More

    ಬಯಲಾಯ್ತು ಕರಾಳಮುಖ! ಪ್ರತಿಭಟನೆ ಹೆಸರಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯೋದು ಹೇಗೆ ಎಂದು ಪಾಠ ಮಾಡಿದ ‘ಪರಿಸರ ಹೋರಾಟಗಾರ್ತಿ’…

    ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ರೈತರ ಶಾಂತಿಯುತ ಪ್ರತಿಭಟನೆಗೆ ದೇಶದೊಳಗೆ ಹಾದಿತಪ್ಪಿಸುವವರು ಸಾಲದು ಎಂಬಂತೆ ವಿದೇಶದಿಂದಲೂ ಬರುತ್ತಿರುವ “ರೈತರು” ಒಂದೆಡೆಯಾದರೆ, ಹಿಂಸಾಚಾರ ನಡೆಸಲು ವಿದೇಶಗಳಿಂದ ಹಣದ ಹೊಳೆ ಹರಿದುಬರುತ್ತಿರುವುದು ಇದಾಗಲೇ ಬಹಿರಂಗವಾಗಿದೆ. ಇದರ ನಡುವೆಯೇ ಇದೀಗ ಪರಿಸರ ಹೋರಾಟಗಾರ್ತಿ ಎಂದು ಹೇಳಿಕೊಂಡು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಗ್ರೇಟಾ ಥನ್​ಬರ್ಗ್​ನ ಜಾಲತಾಣದ ಪೋಸ್ಟ್​ ಒಂದು ಭಾರಿ ವಿವಾದಕ್ಕೆ ಕಾರಣವಾಗಿದೆ.

    ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ಯಾವೆಲ್ಲಾ ರೀತಿಯಲ್ಲಿ ಪ್ರತಿಭಟನೆ ಮಾಡಬಹುದು ಎನ್ನುವ ಮಾಹಿತಿಗಳಿರುವ ಡಾಕ್ಯುಮೆಂಟ್‌ ಒಂದನ್ನು ಟ್ವೀಟ್‌ ಮಾಡಿದ್ದ ಗ್ರೇಟಾ, ತನ್ನ ಅಸಲಿ ಮುಖ ಬಯಲಾಗುತ್ತಿದ್ದಂತೆಯೇ ಅದನ್ನು ಡಿಲೀಟ್​ ಮಾಡಿದ್ದಾಳೆ!

    ಬಯಲಾಯ್ತು ಕರಾಳಮುಖ! ಪ್ರತಿಭಟನೆ ಹೆಸರಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯೋದು ಹೇಗೆ ಎಂದು ಪಾಠ ಮಾಡಿದ 'ಪರಿಸರ ಹೋರಾಟಗಾರ್ತಿ'...

    ಗಣರಾಜ್ಯೋತ್ಸವದ ದಿನ ಹಿಂಸಾಚಾರ ಹೆಚ್ಚುತ್ತಿದ್ದಂತೆಯೇ ಕೆಲವು ಕಡೆಗಳಲ್ಲಿ ಇಂಟರ್​ನೆಟ್​ ಸ್ಥಗಿತಗೊಳಿಸಲಾಗಿದ್ದು, ಇದರ ವಿರುದ್ಧ ಪ್ರತಿಭಟನಾ ಟ್ವೀಟ್​ ಮಾಡಿದ್ದ ಗ್ರೇಟಾ ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ರೈತರ ಬಗ್ಗೆ ಭಾರತ ಹೇಗೆಲ್ಲಾ ಕಾಳಜಿ ವಹಿಸಬೇಕು ಎಂದು ತನ್ನ ಕಾಳಜಿಯನ್ನು ಟ್ವಿಟರ್​ ಮೂಲಕ ಹೇಳಿಕೊಂಡಿದ್ದಳು.

    ಇದರ ಬೆನ್ನಲ್ಲೇ ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ರೈತರು ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ರಹಸ್ಯ ಗೂಗಲ್‌ ಡಾಕ್ಯುಮೆಂಟ್‌ ಅನ್ನು ಟ್ವೀಟ್‌ ಮಾಡಿದ್ದಾಳೆ. ನಂತರ ಇದರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ತಪ್ಪಿನ ಅರಿವಾಗಿ ಡಿಲೀಟ್‌ ಮಾಡಿದ್ದಾಳೆ. ಪೋಸ್ಟ್​ ಡಿಲೀಟ್​ ಆದರೂ ಇದರ ಸ್ಕ್ರೀನ್​ಷಾಟ್​ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

    ವಿಶ್ವದ ಮಾನವ ಇತಿಹಾಸದಲ್ಲಿ ನಡೆಯುವ ಅತಿದೊಡ್ಡ ಪ್ರತಿಭಟನೆಯಲ್ಲಿ ನೀವು ಭಾಗಿಯಾಗುತ್ತಿರಾ ಎನ್ನುವ ಪ್ರಶ್ನೆಯನ್ನು ಹೊತ್ತ ಈ ಡಾಕ್ಯುಮೆಂಟರಿಯಲ್ಲಿ ಭಾರತವನ್ನು ಬಿಜೆಪಿ- ಆರ್‌ಎಸ್‌ಎಸ್ ಫ್ಯಾಸಿಸ್ಟ್‌ ಪಕ್ಷ ಆಳುತ್ತಿದೆ. ಜನವರಿ 21 ರಿಂದ ಫೆಬ್ರವರಿ 26ವರವರೆಗೆ ಎಲ್ಲಿ, ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ವಿವರಗಳನ್ನು ನೀಡಲಾಗಿತ್ತು.

    ಬಯಲಾಯ್ತು ಕರಾಳಮುಖ! ಪ್ರತಿಭಟನೆ ಹೆಸರಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯೋದು ಹೇಗೆ ಎಂದು ಪಾಠ ಮಾಡಿದ 'ಪರಿಸರ ಹೋರಾಟಗಾರ್ತಿ'...

    ಮೊದಲು ನೀವು ಎಲ್ಲಿದ್ದೀರೋ ಅಲ್ಲಿ ಪ್ರತಿಭಟನೆ ನಡಿಸಿ, ಜ.23ರಿಂದ ಟ್ವಿಟ್ಟರ್‌ನಲ್ಲಿ ಪ್ರತಿಭಟಿಸಿ, ಟ್ವೀಟ್‌ ಮಾಡುವಾಗ ಭಾರತದ ಪ್ರಧಾನಿ, ಕೇಂದ್ರ ಕೃಷಿ ಸಚಿವ ನರೇಂದ್ರ ಥೋಮರ್‌, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವ ಹಣಕಾಸು ನಿಧಿ, ವಿಶ್ವ ಬ್ಯಾಂಕ್‌ ಟ್ವಿಟ್ಟರ್‌ ಖಾತೆಗೆ ಟ್ಯಾಗ್‌ ಮಾಡಿ, ಜ.26 ರಂದು ಭಾರತದ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಬೇಕು. ಬಳಿಕ ನಿಮ್ಮ ಸರ್ಕಾರದ ಪ್ರತಿನಿಧಿಗಳಿಗೆ ಮೇಲ್‌ ಮಾಡಿ ಭಾರತದ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳಬೇಕು. ಭಾರತ ಸರ್ಕಾರ ನಡೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಮಾಡಬೇಕು ಎನ್ನುವುದು ಸೇರಿದಂತೆ ಭಯಾನಕ ಅಂಶಗಳನ್ನು ಈ ಟ್ವಿಟರ್​ ಒಳಗೊಂಡಿತ್ತು.

    ಸಾಮಾಜಿಕ ಜಾಲತಾಣದಲ್ಲಿ #GretaThunbergExposed ಟ್ರೆಂಡಿಗ್‌ ಟಾಪಿಕ್‌ ಆಗಿದೆ.

    ‘ವೇಶ್ಯೆಯ ಸಹವಾಸ ಮಾಡಿದ್ರೇನು, ಅವನು ಗಂಡಸು ಕಣೆ… ಏನು ಬೇಕಾದ್ರೂ ಮಾಡ್ಬೋದು…’

    ಒಂದೆಡೆ ಪತ್ನಿ, ಇನ್ನೊಂದೆಡೆ ಮದುವೆಯಾಗಲು ಪ್ರೇಯಸಿ ಒತ್ತಾಯ- ಮೈಸೂರಿನಲ್ಲಿ ಬಿತ್ತು ಎರಡು ಹೆಣ!

    ಕೃಷಿ ಕಾಯ್ದೆಗೆ ಅಮೆರಿಕದ ನಿಲುವೇನು? ಮೊದಲ ಬಾರಿ ಹೇಳಿಕೆ ನೀಡಿದ ಅಧ್ಯಕ್ಷ ಬೈಡೆನ್​

    ಪ್ರಿಯಾಂಕಾ ಗಾಂಧಿ ಪ್ರಯಾಣದ ವೇಳೆ ವಾಹನಗಳ ಢಿಕ್ಕಿ- ಎಲ್ಲೆಡೆ ಆತಂಕದ ಛಾಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts