

ಒಟ್ಟಾವಾ: ಕರೊನಾ ಬಂದಾಗಿನಿಂದಲೂ ವರ್ಕ್ ಫ್ರಂ ಹೋಂ, ವರ್ಚುವಲ್ ಮೀಟಿಂಗ್ ಎಲ್ಲವೂ ಸಾಮಾನ್ಯವಾಗಿ ಬಿಟ್ಟಿವೆ. ಇದಾಗಲೇ ಈ ಆನ್ಲೈನ್ ಮೀಟಿಂಗ್ನಿಂದ ಆಗಿರುವ ಅನಾಹುತಗಳು ಅಷ್ಟಿಷ್ಟಲ್ಲ.
ಅಂಥದ್ದೇ ಒಂದು ಅನಾಹುತದ ಘಟನೆ ಇಟಲಿಯ ಒಟ್ಟಾವಾದಲ್ಲಿ ನಡೆದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿದ್ದು, ಸುದ್ದಿ ಭಯಂಕರವಾಗಿ ವೈರಲ್ ಆಗಿದೆ.
ಇದಕ್ಕೆ ಕಾರಣ ಸಂಸದನೊಬ್ಬ ಆನ್ಲೈನ್ ಮೀಟಿಂಗ್ ವೇಳೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು! ಹೌಸ್ ಆಫ್ ಕಾಮನ್ಸ್ ಜೂಮ್ ಕಾನ್ಫರೆನ್ಸ್ ಸಭೆ ವೇಳೆ ಸಂಸದ ಲಿಬರಲ್ ಸಂಸದ ವಿಲಿಯಂ ಅಮೊಸ್ ನಗ್ನವಾಗಿ ಕಾಣಿಸಿಕೊಂಡು ಎಲ್ಲರನ್ನೂ ಮುಜುಗರ ತರಿಸಿದ ಘಟನೆ ಇದಾಗಿದೆ.
ಮೀಟಿಂಗ್ನಲ್ಲಿ ಭಾಗವಹಿಸಲು ವಿಲಿಯಂ ಲ್ಯಾಪ್‌ಟಾಪ್ ಕ್ಯಾಮೆರಾ ಆನ್ ಮಾಡಿಟ್ಟಿದ್ದರು. ಆಗ ತಾನೇ ಅವರು ಜಾಗಿಂಗ್ ಮುಗಿಸಿ ಬಂದಿದ್ದರು. ಜಾಗಿಂಗ್ಗೆ ಹಾಕಿಕೊಂಡಿರುವ ಬಟ್ಟೆಯನ್ನು ಬದಲಾಯಿಸಿ ಮೀಟಿಂಗ್ ಅಟೆಂಡ್ ಮಾಡುವ ಬಟ್ಟೆ ಹಾಕಿಕೊಳ್ಳಲು ಬಟ್ಟೆ ತೆಗೆದಿದ್ದರು ಆದರೆ ಅದೇ ವೇಳೆ ಅರಿಯದೇ ಲ್ಯಾಪ್‌ಟಾಪ್ ಎದುರಿಗೇ ಬಂದುಬಿಟ್ಟರು.
ಅಲ್ಲಿದ್ದ ಕ್ಯಾಮೆರಾದಲ್ಲಿ ಅವರು ಬೆತ್ತಲೆಯಾಗಿರುವ ದೃಶ್ಯ ಕಾಣಿಸಿದೆ. ನಂತರ ತಿಳಿಯುತ್ತಿದ್ದಂತೆಯೇ ಖಾಸಗಿ ಅಂಗವನ್ನು ಕೈಯಿಂದ ಮುಚ್ಚಿಕೊಂಡರು ನಂತರ ಅವರು ಕ್ಷಮೆ ಕೋರಿದರೂ ಇದರ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.