More

    ರಣ ಬಿಸಿಲಿನಲ್ಲಿ ಎಳನೀರು ಯಾಕೆ ಕುಡಿಯಬೇಕು? ಕಾರಣ ಇಲ್ಲಿದೆ ನೋಡಿ!

    ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಧಗೆ ನಿಧಾನವಾಗಿ ಏರತೊಡಗಿದೆ. ಫೆಬ್ರವರಿವರೆಗೆ ಚಳಿಗಾಲ ಇರಬೇಕಿತ್ತು. ಆದರೆ, ಹವಾಮಾನ ವೈಪರಿತ್ಯದಿಂದಾಗಿ ಈ ಬಾರಿ ವಾಡಿಕೆಗಿಂತ ಮುನ್ನವೇ ಬಿಸಿಲಿನ ಕಾವು ಹೆಚ್ಚಿದೆ.

    ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ‘ಬಾಲಿವುಡ್​ ಫೈರ್ ಬ್ರಾಂಡ್ ಕಂಗನಾ ಸಿದ್ಧತೆ’! ಯಾವ ಕ್ಷೇತ್ರ ಇಲ್ಲಿದೆ ಡಿಟೇಲ್ಸ್​?

    ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ವಾಡಿಕೆಗಿಂತ 2-3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ 4 ತಿಂಗಳು ಕಾಲ ಇದೇ ವಾತಾವರಣ ಇರಲಿದೆ. ಬೇಸಿಗೆಯಲ್ಲಿ ಅಗತ್ಯವಾದ ವಿಟಮಿನ್ ಗಳು ಮತ್ತು ಖನಿಜಾಂಶಗಳನ್ನು ಹೊಂದಿ ನಮ್ಮ ದೇಹಕ್ಕೆ ತಂಪು ನೀಡಬಲ್ಲ ಯಾವುದಾದರೊಂದು ನೈಸರ್ಗಿಕ ಪಾನೀಯ ಇದೆಯೆಂದರೆ, ಅದು ನಮ್ಮ ಮನೆಯಂಗಳದ ತೆಂಗಿನ ಮರದ ಎಳನೀರು.

    ರಣ ಬಿಸಿಲಿನಲ್ಲಿ ಎಳನೀರು ಯಾಕೆ ಕುಡಿಯಬೇಕು? ಕಾರಣ ಇಲ್ಲಿದೆ ನೋಡಿ!

    ಹೌದು, ಇತ್ತೀಚಿನ ಬದಲಾದ ಜೀವನ ಶೈಲಿಯಲ್ಲಿ ಬೇಸಿಗೆಯ ಸಂದರ್ಭದಲ್ಲಿ ನಾವು ನಮ್ಮ ದೇಹವನ್ನು ತಂಪು ಮಾಡಿಕೊಳ್ಳಲು ಐಸ್ ಕ್ರೀಮ್ ಗಳು ಹಾಗೂ ವಿವಿಧ ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಆದರೆ ಇವೆಲ್ಲಾ ಕೃತಕ ಆಹಾರ ಪದಾರ್ಥಗಳು. ದೇಹಕ್ಕೆ ಇವುಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಬದಲಾಗಿ ಆ ಕ್ಷಣಕ್ಕೆ ಸ್ವಲ್ಪ ಆರಾಮ ಎನಿಸಿದರೂ ನಂತರ ತೊಂದರೆಗಳೇ ಹೆಚ್ಚು. ಹಾಗಾಗಿ ಬೇಸಿಗೆಯ ತಾಪಮಾನವನ್ನು ಹಾಗೂ ನಮ್ಮ ದೇಹದ ಬಿಸಿಯನ್ನು ಧೈರ್ಯವಾಗಿ ಎದುರಿಸಲು ಎಳನೀರು ಕುಡಿಯುವುದು ಒಳ್ಳೆಯದು.

    ಆರೋಗ್ಯದ ಬಗ್ಗೆ ಜಾಗೃತಿ ಇರುವಂತಹ ಜನರು ಖಂಡಿತವಾಗಿಯೂ ದಿನಕ್ಕೊಂದು ಎಳನೀರು ಕುಡಿದೇ ಕುಡಿಯುತ್ತಾರೆ. ಅದರಲ್ಲೂ ಬೇಸಗೆ ಸಮಯದಲ್ಲಿ ಎಳನೀರು ಕುಡಿಯುತ್ತಿದ್ದರೆ ಅದರಿಂದ ದೇಹವು ನಿರ್ಜಲೀಕರಣದಿಂದ ಬಳಲುವುದು ತಪ್ಪುತ್ತದೆ. ದೇಹವನ್ನು ಹೈಡ್ರೇಟ್ ಆಗಿಡಬೇಕಾದರೆ ನೀವು ಎಳನೀರು ಕುಡಿಯಬೇಕು. ಎಳನೀರುನಿಂದ ಆಗುವ ಉಪಯೋಗಗಳು ಹೀಗಿವೆ ನೋಡಿ.

    ಹೃದಯದ ಆರೋಗ್ಯಕ್ಕೆ ಪೂರಕ: ತೆಂಗಿನ ನೀರು ಕುಡಿಯುವುದರಿಂದ ಹೃದಯದ ಕಾಯಿಲೆಯ ಅಪಾಯ ಕಡಿಮೆ ಆಗಬಹುದು. 2008ರಲ್ಲಿ ಇಲಿಗಳ ಮೇಲೆ ನಡೆಸಿದ ಅಧ್ಯಯನವೊಂದರಿಂದ ಇದು ತಿಳಿದುಬಂದಿದೆ. 2005ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ, ಅಧಿಕ ರಕ್ತದೊತ್ತಡ ಉಳ್ಳವರಲ್ಲಿ, ಎಳನೀರು ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸಬಹುದು.

    ರಣ ಬಿಸಿಲಿನಲ್ಲಿ ಎಳನೀರು ಯಾಕೆ ಕುಡಿಯಬೇಕು? ಕಾರಣ ಇಲ್ಲಿದೆ ನೋಡಿ!

    ಬ್ಯಾಕ್ಟೀರಿಯಾ ನಿರೋಧಕ, ಸೋಂಕು ನಿರೋಧಕ ಶಕ್ತಿ ಇರುವ ಥಯಾಮಿನ್‌, ರಿಬೋಫ್ಲಾವಿನ್, ನಿಯಾಸಿನ್‌ ಅಂಶಗಳಿರುತ್ತದೆ. ಇವುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಎಳೆನೀರು ಮಹತ್ತರ ಪಾತ್ರ ವಹಿಸುತ್ತದೆ.

    ಕೊಲೆಸ್ಟ್ರಾಲ್-ಕಡಿಮೆಗೊಳಿಸುತ್ತದೆ: ತೆಂಗಿನ ನೀರು ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಹೋರಾಡುತ್ತದೆ. ಅದೇ ಸಮಯದಲ್ಲಿ, ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತೊಂದು ಅಧ್ಯಯನದಲ್ಲಿ, ತೆಂಗಿನ ನೀರಿನ ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಪರಿಣಾಮಗಳು ಸುಲಭವಾಗಿ ದೊರಕುವ ಔಷಧವಾದ ಲೊವಾಸ್ಟಾಟಿನ್ ಅನ್ನು ಹೋಲುತ್ತವೆ ಎಂದು ಕಂಡುಬಂದಿದೆ.

    ಕೊಬ್ಬನ್ನು ಕರಗಿಸುತ್ತದೆ: ತೂಕ ಇಳಿಯುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಎಳನೀರು ಅದ್ಭುತವಾದ ಆಹಾರವಾಗಿದೆ. ಇದರಲ್ಲಿ ಕ್ಯಾಲೋರಿಗಳು ಅತಿ ಕಡಿಮೆ ಇದು ಎಳನೀರನ್ನು ನಮ್ಮ ಜಠರ ಅತಿ ಸುಲಭವಾಗಿ ಮತ್ತು ಪರಿಪೂರ್ಣವಾಗಿ ಜೀರ್ಣಿಸಿಕೊಳ್ಳುತ್ತದೆ. ಅಲ್ಲದೇ ಎಳನೀರಿನಲ್ಲಿ ಜೀರ್ಣರಸಗಳಿಗೆ ಪೂರಕವಾದ ಕಿಣ್ವಗಳಿದ್ದು ಜೀರ್ಣಕ್ರಿಯೆಯನ್ನು ಇನ್ನಷ್ಟು ಸುಲಭವಾಗಿಸುತ್ತದೆ. ತನ್ಮೂಲಕ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ ಹಾಗೂ ತೂಕ ಇಳಿಕೆಯ ಉದ್ದೇಶ ಶೀಘ್ರವಾಗಿ ನೆರವೇರುತ್ತದೆ.

    ರಣ ಬಿಸಿಲಿನಲ್ಲಿ ಎಳನೀರು ಯಾಕೆ ಕುಡಿಯಬೇಕು? ಕಾರಣ ಇಲ್ಲಿದೆ ನೋಡಿ!

    ಅಜೀರ್ಣತೆಯ ಕಾರಣದಿಂದ ಹೊಟ್ಟೆ ಸರಿಯಿಲ್ಲದಿದ್ದರೆ ಎಳನೀರು ಕುಡಿಯುವ ಮೂಲಕ ಶಮನ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಅಜೀರ್ಣತೆಗೆ ಅತಿ ಆಮ್ಲೀಯತೆಯೇ ಕಾರಣವಾಗುತ್ತದೆ ಹಾಗೂ ಎಳನೀರು ಇದಕ್ಕೂ ಸರಿಪಡಿಸುವ ಮೂಲಕ ಹೊಟ್ಟೆಯ ಉರಿ, ಹುಳಿತೇಗು, ಎದೆಯುರಿ ಮೊದಲಾದ ತೊಂದರೆಗಳನ್ನು ಅತಿ ಶೀಘ್ರದಲ್ಲಿ ಶಮನಗೊಳಿಸುತ್ತದೆ.

    ಎಳನೀರಿನ ಪ್ರಯೋಜನಗಳು

    1. ದೇಹಕ್ಕೆ ಶಕ್ತಿ ನೀಡುತ್ತದೆ.

    2. ದೇಹದ ನಿರ್ಜಲೀಕರಣಕ್ಕೆ ರಾಮಬಾಣ

    3. ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ.

    4. ದೇಹದ ತೂಕವನ್ನು ಕಡಿಮೆ ಮಾಡಲು ಸಹಕಾರಿ

    5. ಕಿಡ್ನಿ ಸಮಸ್ಯೆ ಪೀಡಿತರಿಗೆ ಉತ್ತಮ ಔಷಧ

    6. ಗರ್ಭಿಣಿಯರು ಎಳನೀರು ಕುಡಿಯುವುದು ಆರೋಗ್ಯಕರ

    7. ಮೂಳೆಗಳನ್ನು ಬಲಪಡಿಸುತ್ತದೆ

    8. ಸ್ನಾಯು ಸೆಳೆತದ ಸಮಸ್ಯೆ ನಿವಾರಣೆ

    9. ಚರ್ಮದ ಕಾಂತಿಗೆ ಸಹಕಾರಿ

    ಈ ಬೇಸಿಗೆಯಲ್ಲಿ ನೀವು ಕಲ್ಲಂಗಡಿ ಹಣ್ಣನ್ನು ಏಕೆ ಹೆಚ್ಚು ಸೇವಿಸಬೇಕು? ಕಾರಣ ಇಲ್ಲಿದೆ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts