More

    ಒಂದೇ ಗಂಟೆಯಲ್ಲಿ ₹365 ಕೋಟಿ ದುಡಿಯುವ ಆಸೆಯೆ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಚಾಲೆಂಜ್​!

    ಕ್ಯಾಲಿಫೋರ್ನಿಯಾ: ಒಂದೇ ಗಂಟೆಗೆ ನೂರಾರು ಕೋಟಿ ರೂಪಾಯಿ ಒಡೆಯನಾಗುವುದಾದರೆ ಏನು ಬೇಕಾದರೂ ಮಾಡುವಿರಾ? ಎಂದು ಯಾರಾದರೂ ಪ್ರಶ್ನೆ ಕೇಳಿದರೆ, ಥಟ್ಟನೆ ಹಾಂ ಎಂದು ಹೇಳುವವರೇ ಹೆಚ್ಚು. ನೀವೂ ಹಾಗೆ ಹೇಳಿದ್ದೇ ಹೌದಾದರೆ ಇಲ್ಲೊಂದು ಚಾಲೆಂಜ್​ ನಿಮಗಿದೆ ನೋಡಿ.

    ಈ ಫೋಟೋ ನೋಡಿಯೇ ನಿಮಗೆ ಷಾಕ್​ ಆಗಿರಲಿಕ್ಕೆ ಸಾಕು ಅಥವಾ ಫೋಟೋ ನೋಡಿಯೇ ಇಲ್ಲಪ್ಪಾ ಇಲ್ಲ… ಸಾವಿರ ಕೋಟಿ ರೂಪಾಯಿ ಕೊಟ್ಟರೂ ಅದು ನನಗೆ ಬೇಡ ಎನ್ನಲಿಕ್ಕೂ ಸಾಕು. ಫೋಟೋ ನೋಡಿಯೇ ಹೀಗೆಂದುಕೊಂಡಿದ್ದರೆ ಒಮ್ಮೆ ಈ ಕೆಳಗಿರುವ ವಿಡಿಯೋನೂ ನೋಡಿಬಿಡಿ. ಎದೆ ಧಸಕ್ಕೆನ್ನದೇ ಇರಲಾರದು!

    ಇಂಥದ್ದೊಂದು ಭಯಾನಕ ಧೈರ್ಯಶಾಲಿಗಳ ಇರುವುದು ಕ್ಯಾಲಿಫೋರ್ನಿಯಾದ ಸರೀಸೃಪ ಮೃಗಾಲಯದಲ್ಲಿ. ಭಾರೀ ಗಾತ್ರದ, ವಿಷಪೂರಿತ ಹಾವುಗಳ ರಾಶಿ ಮಧ್ಯೆ ಯಾವುದೇ ಅಳುಕೂ ಇಲ್ಲದೇ ವ್ಯಕ್ತಿಯೊಬ್ಬ ಧೈರ್ಯದಿಂದ ಕುಳಿತುಕೊಂಡು ಮಾತನಾಡುತ್ತಿದ್ದಾನೆ.

    ಕಳೆದ ವರ್ಷದ ಈ ವಿಡಿಯೋ ಇದೀಗ ಮತ್ತೆ ಶೇರ್​ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಇಂಥದ್ದೊಂದು ಸಾಹಸಿ ಮೃಗಾಲಯದ ಸಂಸ್ಥಾಪಕ ಜೇ ಬ್ರೂಯರ್. ನೂರಾರು ಹಾವುಗಳ ಮಧ್ಯೆ ಕುಳಿತು ಆರಾಮಾಗಿ ಈತ ‘ನಾನು ಹಾವುಗಳ ಮಧ್ಯೆ ಸಿಲುಕಿಕೊಂಡಿದ್ದೇನೆ’ ಎಂದು ಹೇಳಿಕೊಳ್ಳುತ್ತಾನೆ.

    ಈ ವಿಡಿಯೋ ಅನ್ನು ಶೇರ್​ ಮಾಡಿರುವ ಟ್ವಿಟರ್​ ಖಾತೆದಾರರೊಬ್ಬರು ನೀವೂ ಏನಾದರೂ ಹೀಗೆಯೇ ಹಾವುಗಳ ಮಧ್ಯೆ ಕುಳಿತುಕೊಂಡರೆ ನಾನು 50 ಮಿಲಿಯನ್​ ಡಾಲರ್​ (ಸುಮಾರು 365 ಕೋಟಿ ರೂಪಾಯಿ) ನೀಡುವುದಾಗಿ ಚಾಲೆಂಜ್​ ಮಾಡಿದ್ದಾರೆ.  12 ಸೆಕೆಂಡ್ ಇರುವ ಈ ವೀಡಿಯೋ ನೋಡಿ ನೀವೂ ಡಿಸೈಡ್​ ಮಾಡಬಹುದು!

    ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ‘ಯದುವೀರ್​ ಒಡೆಯರ್’​ ಟ್ವೀಟ್​- ಆದರೆ ಅಸಲಿಯತ್ತೇ ಬೇರೆ!

    ಬಯಲಾಯ್ತು ಕರಾಳಮುಖ! ಪ್ರತಿಭಟನೆ ಹೆಸರಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯೋದು ಹೇಗೆ ಎಂದು ಪಾಠ ಮಾಡಿದ ‘ಪರಿಸರ ಹೋರಾಟಗಾರ್ತಿ’…

    ಪಾಕಿಸ್ತಾನಕ್ಕೆ ಮರ್ಮಾಘಾತ! ನಡೆಯಿತು ಇನ್ನೊಂದು ಸರ್ಜಿಕಲ್​ ಸ್ಟ್ರೈಕ್​- ಉಗ್ರರ ನೆಲೆ ಮೇಲೆ ಯಶಸ್ವಿ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts