10 ಮದುವೆಯಾದರೂ ಸಿಕ್ಕಿಲ್ಲವಂತೆ ಸುಖ- ಗಂಡನಿಂದ ಈಕೆಗೆ ಬೇಕಾಗಿದ್ದೇನು ಅಂತ ಹೇಳಿದ್ದಾಳೆ ಕೇಳಿ...

cessey
Published on

ವಾಷಿಂಗ್ಟನ್: ಇಲ್ಲಿ ಕಾಣಿಸುತ್ತಿರುವ ಮಹಿಳೆಯ ಹೆಸರು ಕ್ಯಾಸೆ. ಈಕೆ ಅಮೆರಿಕದವಳು. ಇದಾಗಲೇ ಒಂಬತ್ತು ಬಾರಿ ಮದುವೆಯಾಗಿ ವಿಚ್ಛೇದನ ಕೊಟ್ಟು ಇದೀಗ 10ನೇ ಮದುವೆಯಾಗಿದ್ದಾಳೆ. ಆದರೆ ಈಕೆಯ 10ನೇ ಮದುವೆಯೂ ವಿಚ್ಛೇದನದ ಹಾದಿಯಲ್ಲಿದೆ!

ಅಷ್ಟಕ್ಕೂ ತಾನು ಹೀಗೇಕೆ ಪದೇ ಪದೇ ಗಂಡನನ್ನು ಬದಲಾಯಿಸುತ್ತೇನೆ ಎಂಬ ಬಗ್ಗೆ ಟಿ.ವಿ.ಕಾರ್ಯಕ್ರಮವೊಂದರಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾಳೆ ಕ್ಯಾಸೆ. ಸದ್ಯ ಈಗಿದು ಅಮೆರಿಕದ ಚುನಾವಣೆಯಗಿಂತಲೂ ಅಲ್ಲಿಯ ಟಿ.ವಿಯಲ್ಲಿ ಹಾಟ್ ವಿಷಯವಾಗಿದೆ.

ಅಷ್ಟಕ್ಕೂ ಕ್ಯಾಸೆ ಹೇಳಿದ್ದು ಏನೆಂದರೆ, "ನಾನೀಗ 10ನೇ ಮದುವೆಯಾಗಿದ್ದು ಅದು ಕೂಡ ವಿಚ್ಛೇದನ ಹಾದಿಯಲ್ಲಿದೆ ಎನ್ನುವುದು ನಿಜವೇ. ಇದನ್ನು ಹೇಳಿಕೊಳ್ಳಲು ನನಗೇನೂ ಕಷ್ಟ ಅಥವಾ ಸಂಕೋಚ ಎನಿಸುವುದಿಲ್ಲ" ಎಂದಿದ್ದಾಳೆ ಕ್ಯಾಸೆ.

'ಜೀವನದಲ್ಲಿ ಒಂದು ವ್ಯಕ್ತಿ ಬಂದರೆ ಆ ವ್ಯಕ್ತಿ ಪರಿಪೂರ್ಣವಾಗಿ ಸುಖವನ್ನು ನೀಡಬೇಕು. ಆಗಲೇ ಆತ ಪರ್ಫೆಕ್ಟ್ ವ್ಯಕ್ತಿಯಾಗುತ್ತಾನೆ. ನಮಗೆ ಬೇಕಾದ ಸುಖ ನೀಡದೇ ಹೋದರೆ ಮದುವೆಯಾಗುವುದರಲ್ಲಿ ಅರ್ಥವಿಲ್ಲ. ಹೀಗೆ ಮದುವೆಯಾಗುವ ಬದಲು ಮದುವೆಯನ್ನೇ ಮಾಡಿಕೊಳ್ಳಬಾರದು. ಒಮ್ಮೆ ಮದುವೆಯಾದರೆ ಹೆಣ್ಣು ಏನು ಬಯಸುತ್ತಾಳೋ ಆ ಸುಖವನ್ನೆಲ್ಲಾ ಗಂಡನಾದವ ನೀಡಬೇಕು ಎಂದಿರುವ ಕ್ಯಾಸೆಗೆ ಇದುವರೆಗೆ ಪರ್ಫೆಕ್ಟ್ ಗಂಡ ಸಿಕ್ಕಿಲ್ಲವಂತೆ.

ನಾನು ಈವರೆಗೂ ಮದುವೆಯಾಗಿರುವವರೆಲ್ಲಾ ನನಗೆ ಪರ್ಫೆಕ್ಟ್ ಎನ್ನಿಸಲಿಲ್ಲ ಎಂದಿರುವ ಕ್ಯಾಸೆ ಇಲ್ಲಿಯವರೆಗಿನ ಮದುವೆಗಳಲ್ಲಿ ಹೆಚ್ಚೆಂದರೆ ಎಂಟು ವರ್ಷ ದಾಂಪತ್ಯ ಜೀವನ ನಡೆಸಿದ್ದು, ಇನ್ನು ಕೆಲವರನ್ನು ಆರು ತಿಂಗಳ ಒಳಗೇ ವಿಚ್ಛೇದನ ನೀಡಿದ್ದಾರೆ.

ಸದ್ಯ 56 ವರ್ಷವಾಗಿರುವ ಈಕೆ ಟೀವಿ ವಾಹಿನಿಯೊಂದರಲ್ಲಿ ಚಾಟ್ ಶೋ ನಡೆಸಿಕೊಡುತ್ತಿದ್ದಾರೆ. ಅದರಲ್ಲಿಯೂ ಅವರು ಸಂಬಂಧಗಳ ಕುರಿತಾಗಿಯೇ ಮಾತನಾಡುತ್ತಾರೆ. ಒಂದು ಪರ್ಫೆಕ್ಟ್ ಮ್ಯಾಚ್ ಅಪೇಕ್ಷೆ ಮಾಡುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಯೋಗ್ಯವಾದ ವ್ಯಕ್ತಿಗೆ ಮಾತ್ರ ತನ್ನ ಜೀವನದಲ್ಲಿ ಸ್ಥಾನವನ್ನು ಕೊಡಬೇಕು, ಇದರ ಬಗ್ಗೆ ಸ್ವಲ್ಪವೂ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಕ್ಯಾಸೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net