More

    ಕೊಹ್ಲಿಯಿಂದ ಸಾಧ್ಯಾನೇ ಇಲ್ಲ! ಅಚ್ಚರಿಯ ಹೇಳಿಕೆ ನೀಡಿದ ವಿಂಡೀಸ್​ ಕ್ರಿಕೆಟ್​ ದಿಗ್ಗಜ ಲಾರಾ

    ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ನ್ಯೂಜಿಲೆಂಡ್​ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ 50ನೇ ಶತಕ ಬಾರಿಸುವ ಮೂಲಕ ಕ್ರಿಕೆಟ್​ ದಂತಕತೆ ಸಚಿನ್ ತೆಂಡೂಲ್ಕರ್​​ ದಾಖಲೆಯನ್ನು ಮುರಿದರು.

    ಕ್ರೀಡಾಭಿಮಾನಿಗಳು ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ ಶತಕ ಬಾರಿಸಿದ ಕೊಹ್ಲಿ, ಅಂದಿನ ಪಂದ್ಯದಲ್ಲಿ ಉಪಸ್ಥಿತರಿದ್ದ ಸಚಿನ್​ ಮುಂದೆ ಮಂಡಿಯೂರುವ ಮೂಲಕ ವಿಶೇಷ ಗೌರವವನ್ನು ಸಲ್ಲಿಸಿದರು. ಇಡೀ ಕ್ರೀಡಾ ಜಗತ್ತೇ ಕೊಹ್ಲಿಯನ್ನು ಕೊಂಡಾಡಿತು. ಕ್ರಿಕೆಟ್​ ಲೋಕದ ಅಧಿಪತಿ, ಕಿಂಗ್​ ಕೊಹ್ಲಿ ಎಂದು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದರು. ಈ ಶತಕದೊಂದಿಗೆ ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ 80 ಶತಕಗಳನ್ನು ಪೂರೈಸಿದ್ದಾರೆ. ಅಂದರೆ, ಏಕದಿನ ಪಂದ್ಯದಲ್ಲಿ 50, ಟೆಸ್ಟ್​ನಲ್ಲಿ 29 ಮತ್ತು ಟಿ20 ಪಂದ್ಯದಲ್ಲಿ 1 ಶತಕವನ್ನು ಬಾರಿಸಿದ್ದಾರೆ. ಇದೀಗ ಕೊಹ್ಲಿ ಕಣ್ಣು 100 ಶತಕಗಳ ಮೇಲಿದೆ. ಈ ಮೂಲಕ ಸಚಿನ್​ ದಾಖಲೆಗಳನ್ನು ಸರಿಗಟ್ಟಬೇಕು ಎಂಬುದು ಕೊಹ್ಲಿ ಆಸೆಯಾಗಿದೆ.

    ಆದರೆ, ನಮ್ಮ ಮುಂದೆ ಉಳಿದಿರುವ ಪ್ರಶ್ನೆ ಏನೆಂದರೆ, ವಿರಾಟ್​ ಕೊಹ್ಲಿ ಸಚಿನ್​ ಅವರ 100 ಶತಕಗಳ ದಾಖಲೆಯನ್ನು ಮುರಿಯುತ್ತಾರಾ? ಈ ಪ್ರಶ್ನೆಗೆ ವೆಸ್ಟ್​ಇಂಡೀಸ್​ ಕ್ರಿಕೆಟ್​ ದಿಗ್ಗಜ ಬ್ರಿಯಾನ್ ಲಾರಾ ಉತ್ತರ ನೀಡುವ ಪ್ರಯತ್ನ ಮಾಡಿದ್ದು, ಕೊಹ್ಲಿಯಿಂದ ಸಚಿನ್​ ದಾಖಲೆ ಮುರಿಯುವುದು ತುಂಬಾ ಕಷ್ಟವಿದೆ ಎಂದಿದ್ದಾರೆ.

    ಈಗ ಕೊಹ್ಲಿಗೆ ಎಷ್ಟು ವರ್ಷ? 35 ವರ್ಷ ಸರಿಯೇ? ಸದ್ಯ 80 ಶತಕಗಳನ್ನು ಬಾರಿಸಿದ್ದಾರೆ. ಇನ್ನು 20 ಶತಕಗಳು ಬೇಕಿದೆ. ಕೊಹ್ಲಿಗೆ 39 ವರ್ಷ ವಯಸ್ಸಾಗುವವರೆಗೆ ಪ್ರತಿವರ್ಷ 5 ಶತಕಗಳನ್ನು ಬಾರಿಸಿದರು ಸಚಿನ್​ ದಾಖಲೆಯನ್ನು ಮುರಿಯಲು ಇನ್ನೂ ನಾಲ್ಕೈದು ವರ್ಷಗಳು ಬೇಕಾಗುತ್ತದೆ. ಇದು ನಿಜಕ್ಕೂ ಕಷ್ಟದ ಕೆಲಸ ಎಂದು ಆನಂದಬಜಾರ್ ಪತ್ರಿಕೆಗೆ ಲಾರಾ ಹೇಳಿದ್ದಾರೆ.

    ಖಚಿತವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಕ್ರಿಕೆಟ್​ನಲ್ಲಿ ಏನು ಬೇಕಾದರೂ ಆಗಬಹುದು. ಕೊಹ್ಲಿ ಅವರು ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯನ್ನು ಮುರಿಯುತ್ತಾರೆ ಎಂದು ಹೇಳುವವರು ಕ್ರಿಕೆಟ್ ತರ್ಕವನ್ನೇ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಭಿಮಾನದಿಂದ ಹೇಳುತ್ತಾರಷ್ಟೇ. ಏಕೆಂದರೆ, 20 ಶತಕಗಳು ಬಹಳ ದೂರದಲ್ಲಿವೆ. ಹೆಚ್ಚಿನ ಕ್ರಿಕೆಟಿಗರು ತಮ್ಮ ಸಂಪೂರ್ಣ ವೃತ್ತಿ ಜೀವನದಲ್ಲಿಯೂ 20 ಶತಕಗಳನ್ನು ಪೂರೈಸುವುದಿಲ್ಲ. ಕೊಹ್ಲಿ ಕೈಯಲ್ಲಿ ಆಗುವುದಿಲ್ಲ ಎಂದು ನಾನು ಹೇಳುವುದಿಲ್ಲ. ಕೊಹ್ಲಿ ಮಾಡುತ್ತಾರೆ ಎಂದು ಲಾರಾ ತಿಳಿಸಿದರು.

    ವಯಸ್ಸು ಯಾರಿಗೂ ನಿಲ್ಲುವುದಿಲ್ಲ. ಕೊಹ್ಲಿ ಇನ್ನೂ ಅನೇಕ ದಾಖಲೆಗಳನ್ನು ಮುರಿಯುತ್ತಾರೆ. ಆದರೆ, 100 ಶತಕಗಳು ಅತ್ಯಂತ ಕಷ್ಟಕರವೆಂದು ತೋರುತ್ತದೆ. ಆದರೂ ನನ್ನ ಶುಭಾಶಯಗಳು ಕೊಹ್ಲಿಗೆ ಇದೆ. ಸಚಿನ್​ ರೀತಿ 100 ಶತಕಗಳನ್ನು ಗಳಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ. ಸಚಿನ್ ನನ್ನ ಆತ್ಮೀಯ ಸ್ನೇಹಿತ. ಅಲ್ಲದೆ, ನಾನು ಮೊದಲೇ ಹೇಳಿದಂತೆ, ನಾನು ಕೊಹ್ಲಿಯ ದೊಡ್ಡ ಅಭಿಮಾನಿ ಎಂದು ಹೇಳಿದರು.

    ಅಂದಹಾಗೆ ವಿರಾಟ್, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಆದರೆ, ಎರಡು ಟೆಸ್ಟ್ ಪಂದ್ಯಗಳಿಗೆ ಲಭ್ಯವಾಗಲಿದ್ದಾರೆ. (ಏಜೆನ್ಸೀಸ್​)

    ಈಗ ತೀವ್ರ ಚಳಿ, ಈ ರಾಜ್ಯಗಳಲ್ಲಿ ಭಾರಿ ಮಳೆ ನಿರೀಕ್ಷೆ; ಯಾವ ರಾಜ್ಯದಲ್ಲಿ ಹವಾಮಾನ ಹೇಗಿರುತ್ತದೆ?

    ಚೆನ್ನೈ ಸೇರಿ ಭಾರತದ 12 ನಗರಗಳು ಜಲಸಮಾಧಿ! ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಘನಘೋರ ದುರಂತ

    ಚೆನ್ನೈ ಪ್ರವಾಹ: ಸಂಕಷ್ಟದಲ್ಲಿದ್ದ ಆಮೀರ್​ ಖಾನ್​, ವಿಶಾಲ್​ಗೆ ನಟ ಅಜಿತ್​ ಕುಮಾರ್​ ಸಹಾಯ ಮಾಡಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts