More

    ರಾಹುಲ್​ ನ್ಯಾಯ ಯಾತ್ರೆಯಲ್ಲಿಲ್ಲ ಲಾಜಿಕ್​; ಚುನಾವಣಾ ತಂತ್ರಗಾರನ ಟೀಕೆಗೆ ಹೀಗಿವೆ ಕಾರಣಗಳು…

    ನವದೆಹಲಿ: ಲೊಕಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆ ಅವರು ಕೈಗೊಂಡಿರುವ ಯಾತ್ರೆಗೆ ಯಾವುದೇ ಲಾಜಿಕ್ ಇಲ್ಲ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಟೀಕೆ ಮಾಡಿದ್ದಾರೆ.

    ಇದನ್ನೂ ಓದಿ:ನಟಿ ಪೂನಂ ಪಾಂಡೆ ನಿಧನ; ಮಹಿಳೆಯರೇ ಎಚ್ಚರ..ಎಚ್ಚರ? ನೀವು ಈ ಸುದ್ದಿ ಓದಲೇಬೇಕು!

    ಯಾತ್ರೆ ಮಾಡಲು ಸಮಯವು ಸೂಕ್ತವಲ್ಲ. ಯಾರು ಅವರಿಗೆ ಸಲಹೆ ನೀಡುತ್ತಿದ್ದಾರೆ ಗೊತ್ತಿಲ್ಲ. ನೀವು ಪ್ರಧಾನ ಕಚೇರಿಯನ್ನು ಬಿಟ್ಟು ಯಾತ್ರೆಗೆ ಹೋಗಲು ಇದು ಅತ್ಯಂತ ಕೆಟ್ಟ ಸಮಯವಾಗಿದೆ. ಈ ಸಮಯದಲ್ಲಿ ನೀವು ಪಕ್ಷದ ಪ್ರಧಾನ ಕಚೇರಿಯಲ್ಲಿರಬೇಕು. ಚುನಾವಣೆ ಹತ್ತಿರ ಇರುವಾಗ ಇದು ಯಾತ್ರೆ ಕೈಗೊಳ್ಳಲು ಅತ್ಯಂತ ಕೆಟ್ಟ ಸಮಯವಾಗಿದೆ ಎಂದರು.

    ಚುನಾವಣೆಗೆ ಆರು ತಿಂಗಳಿಂದ ಒಂದು ವರ್ಷದ ಮೊದಲು ಯಾತ್ರೆ ನಡೆಸಬೇಕಿತ್ತು ಎಂದಿರುವ ಕಿಶೋರ್ ಚುನಾವಣೆಗೆ ಮಿತ್ರಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಮತ್ತು ಪ್ರಚಾರ ಕಾರ್ಯತಂತ್ರದ ಮೇಲೆ ಕೇಂದ್ರೀಕರಿಸುವ ಅಗತ್ಯವಿದೆ ಈ ಕಡೆ ಗಮನಹರಿಸಬೇಕಿತ್ತು ಎಂದು ಹೇಳಿದ್ದಾರೆ.
    ನೀವು ಪ್ರಧಾನ ಕಚೇರಿಯಲ್ಲಿ ಅಗತ್ಯವಿದ್ದಾಗ, ನೀವು ಕ್ಷೇತ್ರದಲ್ಲಿರುತ್ತೀರಿ. ಯಾವಾಗ ಫೀಲ್ಡ್‌ನಲ್ಲಿ ಇರಬೇಕೋ ಆಗ ದೆಹಲಿಯಲ್ಲಿ ಕೂರುತ್ತೀರಿ. ಅವರಿಗೆ ಯಾರು ಸಲಹೆ ನೀಡುತ್ತಾರೋ ಗೊತ್ತಿಲ್ಲ ಎಂದು ಕಿಶೋರ್ ಟೀಕಿಸಿದರು.

    ಜನವರಿ 14 ರಂದು ಮಣಿಪುರದಲ್ಲಿ ಆರಂಭವಾದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ 67 ದಿನಗಳಲ್ಲಿ 6,713 ಕಿಲೋಮೀಟರ್ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. ಸಾರ್ವತ್ರಿಕ ಚುನಾವಣೆಯು ಏಪ್ರಿಲ್ ಮತ್ತು ಮೇ ತಿಂಗಳ ನಡುವೆ ನಡೆಯುವ ಸಾಧ್ಯತೆ ಇದೆ.

    ರಾಜಕೀಯ ನಡೆಯುವ ಸಮಯದಲ್ಲಿ ಪ್ರಧಾನವಾಗಿ ಇರಬೇಕಾದ ಸಂದರ್ಭವಿದು. ಆದರೆ, ಅವರು ಈಶಾನ್ಯದಲ್ಲಿ ಯಾತ್ರೆಯಲ್ಲಿ ನಿರತರಾಗಿದ್ದಾರೆ. ಪ್ರದೇಶಗಳಿಗೆ ಭೇಟಿ ನೀಡುವುದು ಉತ್ತಮ. ಆದರೆ ಪ್ರಧಾನ ಕಚೇರಿಯನ್ನು ಬಿಡುವುದು ಖಂಡಿತವಾಗಿಯೂ ಬುದ್ಧಿವಂತ ಕ್ರಮವಲ್ಲ. ಈ ವಿಚಾರಗಳಲ್ಲಿ ಅವರಿಗೆ ಯಾರು ಸಲಹೆ ನೀಡುತ್ತಿದ್ದಾರೆಂದು ನನಗೆ ತಿಳಿದಿಲ್ಲ ವ್ಯಂಗ್ಯವಾಡಿದರು.

    ಪ್ರಶಾಂತ್ ಕಿಶೋರ್ ಅವರು ‘ಜನ್ ಸುರಾಜ್’ ಬ್ಯಾನರ್ ಅಡಿಯಲ್ಲಿ ಬಿಹಾರದಾದ್ಯಂತ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಯಾತ್ರೆಯನ್ನು ಅವರು 2022 ರಲ್ಲಿ ಆರಂಭಿಸಿದ್ದು, ಜನ್ ಸುರಾಜ್ ಅಭಿಯಾನವನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸುವ ಬಗ್ಗೆ ಅವರು ಘೋಷಣೆ ಮಾಡುವ ನಿರೀಕ್ಷೆ ಇದೆ.

    ವಿವಾದದ ನಡುವೆ ಮತ್ತೆರಡು ಫೋಟೊ ಹಂಚಿಕೊಂಡ ಪವಿತ್ರಾಗೌಡ! ನಟ ದರ್ಶನ್​ ಫ್ಯಾನ್ಸ್​ ಹೇಳಿದ್ದೇನು?  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts