More

    ಸಂಬಳ ಕಡಿತಕ್ಕೂ ಜಗ್ಗಲಿಲ್ಲ, ನೋಟಿಸ್​ಗೂ ಬಗ್ಗಲಿಲ್ಲ: ಡ್ರೈವರ್​, ಕಂಡಕ್ಟರ್​ ಸೇರಿ ಸಾರಿಗೆ ಸಿಬ್ಬಂದಿ ವಜಾ

    ಹುಬ್ಬಳ್ಳಿ: 6ನೇ ವೇತನ ಆಯೋಗದ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಒಂಬತ್ತು ದಿನಗಳಿಂದ ಸಾರಿಗೆ ಇಲಾಖೆ ಸಿಬ್ಬಂದಿ ಮುಷ್ಕರ ಕೈಗೊಂಡಿದ್ದಾರೆ. ಇವರಿಗೆ ಇದಾಗಲೇ ಹಲವಾರು ರೀತಿಯಲ್ಲಿ ಮನವೊಲಿಸುವ ಪ್ರಯತ್ನ ಮಾಡಿದರೂ, ಸಂಬಳ ಕಡಿತದ ಬೆದರಿಕೆಯೊಡ್ಡಿದರೂ ಮುಷ್ಕರ ಕೈಬಿಟ್ಟಿಲ್ಲ.

    ಇದನ್ನು ಗಂಭೀರವಾಗಿ ಪರಿಗಣಿಸಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿಯ 26 ಸಿಬ್ಬಂದಿಯನ್ನು ವಜಾ ಮಾಡಿದೆ. ಇವರೆಲ್ಲರೂ ಮುಷ್ಕರ ಆರಂಭದ ದಿನದಿಂದ ಕರ್ತವ್ಯಕ್ಕೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

    ಹುಬ್ಬಳ್ಳಿ ಗ್ರಾಮಾಂತರ ವಿಭಾಗದ 26 ತರಬೇತಿ ಸಿಬ್ಬಂದಿ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ. ಈ ಕುರಿತು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಆದೇಶ ಹೊರಡಿಸಿದ್ದಾರೆ.

    ಮುಷ್ಕರ ಕೈ ಬಿಟ್ಟು ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಇಲ್ಲದಿದ್ದರೆ ಸೇವೆಯಿಂದ ವಜಾ ಮಾಡುವುದಾಗಿ ಈ ಹಿಂದೆಯೇ ಷೋಕಾಸ್​ ನೋಟಿಸ್​ ನೀಡಲಾಗಿತ್ತು. ಆದರೆ ಅದನ್ನು ಕೇಳದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

    ಇವರಲ್ಲಿ 15 ಚಾಲಕರು, 8 ಚಾಲಕ ಕಂ ನಿರ್ವಾಹಕರು, ಇಬ್ಬರು ತಾಂತ್ರಿಕ ಸಿಬ್ಬಂದಿ ಮತ್ತು ಒಬ್ಬರು ಕಿರಿಯ ಸಹಾಯಕ ಸೇರಿದ್ದಾರೆ.

    ಯಾರಿಗೆ ವಯಸ್ಸಾಗಿರತ್ತೋ ಅವ್ರು ಸಾಯ್ಲೇಬೇಕಲ್ಲಾ? ಕರೊನಾದಿಂದ ಸತ್ರೆ ಏನ್​ ಮಾಡೋಕಾಗತ್ತೆ ಎಂದ ಸಚಿವ

    ಒಂದೇ ತಿಂಗಳಲ್ಲಿ ಒಬ್ಬಳನ್ನೇ 4 ಬಾರಿ ಮದ್ವೆಯಾದ- ಐದನೇ ಬಾರಿಗೆ ಸಿಕ್ಕಿಬಿದ್ದ! ಕಾರಣ ಕೇಳಿದ್ರೆ ಸುಸ್ತಾಗ್ತೀರಾ!

    ಪತ್ನಿಯನ್ನು ನೋಡಿದರೆ ಮೃತ ಪ್ರೇಯಸಿಯೇ ಕಾಣುತ್ತಾಳೆ: ಸಂಸಾರ ಮಾಡಲಾಗುತ್ತಿಲ್ಲ, ಏನು ಮಾಡಲಿ?

    ವಿಧಾನಸಭೆ ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್​ ಅಭ್ಯರ್ಥಿ ಸಾವು- ಬಲಿ ಪಡೆದ ಕರೊನಾ ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts