More

    ನಾವೇ ಕಟ್ಟಿದ ಮನೆಯಲ್ಲಿ ಮೃತ ಪತಿಯ ಸಹೋದರರಿಗೆ ಪಾಲು ಇದೆಯಾ?

    ನಾವೇ ಕಟ್ಟಿದ ಮನೆಯಲ್ಲಿ ಮೃತ ಪತಿಯ ಸಹೋದರರಿಗೆ ಪಾಲು ಇದೆಯಾ?

    ಪ್ರಶ್ನೆ: ಗಂಡ ಹೆಂಡತಿ ಇಬ್ಬರು ಟೀಚರ್ ಮನೆಯ ವರು ಮರಣ ವಾಗಿ 3 ವರ್ಷವಾಗಿದೆ. ಗಂಡನ ಮನೆಯಲ್ಲಿ ಪಾಲು ವಿಭಾಗವಾಗಿ 4 ವರ್ಷವಾಗಿದೆ. ನಾವು 2009 ಮತ್ತು 2015 ರಲ್ಲಿ 2 ಮನೆಗಳನ್ನು ನಮ್ಮ ನಮ್ಮ ಸಂಬಳದಲ್ಲಿ ಲೋನ್ ಮಾಡಿಕೊಂಡು ಕಟ್ಟಿಸಿದೆವು ನಾವು 20 ವರ್ಷ ದಿಂದ ಬೇರೆ ಕಡೆ ವಾಸಿಸುತ್ತಿದ್ದೇವೆ. ಮನೆಗಳು ಪಾಲು ವಿಭಾಗಕ್ಕೆ ಬರುತ್ತಾ?

    ಉತ್ತರ :- ನೀವು ಮತ್ತು ನಿಮ್ಮ ಪತಿ ನಿಮ್ಮ ಸಂಬಳದಿಂದ ಸಂಪಾದಿಸಿ ಕಟ್ಟಿದ ಮನೆಯಲ್ಲಿ ನಿಮ್ಮ ಮೃತ ಪತಿಯ ಸಹೋದರ ಸಹೋದರಿಯರಿಗೆ, ಯಾವುದೇ ಪಾಲು ಬರುವುದಿಲ್ಲ. ಯಾವುದೇ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಆತನ /ಆಕೆಯ ಕುಟುಂಬದವರು , ಆತ/ಆಕೆ ಬದುಕಿರುವವರೆಗೆ ಪಾಲು ಕೇಳಲು ಬರುವುದಿಲ್ಲ.

    ಆದರೆ ನಿಮ್ಮ ಮೃತ ಪತಿಯಲ್ಲಿ ಏನೆಲ್ಲ ಚರ ಸ್ಥಿರ ಆಸ್ತಿಗಳು ಇದ್ದವೋ ಅವೆಲ್ಲವೂ ಆತನ ಮರಣಾನಂತರ ಆಕೆಯ ಪತ್ನಿ, ಮಕ್ಕಳು ಮತ್ತು ತಾಯಿಗೆ ಸಮವಾಗಿ ಹಂಚಿಕೆಯಾಗುತ್ತದೆ. ನಿಮ್ಮ ಪತಿಗೆ ತಾಯಿ ಇದ್ದರೆ ಅವರಿಗೆ ಒಂದು ಪಾಲು ಹೋಗುತ್ತದೆ. ನಿಮ್ಮ ಪತಿಯ ತಾಯಿ ಬದುಕಿರದಿದ್ದರೆ ನೀವು ಚಿಂತಿಸಬೇಕಾಗಿಲ್ಲ. ನಿಮ್ಮ ಪತಿಯ ಕಡೆ , ಬೇರೆ ಯಾರಿಗೂ ಭಾಗ ಹೋಗುವುದಿಲ್ಲ. ಇನ್ನು ನಿಮ್ಮ ಭಾಗದ ಆಸ್ತಿಯಲ್ಲಂತೂ ನಿಮ್ಮ ಪತಿಯ ಮನೆಯ ಯಾರಿಗೂ ಯಾವ ಭಾಗವೂ ಹೋಗುವುದಿಲ್ಲ.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

    ಲೀಗಲ್ ಹೇರ್​ ಸರ್ಟಿಫಿಕೇಟ್ ಮಾಡಿಸಿಕೊಂಡ್ರೆ ಆಸ್ತಿ ಅವರಿಗೇ ಆಗಿಬಿಡತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts