ಇಲ್ಲೊಂದು ಜಿಂಕೆಮರಿ ಇದೆ... ಹುಡುಕಿದರೆ ನೀವೇ ಗ್ರೇಟ್‌...

kannige sawal
Published on

ನಮ್ಮ ಕಣ್ಣೇ ನಮಗೆ ಎಷ್ಟೋ ಸಲ ಮೋಸ ಮಾಡುವುದು ಉಂಟು. ಕೆಲವೊಮ್ಮೆ ಹತ್ತಿರವೇ ಇರುವ ವಸ್ತುವೂ ನಮಗೆ ಕಾಣಿಸುವುದೇ ಇಲ್ಲ. ಎಲ್ಲೆಲ್ಲೋ ಹುಡುಕಾಡಿ ಮತ್ತೊಮ್ಮೆ ನೋಡಿದರೆ ಅದು ಅಲ್ಲಿಯೇ ಇರುತ್ತದೆ. ಅಯ್ಯೋ ನನಗೆ ಯಾಕೆ ಆಗ ಕಾಣಿಸಲಿಲ್ಲ ಎಂದು ನೀವೂ ಎಷ್ಟೋ ಬಾರಿ ಅಂದುಕೊಂಡಿರಲಿಕ್ಕೆ ಸಾಕು.

ಅಂಥದ್ದೇ ಒಂದು ಕಣ್ಣನ್ನೇ ಮೋಸ ಮಾಡುವ ಚಿತ್ರ ಇಲ್ಲಿದೆ. ಈ ಚಿತ್ರದಲ್ಲಿ ಒಂದು ಜಿಂಕೆ ಅಡಗಿದೆ. ಸಾಮಾನ್ಯದ ಕಣ್ಣಿಗೆ ಇದು ಕಾಣಿಸುವುದಿಲ್ಲ. ಚಿತ್ರವನ್ನು ಝೂಮ್‌ ಮಾಡಿ ನೋಡಿದರೆ ಖಂಡಿತವಾಗಿಯೂ ನಿಮಗೆ ಕಾಣಿಸುತ್ತದೆ.

ನಿಮಗೆ ಸ್ವಲ್ಪ ಪೇಷನ್ಸ್‌ ಇದ್ದರೆ ಜಿಂಕೆಯನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಅದಕ್ಕೇನು ಮಹಾ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ. ಒಂದು ಕಡೆಯಿಂದ ನಿಧಾನಕ್ಕೆ ನೋಡುತ್ತಾ ಬಂದರೆ ಚಿಕ್ಕದಾಗಿ ಜಿಂಕೆ ನಿಂತುಕೊಂಡಿರುವುದು ಕಾಣಿಸುತ್ತದೆ.

ಎಲ್ಲಿ ಕಾಣಿಸಿತಾ ನಿಮಗೆ? ಇಲ್ವಾ? ಅಯ್ಯೋ ಇವೆಲ್ಲಾ ಸುಳ್ಳು... ಇಲ್ಲಿ ಜಿಂಕೇನೇ ಇಲ್ಲಾ ಅಂತ ಹೇಳ್ತಿದ್ದೀರಾ? ಹೋಗ್ಲಿ ಬಿಡಿ. ನಿಮಗೆ ಜಿಂಕೆ ಕಾಣಿಸಿಲ್ಲ ಎಂದರೆ ನಾವೇ ಅದು ಎಲ್ಲಿದೆ ಎಂದು ತೋರಿಸ್ತೇವೆ ನೋಡಿ...

ಚಿತ್ರದ ಎಡಭಾಗದ ಮೇಲುಗಡೆ ದೃಷ್ಟಿಯನ್ನು ಬೀರಿ ನೋಡಿ, ಝೂಮ್‌ ಝೂಮ್‌ ಮಾಡಿ... ಇನ್ನೂ ಕಾಣಿಸಲಿಲ್ವಾ? ಹಾಗಿದ್ರೆ ಇಲ್ಲಿದೆ ನೋಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net