More

    ಟೀ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಫೋಟ; ತಾಯಿ ಸೇರಿ 3 ಮಕ್ಕಳು ಸಜೀವ ದಹನ

    ಬಿಹಾರ: ಚಹಾ ಮಾಡುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ತಾಯಿ ಮತ್ತು ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಕಿಶನ್‌ಗಂಜ್ ಜಿಲ್ಲೆಯಿಂದ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ.

    ಮೃತರನ್ನು ಕಿಶನ್‌ಗಂಜ್‌ನ ಪೋಖಾಲಿ ಗ್ರಾಮದ ನಿವಾಸಿ ಮೊಹಮ್ಮದ್ ಅನ್ಸಾರ್ ಅವರ ಪತ್ನಿ ಸಾಹಿಬಾ ಎಂದು ಗುರುತಿಸಲಾಗಿದ್ದು, ಮಕ್ಕಳಾದ 8 ವರ್ಷದ ಅನಿಶಾ, 4 ವರ್ಷದ ಆರುಷಿ ಮತ್ತು 5 ವರ್ಷದ ಅನೀಶ್ ಸೇರಿದ್ದಾರೆ.

    ಬೆಳಗ್ಗೆ 7 ಗಂಟೆ ಸುಮಾರಿಗೆ ಮಹಿಳೆ ಟೀ ಮಾಡಲು ಹೋಗಿದ್ದರು. ಗ್ಯಾಸ್ ಸ್ಟವ್ ಹೊತ್ತಿಸಿದ ತಕ್ಷಣ ಸಿಲಿಂಡರ್ ಸ್ಫೋಟಗೊಂಡಿದೆ. ಮಹಿಳೆ ಮತ್ತು ಅವರ ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಎಲ್ಲರನ್ನೂ ಚಿಕಿತ್ಸೆಗಾಗಿ ಪೂರ್ಣಿಯಾ ಮೆಡಿಕಲ್ ಕಾಲೇಜಿಗೆ ಕರೆತರಲಾಗಿದ್ದು, ಚಿಕಿತ್ಸೆ ವೇಳೆ ತಾಯಿ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದು, ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಅಪಘಾತದಲ್ಲಿ ಕುಟುಂಬ ಸಂಪೂರ್ಣ ನಾಶವಾಗಿದೆ.

    ಈ ಘಟನೆಯಿಂದ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತಳ ಪತಿ ಮೀರತ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿಲಿಂಡರ್ ಬ್ಲಾಸ್ಟ್‌ನಿಂದ ಬೆಂಕಿ ಹೊತ್ತಿಕೊಂಡಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವೇ ಸಂಪೂರ್ಣ ವಿಷಯ ಬಹಿರಂಗವಾಗುವ ಸಾಧ್ಯತೆ ಇದೆ.

    ಕಿಶನ್‌ಗಂಜ್ ಜಿಲ್ಲೆಯ ಪೌಖಾಲಿ ಪ್ರದೇಶದ ನಂಕಾರ್ ಗ್ರಾಮದ ಮನೆಯೊಂದರಲ್ಲಿ ಅಡುಗೆ ಮಾಡುತ್ತಿದ್ದಾಗ ಎಲ್‌ಪಿಜಿ ಸಿಲಿಂಡರ್‌ನ ಹಠಾತ್ ಸ್ಫೋಟದಿಂದ ನಾಲ್ವರು ಸಾವನ್ನಪ್ಪಿರುವ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts