More

    ಈ ಬೇಸಿಗೆಯಲ್ಲಿ ನೀವು ಕಲ್ಲಂಗಡಿ ಹಣ್ಣನ್ನು ಏಕೆ ಹೆಚ್ಚು ಸೇವಿಸಬೇಕು? ಕಾರಣ ಇಲ್ಲಿದೆ ನೋಡಿ!

    ಬೆಂಗಳೂರು: ಫೆಬ್ರವರಿ ತಿಂಗಳ ಆರಂಭದಲ್ಲೇ ಬೇಸಿಗೆಯ ಬಿಸಿ ಆರಂಭವಾಗಿದೆ. ಬೇಸಿಗೆಯಲ್ಲಿ ಜನರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ದೇಹವನ್ನು ತಂಪಾಗಿಡಲು ಅನೇಕ ವಸ್ತುಗಳನ್ನು ಬಳಸಲಾಗುತ್ತದೆ. ಆದ್ದರಿಂದ ಇಂದು ಅಂತಹ ಹಣ್ಣಿನ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಬೇಸಿಗೆಯಲ್ಲಿ ಇದರ ಉಪಯೋಗ ಅಪಾರ. ಈ ಹಣ್ಣಿನ ಸೇವನೆ ದೇಹಕ್ಕೆ ತಂಪು ನೀಡುವುದಲ್ಲದೆ, ಶಕ್ತಿಯೂ ತುಂಬುತ್ತದೆ. ಇದರಿಂದ ನೀವು ಆಯಾಸಗೊಳ್ಳುವುದಿಲ್ಲ. ಇಲ್ಲಿ ಹೇಳುತ್ತಿರುವುದು ಕಲ್ಲಂಗಡಿ ಹಣ್ಣಿನ ಬಗ್ಗೆ ಇದರ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

    ಇದನ್ನೂ ಓದಿ:ವಿವಾದದ ನಡುವೆ ಮತ್ತೆರಡು ಫೋಟೊ ಹಂಚಿಕೊಂಡ ಪವಿತ್ರಾಗೌಡ! ನಟ ದರ್ಶನ್​ ಫ್ಯಾನ್ಸ್​ ಹೇಳಿದ್ದೇನು? 

    ಈ ಬೇಸಿಗೆಯಲ್ಲಿ ನೀವು ಕಲ್ಲಂಗಡಿ ಹಣ್ಣನ್ನು ಏಕೆ ಹೆಚ್ಚು ಸೇವಿಸಬೇಕು? ಕಾರಣ ಇಲ್ಲಿದೆ ನೋಡಿ!

    ಬೇಸಿಗೆ ಅಂದರೆ ಕಲ್ಲಂಗಡಿ ಸೀಸನ್ ಕೂಡ. ಸುಮಾರು 5,000 ವರ್ಷಗಳ ಹಿಂದೆ, ಈಜಿಪ್ಟ್‌ನಲ್ಲಿ ಮೊದಲು ಬೆಳೆಯಲಾಯಿತು ಎನ್ನಲಾದ ಕಲ್ಲಂಗಡಿ ಹಣ್ಣು. ಅತ್ಯಧಿಕ ಪೋಷಕಾಂಶಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳನ್ನು ಹೊಂದಿರುವ ಹಣ್ಣು. ಹಲವಾರು ಕಾಯಿಲೆಗಳ ವಿರುದ್ಧ ನಮಗೆ ರಕ್ಷಣೆ ನೀಡುತ್ತದೆ. ಬೆಂಗಳೂರಿನ ಕ್ಲೌಡ್ 9 ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಹೆಚ್‍ಓಡಿ ಮತ್ತು ಮುಖ್ಯ ಕ್ಲಿನಿಕಲ್ ನ್ಯೂಟ್ರೀಶಿಯನಿಸ್ಟ್ ಅಭಿಲಾಶ ವಿ. ಅವರು ಕಲ್ಲಂಗಡಿ ಹಣ್ಣಿನ ಲಾಭದಾಯಕ ಅಂಶಗಳ ಕುರಿತು ಇಲ್ಲಿ ತಿಳಿಸಿದ್ದಾರೆ.

    ಈ ರಸಭರಿತವಾದ ಮತ್ತು ರುಚಿಕರವಾದ ಹಣ್ಣಿನಲ್ಲಿ ನೀರಿನಂಶ ಸಮೃದ್ಧವಾಗಿದೆ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುವ ಮಜಾವೇ ಬೇರೆ. ಇತರ ಹಣ್ಣುಗಳಂತೆ ಕಲ್ಲಂಗಡಿ ಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಪ್ರಯೋಜನಕಾರಿಯಾಗಿದೆ.

    ಬೆಳಗಿನ ಉಪಾಹಾರದ ಸಮಯದಲ್ಲಿ ಅಥವಾ ಉಪಹಾರ ಮತ್ತು ಊಟದ ನಡುವೆ ನೀವು ಕಲ್ಲಂಗಡಿ ತಿನ್ನಬಹುದು. ನೀವು ಸಂಜೆ ಸಹ ಕಲ್ಲಂಗಡಿಯನ್ನು ತಿನ್ನಬಹುದು. ಆದರೆ ರಾತ್ರಿಯಲ್ಲಿ ಇದನ್ನು ತಿನ್ನುವುದನ್ನು ತಪ್ಪಿಸಿ. ನೀವು ರಾತ್ರಿ ಕಲ್ಲಂಗಡಿಯನ್ನು ಸೇವಿಸಿದ್ರೆ ಹೊಟ್ಟೆಯನ್ನು ಅಸಮಾಧಾನಗೊಳಿಸುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

    ಈ ಬೇಸಿಗೆಯಲ್ಲಿ ನೀವು ಕಲ್ಲಂಗಡಿ ಹಣ್ಣನ್ನು ಏಕೆ ಹೆಚ್ಚು ಸೇವಿಸಬೇಕು? ಕಾರಣ ಇಲ್ಲಿದೆ ನೋಡಿ!

    ಕಲ್ಲಂಗಡಿ ಹಣ್ಣು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ, ಇದು ದೇಹವು ಪ್ರತಿರಕ್ಷಣಾ ಕಾರ್ಯ, ಕೋಶ ರಚನೆ ಮತ್ತು ಗಾಯವನ್ನು ಗುಣಪಡಿಸಲು ಕಾಲಜನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಕಲ್ಲಂಗಡಿ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಅನ್ನು ಹೊಂದಿರುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿಡಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

    ಕಲ್ಲಂಗಡಿಯು ಹೃದಯವನ್ನು ಆರೋಗ್ಯವಾಗಿಡಲು ಕೆಲಸ ಮಾಡುವ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಕಲ್ಲಂಗಡಿಯಲ್ಲಿರುವ ‘ಲೈಕೋಪೀನ್’ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಹೃದಯದ ಆರೋಗ್ಯಕ್ಕೆ ಇದು ಉತ್ತಮ.

    ಅಧಿಕ ಕೊಲೆಸ್ಟ್ರಾಲ್‌ನಿಂದ ಉಂಟಾದ ಆಕ್ಸಿಡೇಟಿವ್ ಹಾನಿಯನ್ನು ತಡೆಯುವಲ್ಲಿ ಅವು ಸಹಾಯಕವಾಗಿವೆ. ಇದಲ್ಲದೆ, ಕಲ್ಲಂಗಡಿಯಲ್ಲಿರುವ ಅಮೈನೋ ಆಮ್ಲವಾದ ‘ಸಿಟ್ರುಲಿನ್’ ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸುತ್ತದೆ, ಇದು ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳವನ್ನು ತಡೆಯುತ್ತದೆ.

    ತೂಕ ನಷ್ಟ​: ಕಲ್ಲಂಗಡಿಗಳು ಸಿಹಿಯಾಗಿರುವುದರಿಂದ ಅದನ್ನು ತಿಂದರೆ ತೂಕ ಹೆಚ್ಚಾಗುತ್ತದೆ ಎನ್ನುವ ಯೋಚನೆ ಇರುತ್ತದೆ. ಆದರೆ ಕಲ್ಲಂಗಡಿಯಲ್ಲಿ ನೈಸರ್ಗಿಕ ಸಿಹಿ ಇರೋದರಿಂದ ತೂಕ ಹೆಚ್ಚುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕಲ್ಲಂಗಡಿಯಲ್ಲಿ ಹೆಚ್ಚಿನ ನೀರಿನ ಅಂಶ ಹಾಗೂ ನಾರಿನಂಶವಿದೆ. ಈ ಕಾರಣದಿಂದಾಗಿ ಊಟದ ನಡುವೆ ನಿಮಗೆ ಹಸಿವಾಗುವುದಿಲ್ಲ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.

    ಈ ಬೇಸಿಗೆಯಲ್ಲಿ ನೀವು ಕಲ್ಲಂಗಡಿ ಹಣ್ಣನ್ನು ಏಕೆ ಹೆಚ್ಚು ಸೇವಿಸಬೇಕು? ಕಾರಣ ಇಲ್ಲಿದೆ ನೋಡಿ!

