More

    FACT CHECK: ಹಾಲು ಮಾರಾಟಗಾರ 800 ಮಕ್ಕಳ ತಂದೆಯಾದದ್ದು ನಿಜವಲ್ಲ- ಫ್ಯಾಕ್ಟ್‌ಚೆಕ್‌ನಿಂದ ಸತ್ಯ ಬಹಿರಂಗ

    ಕ್ಯಾಲಿಪೋರ್ನಿಯಾ: ರಾಂಡಲ್ ಸ್ಯಾನ್‌ ಡಿಗಿಯೋ​ ಎಂಬ ಕ್ಯಾಲಿಫೋರ್ನಿಯಾದ ಹಾಲು ಮಾರಾಟಗಾರನೊಬ್ಬ 800 ಮಕ್ಕಳ ತಂದೆಯಾಗಿದ್ದಾನೆ, ಈ ಸತ್ಯಾಂಶ ಡಿಎನ್‌ಎ ಪರೀಕ್ಷೆಯಿಂದ ಹೊರಬಂದಿದೆ ಎಂಬ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇದು ಸತ್ಯಕ್ಕೆ ದೂರವಾಗಿರುವ ಅಂಶ ಎಂಬುದು ಫ್ಯಾಕ್ಟ್‌ ಚೆಕ್‌ನಿಂದ ತಿಳಿದುಬಂದಿದೆ.

    1950ರ ಸುಮಾರಿಗೆ ಈ ಹೆಸರಿನ ವ್ಯಕ್ತಿ ಮನೆಮನೆಗೆ ಹಾಲು ಮಾರಾಟ ಮಾಡುತ್ತಿದ್ದ ಸಮಯದಲ್ಲಿ ಈತನ ರೂಪಕ್ಕೆ ಸ್ತ್ರೀಯರು ಮರುಳಾಗುತ್ತಿದ್ದರು. ಹಾಗೆಯೇ ಆ ಮಹಿಳೆಯರ ಜತೆ ಈತನ ಸಲುಗೆ ಬೆಳೆದು, ದೈಹಿಕ ಸಂಪರ್ಕದವರೆಗೂ ಹೋಗುತ್ತಿತ್ತಂತೆ. ನಂತರ ಅವರಿಗೆ ಹುಟ್ಟಿದ ಮಕ್ಕಳ ರೂಪದಲ್ಲಿ ವ್ಯತ್ಯಾಸವಿದ್ದರಿಂದ ಅವರ ಡಿಎನ್‌ಎ ಪರೀಕ್ಷೆ ಮಾಡಿದಾಗ ಸುಮಾರು 800 ಮಕ್ಕಳು ರಾಂಡಲ್ ಸ್ಯಾನ್‌ ಡಿಗಿಯೋ​ ಮಕ್ಕಳು ಎನ್ನುವುದು ಬಹಿರಂಗವಾಗಿದೆ ಎಂಬ ಸುದ್ದಿ ಪ್ರಕಟಗೊಂಡಿದ್ದವು. ಆದರೆ ಇದು ಸತ್ಯಕ್ಕೆ ದೂರವಾಗಿರುವ ಸುದ್ದಿ ಎಂದು ತೆಲುಗಿನ ಫ್ಯಾಕ್ಟ್‌ಲೀ ಫ್ಯಾಕ್ಟ್‌ಚೆಕ್‌ (Factly Fact check) ವೆಬ್‌ಸೈಟ್‌ ಬಹಿರಂಗಗೊಳಿಸಿದೆ.

    ಆ ಸಮಯದಲ್ಲಿ ಯಾವುದೇ ಡಿಎನ್‌ಎ ಪರೀಕ್ಷೆಗಳು ಇರಲಿಲ್ಲ. ಅಂಥ ಹೆಸರಿನ ವ್ಯಕ್ತಿ ಕೂಡ ಯಾರೂ ಇರಲಿಲ್ಲ ಎಂಬ ಸತ್ಯಾಂಶವನ್ನು . ಫ್ಯಾಕ್ಟ್‌ಲೀ ಫ್ಯಾಕ್ಟ್‌ಚೆಕ್‌ ಹೇಳಿದೆ.

    ‘ಕೆಲವು ವೆಬ್‌ಸೈಟ್‌ ಹಾಗೂ ಯುಟ್ಯೂಬ್‌ಗಳಲ್ಲಿ ಬಂದಿರುವ ವರದಿ ಮತ್ತು ಅದರಲ್ಲಿ ಪ್ರಕಟವಾಗಿರುವ ಫೋಟೋಗಳ ಕುರಿತಂತೆ ಫ್ಯಾಕ್ಟ್‌ಚೆಕ್‌ ಮೂಲಕ ಹುಡುಕಾಟ ನಡೆಸಿದಾಗ ಈ ವರದಿ ಮೊದಲು 2021ರ ಡಿಸೆಂಬರ್‌ 24ರಂದು ಡೈಲಿ ನ್ಯೂಸ್‌ ಎಂಬ ವೆಬ್‌ಸೈಟ್‌ನಲ್ಲಿ ವರದಿಯಾಗಿದೆ. ಅದನ್ನು ಬಿಟ್ಟರೆ ಕೆಲವು ವೆಬ್‌ಸೈಟ್‌ ಹಾಗೂ ಯೂಟ್ಯೂಬ್‌ಗಳಲ್ಲಿ ಪ್ರಕಟವಾಗಿವೆ. ಪ್ರಮುಖ ಪ್ರಮುಖ ಸುದ್ದಿ ಸಂಸ್ಥೆಗಳಲ್ಲಿ ಎಲ್ಲಿಯೂ ಪ್ರಕಟವಾಗಲಿಲ್ಲ. ಒಂದು ವೇಳೆ ಇಂತಹ ಘಟನೆ ನಿಜವಾಗಿಯೂ ನಡೆದಿದ್ದರೆ ಜಗತ್ತಿನ ಎಲ್ಲಾ ಪ್ರಮುಖ ಸುದ್ದಿ ಸಂಸ್ಥೆಗಳು, ವೆಬ್‌ಸೈಟ್‌ಗಳ ಈ ಸುದ್ದಿಯನ್ನು ಪ್ರಕಟಿಸುತ್ತಿದ್ದವು’ ಎಂದು ‘ಫ್ಯಾಕ್ಟ್‌ಲೀ ಫ್ಯಾಕ್ಟ್‌ಚೆಕ್‌’ ತಿಳಿಸಿದೆ.

    ಇದನ್ನು ಮೊದಲಿಗೆ ಪ್ರಕಟಿಸಿದ ‘ಡೈಲಿ ನ್ಯೂಸ್’ ವೆಬ್‌ಸೈಟ್‌ ಇದನ್ನು ಕಾಲ್ಪನಿಕ ಮತ್ತು ಹಾಸ್ಯವನ್ನು ಪ್ರಕಟಿಸಿದೆ ಎಂದು ತಿಳಿದುಬಂದಿದೆ. ಈ ಲೇಖನಗಳಲ್ಲಿ ಉಲ್ಲೇಖಿಸಿರುವ ಹೆಸರುಗಳು ನಿಜವಲ್ಲ, ಅವು ಕೇವಲ ಕಾಲ್ಪನಿಕ ಎಂಬುದು ತಿಳಿದಿದೆ. ಅಷ್ಟೇ ಅಲ್ಲದೇ, ಲೇಖನದಲ್ಲಿ ಪ್ರಕಟವಾಗಿರುವ ‘ಮಿಲ್ಕ್ ಮ್ಯಾನ್’ ವ್ಯಕ್ತಿ ಫೋಟೋ ಕೂಡ ಸ್ಟಾಕ್ ಫೋಟೋ ವೆಬ್‌ಸೈಟ್‌ನಿಂದ ತೆಗೆದಿರುವುದು ಗೊತ್ತಾಗಿದೆ. ಇದೇ ಸುದ್ದಿಯನ್ನು ವಿಡಿಯೋ ರೂಪದಲ್ಲಿ ಕೂಡ ಕೆಲವೆಡೆ ಪ್ರಕಟಿಸಲಾಗಿದೆ. ಇವುಗಳಲ್ಲಿ ಬಳಸಿರುವ ಫೋಟೋಗಳು ಸ್ಟಾಕ್ ಫೋಟೋ ವೆಬ್‌ಸೈಟ್‌ಗಳಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ ಎಂದು ಫ್ಯಾಕ್ಟ್‌ಚೆಕ್‌ನಿಂದ ತಿಳಿದುಬಂದಿದೆ.

    ಬಿರುಗಾಳಿ ಎಬ್ಬಿಸಿದ್ದ ‘ಮೀ ಟೂ’ ಪ್ರಕರಣ: ಸಿಗಲಿಲ್ಲ ಸಾಕ್ಷ್ಯಾಧಾರ, ಆಕ್ಷೇಪ ಎತ್ತಲಿಲ್ಲ ನಟಿ- ಅರ್ಜುನ್‌ ಸರ್ಜಾಗೆ ರಿಲೀಫ್

    ಕಳುವಾಗಿದ್ದ ವಸ್ತುಗಳು ಸಿಕ್ಕರೂ ಪೊಲೀಸರು ಕೊಡಲಿಲ್ಲ! 22 ವರ್ಷ ಕೋರ್ಟ್‌ ಅಲೆದಾಡಿ ‘ಗೆದ್ದ’ ಮಾಲೀಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts