎಲ್ಲಾ ತಜ್ಞರು…

ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಬೇಕೇ?; ಅಡುಗೆಮನೆಯಲ್ಲಿನ ಈ 2 ವಸ್ತುಗಳನ್ನು ತಪ್ಪದೆ ಬಳಸಿ | Health Tips

ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿ ಮತ್ತು ಅನಿಯಮಿತ ಆಹಾರ ಪದ್ಧತಿಯಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವ ಸಮಸ್ಯೆ…

ಚಳಿಗಾಲದಲ್ಲಿ ಹುಣಸೆಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? health benefits of tamarind

health benefits of tamarind : ನಮ್ಮ ದಿನನಿತ್ಯದ ಅಡುಗೆಯಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ ನಮಗೆ ಅರಿವಿಲ್ಲದೆಯೇ…