    ​ಕಣ್ಣುಗಳಿಗೆ ಒಳ್ಳೆಯದು​: ಕಲ್ಲಂಗಡಿಯಲ್ಲಿರುವ ‘ಲೈಕೋಪೀನ್’ ನಿಮ್ಮ ದೃಷ್ಟಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಸಂಶೋಧನೆಯ ಪ್ರಕಾರ, ಲೈಕೋಪೀನ್‌ನ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ವಯಸ್ಸಿಗೆ ಸಂಬಂಧಿಸಿದ ಆಣ್ವಿಕ ಅವನತಿಯನ್ನು ತಡೆಯಲು ಸಹಾಯ ಮಾಡುತ್ತದೆ. ಮ್ಯಾಕ್ಯುಲರ್ ಡಿಜೆನರೇಶನ್ ಒಂದು ಸಾಮಾನ್ಯ ಕಣ್ಣಿನ ಸಮಸ್ಯೆಯಾಗಿದೆ. ಇದು ವಯಸ್ಸಾದವರಲ್ಲಿ ಕುರುಡುತನಕ್ಕೆ ಕಾರಣವಾಗಬಹುದು.

    ವ್ಯಾಯಾಮದ ನಂತರದ ಸ್ನಾಯು ನೋವು ನಿವಾರಕ: ಕಲ್ಲಂಗಡಿ ಹಣ್ಣು , ವ್ಯಾಯಾಮ ಮಾಡುವಾಗ ಮತ್ತು ವ್ಯಾಯಾಮದ ನಂತರ ಉಂಟಾಗುವ ಸ್ನಾಯು ನೋವನ್ನು ತಡೆಯಬಲ್ಲದು. ಅದಕ್ಕೆ ಕಾರಣ, ಕಲ್ಲಂಗಡಿ ಹಣ್ಣಿನಲ್ಲಿ ಇರುವ ಪೊಟ್ಯಾಶಿಯಂ. ವ್ಯಾಯಾಮಕ್ಕೆ ಮುನ್ನ ಅಥವಾ ವ್ಯಾಯಾಮ ಮಾಡಿದ ಬಳಿಕ ಒಂದು ಬಟ್ಟಲು ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ಸೇವಿಸುವುದರಿಂದ ಸ್ನಾಯುಗಳ ಆರೋಗ್ಯದ ಮೇಲೆ ರಕ್ಷಣಾತ್ಮಕ ಪರಿಣಾಮ ಬೀರುವುದು ಸಾಧ್ಯ.

    ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಶಕ್ತಿ ಬರುತ್ತದೆ: ಬೇಸಿಗೆ ಕಾಲದಲ್ಲಿ ಸೂರ್ಯನ ಬಿಸಿಲಲ್ಲಿ ಹೊರಬರುವುದರಿಂದ ದೇಹಕ್ಕೆ ಶಕ್ತಿಯ ಕೊರತೆ ಉಂಟಾಗುತ್ತದೆ. ಕೆಲವೊಮ್ಮೆ ಇದು ಜನರನ್ನು ಅನಾರೋಗ್ಯಕ್ಕೆ ತುತ್ತಾಗಿಸುತ್ತದೆ. ವಿಟಮಿನ್ ಹೆಚ್ಚಿರುವ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು.

    ಕಲ್ಲಂಗಡಿ ಹಣ್ಣನ್ನು ಸೇವಿಸುವ ವಿಧಾನ
    • ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಹಾಗೆಯೇ ತಿನ್ನುವುದು.
    • ಪಾಪ್ಸಿಕಲ್‍ಗಳು ಅಥವಾ ಮನೆಯಲ್ಲಿಯೇ ತಯಾರಿಸಿದ ಸೋರ್ಬೆಟ್‍ಗಳು ಮತ್ತು ಐಸ್ ಕ್ಯಾಂಡಿ
    • ಸೌತೆಕಾಯಿ, ಮಾವಿನ ಹಣ್ಣು, ಕ್ಯಾರೆಟ್‍ಗಳು, ಕಿತ್ತಳೆ ಹಣ್ಣು ಮತ್ತಿತರ ಪೌಷ್ಟಿಕಾಂಶಯುಕ್ತ ಹಣ್ಣುಗಳ ಜೊತೆ ಸೇರಿಸಿ ಸಲಾಡ್ ಮಾಡಿ.
    • ಕಲ್ಲಂಗಡಿ ಮತ್ತು ನಿಂಬೆ ಹಣ್ಣಿನ ರಸ ಸೇರಿಸಿ, ಸ್ಮೂದಿ ಮತ್ತು ಜ್ಯೂಸ್‍ಗಳನ್ನು ತಯಾರಿಸಿ.

     

    300 ಪ್ರಪೋಸಲ್‌ ರಿಜೆಕ್ಟ್‌ ಮಾಡಿದ್ದಾರಂತೆ ಕನ್ನಡದ ನಟಿ! ಈ ಮಾತು ಕೇಳಿ ಕಿಚ್ಚ ಸುದೀಪ್​ ಹೇಳಿದ್ದೇನು ಗೊತ್ತಾ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts