More

    ಹಸಿ ಮಾಂಸ ಆರೋಗ್ಯಕ್ಕೆ ಒಳ್ಳೆಯದಾ? ಸೋಶಿಯಲ್​ ಮೀಡಿಯಾ ಸ್ಟಾರ್​ಗಳ ವಾದಕ್ಕೆ ತಜ್ಞರ ಉತ್ತರವೇನು?

    ನವದೆಹಲಿ: ಪ್ರಖ್ಯಾತ ಬಾಡಿ ಬಿಲ್ಡರ್​ ಬ್ರಿಯಾನ್ ಜಾನ್ಸನ್ ಮತ್ತು ವೈದ್ಯ ಎಂದು ಹೇಳಿಕೊಂಡಿರುವ ಪಾಲ್ ಸಲಾಡಿನೊ ಸೇರಿದಂತೆ ಅನೇಕ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಹಸಿ ಮಾಂಸ ಮತ್ತು ಬಿಸಿಮಾಡದ ಹಾಲನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ವಾದಿಸಿದ್ದಾರೆ.

    ಬ್ರಿಯಾನ್​ ಜಾನ್ಸನ್​ಗೆ ಸಾಮಾಜಿಕ ಜಾಲತಾಣದಲ್ಲಿ 4 ಮಿಲಿಯನ್​ ಫಾಲೋವರ್ಸ್​ ಇದ್ದಾರೆ. ಹಸಿ ಗೋಮಾಂಸ ಮತ್ತು ಲಿವರ್​ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಾಕಾರಿ ಎಂದಿದ್ದಾರೆ. ಆದರೆ, ಆರೋಗ್ಯ ತಜ್ಞರು ಇದನ್ನು ಬಲವಾಗಿ ಖಂಡಿಸಿದ್ದಾರೆ. ಹಸಿ ಮಾಂಸ ಮತ್ತು ಬಿಸಿಮಾಡದ ಹಾಲು ಸೇವನೆಯಿಂದ ಸಂಭಾವ್ಯ ಅಪಾಯಗಳ ಬಗ್ಗೆ ಒತ್ತಿ ಹೇಳಿದ್ದಾರೆ. ಬೇಯಿಸಿದ ಮಾಂಸವು ತನ್ನ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುವುದಿಲ್ಲ. ಬದಲಾಗಿ, ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ ಮತ್ತು ಆಹಾರದಿಂದ ಹರಡುವ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಒತ್ತಿ ಹೇಳುತ್ತಾರೆ.

    ಗೋಮಾಂಸ ಮತ್ತು ಲಿವರ್​ ಸೇರಿದಂತೆ ಹಸಿ ಮಾಂಸವು ಸಾಲ್ಮೊನೆಲ್ಲಾ ಮತ್ತು ಕ್ಯಾಂಪಿಲೋಬ್ಯಾಕ್ಟರ್‌ನಂತಹ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಇದು ಅತಿಸಾರದಂತಹ ತೀವ್ರವಾದ ಸೋಂಕನ್ನು ಉಂಟುಮಾಡುತ್ತದೆ. ಸೆಂಟರ್​​ ಫಾರ್ ಡಿಸೀಸ್​ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ವಾರ್ಷಿಕವಾಗಿ ಕಚ್ಛಾ ಅಥವಾ ಬೇಯಿಸದ ಆಹಾರಗಳ ಸೇವನೆಯಿಂದ ಹರಡುವ ಕಾಯಿಲೆಗಳ ಸುಮಾರು 60 ಮಿಲಿಯನ್ ಪ್ರಕರಣಗಳನ್ನು ವರದಿ ಮಾಡುತ್ತದೆ. ಇದರಿಂದ ಉಂಟಾಗುವ ಸೋಂಕುಗಳು ವಿವಿಧ ದೈಹಿಕ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿ, ಜ್ವರ, ಶೀತ, ಕೆಮ್ಮು, ಬೆವರುವುದು ಮತ್ತು ಸೀನುವಿಕೆಯಂತಹ ರೋಗಲಕ್ಷಣಗಳಿಗೆ ಗಂಭೀರ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು.

    ಇದಿಷ್ಟೇ ಅಲ್ಲದೆ, ಹಸಿ ಮಾಂಸದಲ್ಲಿರುವ ಅತಿಯಾದ ವಿಟಮಿನ್ ಎ ಮತ್ತು ತಾಮ್ರದ ಅಂಶವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡಬಹುದು. ಬ್ಯಾಕ್ಟೀರಿಯಾದ ಮಾಲಿನ್ಯ ಮತ್ತು ನಂತರದ ಸೋಂಕುಗಳು ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುವ ಅಂತರ್ಗತ ಅಪಾಯಗಳು ಎದುರಾಗುವ ಸಾಧ್ಯತೆ ಇರುವುದರಿಂದ ಬೇಯಿಸದ ಆಹಾರವನ್ನು ಸೇವಿಸಲೇಬೇಡಿ ಎಂದು ಸಿಡಿಸಿ ಬಲವಾಗಿ ಸಲಹೆ ನೀಡುತ್ತದೆ. (ಏಜೆನ್ಸೀಸ್​)

    ಕೊಹ್ಲಿಯಿಂದ ಸಾಧ್ಯಾನೇ ಇಲ್ಲ! ಅಚ್ಚರಿಯ ಹೇಳಿಕೆ ನೀಡಿದ ವಿಂಡೀಸ್​ ಕ್ರಿಕೆಟ್​ ದಿಗ್ಗಜ ಲಾರಾ

    ಇನ್ನೇನು ಚಳಿಗಾಲದಲ್ಲಿ ಶುರುವಾಗಲಿದೆ… ತಪ್ಪದೇ ಸಿಹಿ ಗೆಣಸು ತಿನ್ನಿ ದೇಹದಲ್ಲಾಗುವ ಚಮತ್ಕಾರ ನೋಡಿ

    ಚೆನ್ನೈ ಸೇರಿ ಭಾರತದ 12 ನಗರಗಳು ಜಲಸಮಾಧಿ! ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಘನಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts