More

    ರೈತರ ವ್ಯಾಪಾರ ಸುಲಭ ಮಾಡುವ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಸಿಕ್ಕಿತು ಅಂಗೀಕಾರ

    ನವದೆಹಲಿ: ದ್ವಿದಳಧಾನ್ಯಗಳು, ಎಣ್ಣೆಕಾಳು, ಖಾದ್ಯತೈಲ, ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡುವ ‘ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆ’ಗೆ ಮಂಗಳವಾರ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ.

    ಸೆ.15ರಂದು ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ಈ ಮಸೂದೆಗೆ ರಾಜ್ಯಸಭೆಯಲ್ಲಿ ಇಂದು ಧ್ವನಿಮತದ ಅಂಗೀಕಾರ ದೊರೆಯಿತು. ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ಅವರ ವ್ಯಾಪಾರವನ್ನು ಸುಲಭ ಮಾಡುವ ಮಹತ್ವದ ಹೆಜ್ಜೆ ಇದು ಕೇಂದ್ರ ಹೇಳಿದೆ.

    ಇದರಿಂದಾಗಿ ಇನ್ನು ಮುಂದೆ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಸಾಧ್ಯವಾಗಿದೆ. ಸುಗ್ಗಿಯ ನಂತರ ಶೇಖರಣಾ ಸಾಮರ್ಥ್ಯ ಹೆಚ್ಚಿಗೆ ಇಡಲು ಸಾಧ್ಯವಿಲ್ಲದ ಕಾರಣ, ಬೆಳೆಗಳು ಹಾಳಾಗುವ ಸಾಧ್ಯತೆಗಳೇ ಹೆಚ್ಚು. ಆದರೆ ಈ ಹೊಸ ತಿದ್ದುಪಡಿ ಕಾನೂನಿನಿಂದಾಗಿ ಬೆಳೆಗಳ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಅನುವು ಮಾಡಿಕೊಡಲಿದೆ.

    ಇದನ್ನೂ ಓದಿ: ದೇಶದ ಮೊದಲ ಮೆಡ್ಸ್​ ಪಾರ್ಕ್​ ಕೇರಳದಲ್ಲಿ.. ಆರಂಭವಾಗಲಿದೆ ವೈದ್ಯಕೀಯ ಉಪಕರಣಗಳ ಉದ್ಯಾನ.

    ರಾಷ್ಟ್ರೀಯ ವಿಪತ್ತುಗಳು, ಬೆಲೆಗಳ ಏರಿಕೆ, ಬರಗಾಲದಂತಹ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಸರಕುಗಳ ಮೇಲೆ ಮಿತಿಯನ್ನು ವಿಧಿಸಲಾಗುವುದೇ ವಿನಾ ಉಳಿದ ಸಂದರ್ಭಗಳಲ್ಲಿ ರೈತರು ತಮ್ಮ ಬೆಳೆಗಳ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇದು ನೆರವಾಗಲಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ದನ್ವೆ ರೌಸಾಹೇಬ್ ದಾದರಾವ್ ಹೇಳಿದ್ದಾರೆ.

    ರೈತರು ತಮ್ಮ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗೆ ಎಲ್ಲಾದರೂ ಮಾರಾಟ ಮಾಡಬಹುದು. ರೈತರೇ ಎಲೆಕ್ಟ್ರಾನಿಕ್ ಪ್ಲಾಟ್ ಫಾರ್ಮ್ ಗಳ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡಬಹುದು. ಎಪಿಎಂಸಿಯಿಂದ ಹೊರಗೆ ಮಾರುವ ಯಾವುದೇ ಉತ್ಪನ್ನಗಳ ಮೇಲೆ ತೆರಿಗೆ ಹಾಕುವುದಿಲ್ಲ. ಒಂದು ದೇಶ, ಒಂದು ಮಾರುಕಟ್ಟೆ ಎಂಬ ದೂರದೃಷ್ಟಿಯೊಂದಿಗೆ ಭಾರತ ಮುಂದುವರಿಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

    ಶೂಟಿಂಗ್​ನಲ್ಲಿ ತಗುಲಿದ ಸೋಂಕು: ನಟಿ ಆಶಾಲತಾ ಕರೊನಾಕ್ಕೆ ಬಲಿ

    ಎಸ್​ಬಿಐ ಸಾಲಗಾರರಿಗೆ ಗುಡ್​ನ್ಯೂಸ್​: ಇಎಂಐಯಿಂದ ಎರಡು ವರ್ಷ ಮುಕ್ತಿ- ಷರತ್ತುಗಳು ಇಲ್ಲಿವೆ…

    ಒಂದೇ ರೂಪಾಯಿಯಲ್ಲಿ ಕರೊನಾ ಗೆದ್ದ 106 ವರ್ಷದ ಅಜ್ಜಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts