More

    ಹಸಿ ಕೋಳಿ ಮಾಂಸವನ್ನು ಗಬಗಬನೇ ತಿನ್ನುತ್ತಿರುವ ಬಾಲಕ! ತಂದೆ ಹೇಳಿದ ಮಾತು ಕೇಳಿದ್ರೆ ದಂಗಾಗ್ತೀರಾ

    ಬೆಂಗಳೂರು: ಹಸಿ ಮಾಂಸ ಸೇವನೆಯಿಂದ ಅಪಾಯಗಳು ಕಟ್ಟಿಟ್ಟಬುತ್ತಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಸಿ ಮಾಂಸದಲ್ಲಿರುವ ಅತಿಯಾದ ವಿಟಮಿನ್ ಎ ಮತ್ತು ತಾಮ್ರದ ಅಂಶವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡಬಹುದು. ಬ್ಯಾಕ್ಟೀರಿಯಾದ ಮಾಲಿನ್ಯ ಮತ್ತು ನಂತರದ ಸೋಂಕುಗಳು ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಬೇಯಿಸದ ಆಹಾರವನ್ನು ಸೇವಿಸಲೇಬೇಡಿ ಎಂದು ವೈದ್ಯರು ಹೇಳುತ್ತಾರೆ.

    ವೈದ್ಯರು ಇಷ್ಟೆಲ್ಲ ಹೇಳಿದರು ಸಹ ಇಲ್ಲೊಬ್ಬ ಪುಣ್ಯಾತ್ಮ ತನ್ನ ಪುತ್ರನಿಗೆ ಹಸಿ ಮಾಂಸ ತಿನ್ನಲು ಉತ್ತೇಜನ ನೀಡುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ramesh1t ಹೆಸರಿನ ಇನ್​ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಅಪ್​ಲೋಡ್​ ಮಾಡಲಾಗಿದೆ. ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ಪ್ಲ್ಯಾಸ್ಟಿಕ್​ ಕವರ್​ನಿಂದ ಒಂದೊಂದೆ ಚಿಕನ್​ ಪೀಸ್​ ತೆಗೆದು ತಿನ್ನುತ್ತಿರುವ ದೃಶ್ಯವಿದೆ. “ಹಸಿ ಚಿಕನ್​ ತಿಂತಿರೋ ನನ್ನ ಮಗ, ಇವನಿಗೆ ಚಿಕನ್​ ಅಂದರೆ ತುಂಬಾ ಇಷ್ಟ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ, ಇದರ ಮುಂದಿನ ಪರಿಣಾಮದ ಬಗ್ಗೆ ತಂದೆಯಾದವನು ಯೋಚನೆ ಮಾಡಿಯೇ ಇಲ್ಲ.

    ಬಾಲಕ ಹಸಿ ಮಾಂಸ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಮೂಲ ಯಾವುದು ಎಂಬುದು ತಿಳಿದಿಲ್ಲ. ಆದರೆ, ಈವರೆಗೂ 2 ಲಕ್ಷಕ್ಕೂ ಅಧಿಕ ಮಂದಿ​ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿದ ಬಹುತೇಕ ನೆಟ್ಟಿಗರು ಬಾಲಕನ ತಂದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿಯ ವಿಡಿಯೋ ಮಾಡಿದ್ದೀರಲ್ಲ ನಿಮಗೆ ಸ್ವಲ್ಪನೂ ಬುದ್ಧಿ ಇಲ್ವಾ? ಆ ಮಗುಗೆ ನೀವು ಬುದ್ಧಿ ಹೇಳಬೇಕು ಅಂಥದ್ರಲ್ಲಿ ನೀವೇ ತಿನ್ನೋಕೆ ಕೊಟ್ಟು, ವಿಡಿಯೋ ಬೇರೆ ಮಾಡಿದ್ದೀರಲ್ಲ ನಿಮಗೇನು ಬುದ್ಧಿ ಇಲ್ವಾ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮೂಲಕ ಟೀಕಿಸಿದ್ದಾರೆ.

    ಮಗುವಿನ ಆರೋಗ್ಯ ಹಾಳಾಗುತ್ತದೆ, ಏನ್ರೀ ಸ್ವಾಮಿ ನಿಮಗಾದ್ರೂ ಬುದ್ಧಿ ಬೇಡ್ವಾ? ಕರುಳು ಹುಣ್ಣಾಗುತ್ತದೆ. ಹಸಿ ಮಾಂಸ ತಿನ್ನೋಕೆ ಬಿಟ್ರೆ ಮುಂದೊಂದು ದಿನ ವಿಷ್ಯ ಬೇರೆ ಆಗುತ್ತದೆ ಎಂದು ಮತ್ತೊಬ್ಬ ನೆಟ್ಟಿಗ ಬುದ್ಧಿಮಾತು ಹೇಳಿದ್ದಾರೆ. ಅಲ್ಲದೆ, ಮುಂದೆ ಮಗುವಿನ ಮೇಲೆ ತೀವ್ರ ಪರಿಣಾಮ ಬೀರಬಹುದು ಹೀಗಾಗಿ ಇಂತಹ ಅಭ್ಯಾಸಗಳಿಂದ ದೂರವಿರಿ ಎಂದು ನೆಟ್ಟಿಗರು ಬಾಲಕನ ತಂದೆ ಬುದ್ಧಿಮಾತು ಹೇಳಿದ್ದಾರೆ.

    ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಮಕ್ಕಳನ್ನು ಬೆಳೆಸುವಾಗ ತುಂಬಾ ಎಚ್ಚರದಿಂದ ಬೆಳೆಸಬೇಕು. ಇಲ್ಲಿ ಹಸಿ ಮಾಂಸವನ್ನು ತಂದೆಯೇ ಮಗನಿಗೆ ತಿನ್ನಲು ಕೊಟ್ಟಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಮುಂದೆ ಇದೇ ಗೀಳಾಗಿ ಪರಿಣಮಿಸಿದರೆ ಮಗುವಿನ ಪ್ರಾಣಕ್ಕೂ ಸಂಚಕಾರ ಬರುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಹುಚ್ಚಾಟಗಳನ್ನು ಬಿಟ್ಟುಬಿಡುವುದು ಉತ್ತಮ ಎಂದು ಹೇಳಬಹುದು.

    ಹಸಿ ಮಾಂಸ ಆರೋಗ್ಯಕ್ಕೆ ಒಳ್ಳೆಯದಾ? ಸೋಶಿಯಲ್​ ಮೀಡಿಯಾ ಸ್ಟಾರ್​ಗಳ ವಾದಕ್ಕೆ ತಜ್ಞರ ಉತ್ತರವೇನು?

    ಜಪಾನ್​ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 92ಕ್ಕೆ ಏರಿಕೆ: 242ಕ್ಕೂ ಹೆಚ್ಚು ಮಂದಿ ನಾಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts