ಆಕೆ ನಿಮ್ಮವಳಾಗಬೇಕೆ? ಹಾಗಿದ್ದರೆ ಡಾನ್ಸ್​ ಮಾಡಿ, ಏಳು ದಿನ ಅವಳನ್ನು ಕರಕೊಂಡು ಹೋಗಿ!

entha loka
Published on

ಆಫ್ರಿಕಾ: ತಮಗಿಷ್ಟವಾದ ಯುವತಿಯನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಕೆಲ ಯುವಕರು ಏನೆಲ್ಲಾ ಸರ್ಕಸ್​ ಮಾಡುತ್ತಾರೆ. ಆದರೆ ತನ್ನ ಮನದನ್ನೆಯ ಮನಸ್ಸನ್ನು ಕದಿಯಲು ವಿಫಲರಾಗಿಬಿಡುತ್ತಾರೆ. ತಾನು ಇಷ್ಟಪಟ್ಟಾಕೆಯನ್ನು ತನ್ನತ್ತ ಸೆಳೆದುಕೊಳ್ಳಲು ಕೆಲವೇ ಕೆಲವು ಯುವಕರು ಯಶಸ್ವಿಯಾಗುವುದುಂಟು.

ಹೇಗಪ್ಪಾ ಆಕೆಯನ್ನು ಆಕರ್ಷಿತಳನ್ನಾಗಿ ಮಾಡುವುದು ಎಂಬ ಚಿಂತೆಯಲ್ಲಿ ಯುವಕರು ಇದ್ದರೆ, ಇಲ್ಲೊಂದು ಕಡೆ, ವಿವಾಹಿತ ಪುರುಷರು, ಬೇರೊಬ್ಬ ವಿವಾಹಿತೆ ಜತೆ ಏಳು ದಿನ ಕಳೆಯಲು ಹಬ್ಬವೊಂದು ಅವಕಾಶ ಕಲ್ಪಿಸಿದೆ. ಅದೇ ಗುರ್​ಹೋರ್​ ಎಂಬ ಹಬ್ಬ.

ಇಲ್ಲಿ ಪುರುಷರು ಡಾನ್ಸ್ ಮಾಡಬೇಕು. ತಾನು ಇಷ್ಟಪಟ್ಟಾಕೆಯನ್ನು (ಆಕೆ ವಿವಾಹಿತೆ ಆಗಿರುವುದು ಕಡ್ಡಾಯ) ಆಕರ್ಷಿಸುವಂತೆ ಆತ ಡಾನ್ಸ್​ ಮಾಡಬೇಕು. ಒಂದು ವೇಳೆ ಅದೇನಾದ್ರೂ ಸಕ್ಸಸ್​ ಆಗಿ ಆಕೆ ಇವನತ್ತ ದೃಷ್ಟಿಬೀರಿದಳು ಎಂದರೆ ಮುಗಿಯಿತು. ಆಕೆ ಅವನ ಪಾಲು. ಅವಳನ್ನು ಒಂದು ವಾರ ತನ್ನ ಜತೆಗೆ ಕರೆದುಕೊಂಡು ಹೋಗಿ ಇರಿಸಿಕೊಳ್ಳಲು ಈತನಿಗೆ ಅನುಮತಿ ಸಿಕ್ಕಂತೆ!

ಹಾಗೆಂದು ಇಂಥದ್ದೊಂದು ಪದ್ಧತಿ ಭಾರತದಲ್ಲಿ ಖಂಡಿತವಾಗಿಯೂ ಇಲ್ಲ. ಇದು ಇರುವುದು ಆಫ್ರಿಕಾದ ವಾಡ್‍ಬೇಫಲ್ ಎಂಬ ಬುಡಕಟ್ಟು ಜನಾಂಗದಲ್ಲಿ. ವರ್ಷಕ್ಕೊಮ್ಮೆ ಗುರ್​ಹೋರ್ ಎಂಬ ಆಚರಣೆ ಅಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್​ ತಿಂಗಳಿನ ಚಳಿಯಲ್ಲಿ ಈ ಆಚರಣೆ ಶುರುವಾಗುತ್ತದೆ.

ಇದರ ಆಚರಣೆ ವೇಳೆ ಗಂಡಸರು ಮುಖಕ್ಕೆ ಮತ್ತು ತುಟಿಗೆ ಬಣ್ಣ ಬಳಿದುಕೊಂಡು ನೃತ್ಯ ಮಾಡುತ್ತಾರೆ. ಈ ನೃತ್ಯ ನೋಡಲು ವಿವಾಹಿತೆಯರಿಗೆ ಮಾತ್ರ ಅನುಮತಿಯಂತೆ. ಕಾರಣ ಇಷ್ಟೇ. ಗಂಡಸರು ನೃತ್ಯ ಮಾಡುವುದು ಈ ಹೆಂಗಸರನ್ನು ತಮ್ಮತ್ತ ಆಕರ್ಷಿಸಲು. ಯಾವ ವಿವಾಹಿತೆ ತನ್ನತ್ತ ಆಕರ್ಷಿತಳಾಗುತ್ತಾಳೋ, ಆಕೆಯನ್ನು ಆ ಗಂಡಸು ಕರೆದುಕೊಂಡು ಹೋಗಿ ಆಕೆಯ ಜತೆ ಏಳು ದಿನ ಸಂಸಾರ ನಡೆಸಲು ಅವಕಾಶವಿದೆ!

ಈ ಆಚರಣೆಯಿಂದ ಎಚ್‍ಐವಿ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ದೂರು ಕೇಳಿಬರುತ್ತಿರುವ ಕಾರಣ, ಇದನ್ನು ನಿಷೇಧ ಮಾಡಲು ಚಿಂತನೆ ನಡೆಯುತ್ತಿದೆಯಂತೆ. ಆದರೆ ಸೆಪ್ಟೆಂಬರ್​ನಲ್ಲಿ ಇದು ನಡೆಯಲಿರುವ ಕಾರಣ, ಈಗ ಅಲ್ಲಿ ಹಬ್ಬವೋ ಹಬ್ಬ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net