ಇನ್‌ಸ್ಟಾಗ್ರಾಂನಲ್ಲಿ 30 ಕೋಟಿ ಫಾಲೋವರ್ಸ್‌ ಹೊಂದಿ ವಿಶ್ವ ದಾಖಲೆ ಮಾಡಿದ ಮಾಡೆಲ್‌: ಯಾರೀಕೆ?

model
Published on

ನ್ಯೂಯಾರ್ಕ್‌: ಅಮೆರಿಕದ ಮಾಡೆಲ್‌, ರಿಯಾಲಿಟಿ ಷೋ ತಾರೆ ಹಾಗೂ ಉದ್ಯಮಿ ಆಗಿರುವ ಕೈಲಿ ಜೆನ್ನರ್‌, ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ, ಇನ್‌ಸ್ಟಾದಲ್ಲಿ ಹೆಚ್ಚು ಫಾಲೋವರ್ಸ್‌ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಇವರು 300 ಮಿಲಿಯನ್‌ ಅಂದರೆ 30 ಕೋಟಿ ಫಾಲೋವರ್ಸ್‌ ಹೊಂದಿದ್ದಾರೆ. ಇಲ್ಲಿಯವರೆಗೆ ವಿಶ್ವದಾಖಲೆಯು ಪಾಪ್‌ ಸಿಂಗರ್‌ ಅರಿಯಾನಾ ಗ್ರಾಂಡೆ ಅವರ ಹೆಸರಿನಲ್ಲಿ ಇತ್ತು. ಅವರನ್ನು ಹಿಂದಿಕ್ಕಿದ ಕೈಲಿ ಜೆನ್ನರ್‌ ದಾಖಲೆ ನಿರ್ಮಿಸಿದ್ದಾರೆ. 24 ವರ್ಷ ವಯಸ್ಸಿನ ಕೈಲಿ ಜೆನ್ನರ್‌, ಮಹಿಳೆಯರಲ್ಲಿ ಪ್ರಥಮ ಸ್ಥಾನದಲ್ಲಿದ್ದರೂ, ಪುರುಷರನ್ನೂ ಸೇರಿಸಿದಾಗ ಹೆಚ್ಚು ಫಾಲೋವರ್ಸ್‌ ಹೊಂದಿದವರ ಪಟ್ಟಿಯಲ್ಲಿ ಈ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ 388 ಫಾಲೋವರ್ಸ್‌ ಹೊಂದಿರುವ ಖ್ಯಾತ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇದ್ದಾರೆ.

ಇದಾಗಲೇ ಒಂದು ಮಗುವನ್ನು ಹೊಂದಿರುವ ಕೈಲಿ, ಎರಡನೆಯ ಬಾರಿ ಗರ್ಭವತಿಯಾಗಿದ್ದಾರೆ. ಇವರ ಪತಿ ಟ್ರಾವಿಸ್‌ ಸ್ಕಾಟ್‌ ಖ್ಯಾತ ರ‍್ಯಾಪರ್‌. ಆಸ್ಟ್ರೋವರ್ಲ್ಡ್‌ ಎಂಬಲ್ಲಿ ಇವರು ಪ್ರದರ್ಶನ ನೀಡುತ್ತಿದ್ದ ವೇಳೆ ಕಾಲ್ತುಳಿತ ಉಂಟಾಗಿತ್ತು. ಅದರಲ್ಲಿ 10 ಮಂದಿ ಮೃತಪಟ್ಟಿದ್ದರು. ಇದು ಭಾರಿ ವಿವಾದ ಸೃಷ್ಟಿಸಿದ್ದರಿಂದ ನೊಂದುಕೊಂಡಿದ್ದ ಕೈಲಿ ಅವರು ಸಾಮಾಜಿಕ ಜಾಲತಾಣದಿಂದಲೂ ದೂರವಾಗಿದ್ದರು. ಇದರ ಹೊರತಾಗಿಯೂ ಇದೀಗ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿ ದಾಖಲೆ ಮಾಡಿದ್ದಾರೆ.

ಕಳೆದ ಕ್ರಿಸ್‌ಮಸ್‌ನಲ್ಲಿ ತನ್ನ ತಾಯಿ ಕ್ರಿಸ್‌ ಜೆನ್ನರ್‌ ಅವರ ಫೋಟೋವನ್ನು ಪೋಸ್ಟ್‌ ಮಾಡಿದ್ದ ಕೈಲಿ. ನಂತರ ತಾವು ಎರಡನೆಯ ಬಾರಿ ಗರ್ಭಿಣಿಯಾಗಿರುವ ಸಂಬಂಧದ ಫೋಟೋಗಳನ್ನು ಹಂಚಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net